ದೇಶದ ಆರ್ಥಿಕತೆಗಾಗಿ ಸ್ವದೇಶಿ ವಸ್ತುಗಳ ಬಳಕೆ ಅಗತ್ಯ- ಶಾರದಾ ಪಾನಘಂಟಿ

Koppal  ಇನ್ನರ್ ವೀಲ್ ಕ್ಲಬ್ ಭಾಗ್ಯಾನಗರವು ಭಾಗ್ಯಾನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ವದೇಶಿ-ವಿದೇಶಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಪಾನಘಂಟಿಯವರು ದೇಶದ ಆರ್ಥಿಕತೆಯನ್ನು ಉಳಿಸುವುದು ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ, ಕೊರೋನಾ ಹಾವಳಿಯಿಂದ ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗುತ್ತಿದೆ. ಹಾಗಾಗಿ ದೇಶದ ಆರ್ಥಿಕತೆಗಾಗಿ ಸ್ವದೇಶಿ ಉತ್ಪನ್ನಗಳ ಬಳಕೆ ಅಗತ್ಯ ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಶೀಲಾ ಹಾಲ್ಕುರಿಕೆ ಇವರು ಸ್ವದೇಶಿ ಬಳಕೆಯಿಂದ ವ್ಯಕ್ತಿಯ ಆರೋಗ್ಯದ ಜೊತೆಗೆ ದೇಶದ ಆರೋಗ್ಯವನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸ್ವದೇಶಿ ಉತ್ಪನ್ನಗಳ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಿದರು. ವೇದಿಕೆಯ ಮೇಲೆ ಕಾರ್ಯದರ್ಶಿ ಸುನೀತ ಅಂಟಾಳಮರದ್, ಶಾಂತಾ ಗೌರಿಮಠ್, ನಿರ್ಮಲಾ ಪಾಟೀಲ್ ಹಾಗೂ ಇನ್ನರ್ ವೀಲ್ ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

Please follow and like us:
error