ದೇಶದ್ರೋಹಿಗಳ ಮಕ್ಕಳು,ಮೊಮ್ಮಕ್ಕಳು ಟಿಪ್ಪು ಜಯಂತಿ ವಿರೋಧಿಸುತ್ತಾರೆ- ಎಂ.ನಂಜುಂಡಸ್ವಾಮಿ

Koppal ಟಿಪ್ಪು ಸುಲ್ತಾನ್ ನೆನೆಯದಿದ್ದರೆ, ನಮ್ಮ ತಾಯ್ನಡನ್ನು ಮರೆತಂತೆ. ನಮ್ಮಿಂದ ದೂರ ಮಾಡಿಕೊಂಡಂತೆ. ಹುಲಿ ಮಲಗಿದರು ಹೆದುರುತ್ತಾರೆ. ಓಡಾಡಿದರೂ ಹೆದುರುತ್ತಾರೆ. ಅಂತಹ ಬಹದ್ದೂರ್ ಮೈಸೂರ ಹುಲಿ ಟಿಪ್ಪು ಎಂದು ಅಪರ ಪೊಲೀಸ್ ಆಯುಕ್ತ ಎಂ ನಂಜುಂಡ ಸ್ವಾಮಿ ಹೇಳಿದರು.

ಅವರು ಕೊಪ್ಪಳದ ಜಿಲ್ಲಾಡಳಿತ ದಿಂದ ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಹಜರತ್ ಟಿಪ್ಪು ಜಯಂತಿಯ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು. ಟಿಪ್ಪುವಿನ ವಿದ್ಯಾಭ್ಯಾಸಕ್ಕೆ ಎಲ್ಲಾ ಧರ್ಮದ ಗುರುಗಳನ್ನು ಅವರ ತಂದೆ ಹೈದರಲಿ ನೇಮಿಸುತ್ತಾರೆ. ಎಲ್ಲಾ ಧರ್ಮದ ಗುರುಗಳ ಆಶೀರ್ವಾದದಿಂದ ಬೆಳೆದ ವೀರ ಟಿಪ್ಪು. ತಂದೆ ಹೈದರ ಅಲಿಗೆ ಮಗ ಟಿಪ್ಪುವಿನ ಮೇಲೆ ಅಷ್ಟೊಂದು ಆಸಕ್ತಿ ಇತ್ತು. ಕನ್ನಡ ನಾಡಿನ ಜನರಿಗಾಗಿ, ಕನ್ನಡ ಭಾಷೆಗಾಗಿ ಹೋರಾಡಿದ ವ್ಯಕ್ತಿ. ಮೆಕ್ಕಾದಿಂದ ಕರ್ನಾಟಕಕ್ಕೆ ಬಂದ ತಲೆಮಾರಿನ ಸಂತತಿಯ ಪುತ್ರ ಟಿಪ್ಪು. ಕರ್ನಾಟಕದ ಎಲ್ಲಾ ಜಾತಿ ಧರ್ಮಗಳ ಸಮಾನತೆಯನ್ನು ಕಂಡ ಮಹಾನ್ ವ್ಯಕ್ತಿ ಟಿಪ್ಪು. ಟಿಪ್ಪು ಸುಲ್ತಾನ ಅವರ ಮುತ್ತಾತರಿಂದ ಟಿಪ್ಪುವಿನ ಕುಟುಂಬ ಕರ್ನಾಟಕದಲ್ಲಿ ಬದುಕಿದ್ದಾರೆ. ಅವರು ಕನ್ನಡಿಗರಲ್ಲ ಅಂತ ಹೇಳೋದು ಎಷ್ಟು ಸರಿ. ಇಂತಹ ಸಾಹಸಿ ಟಿಪ್ಪುವಿನ ಜಯಂತಿ ಆಚರಣೆ ಮಾಡಬಾರದು ಎನ್ನುವುದು ಸರಿಯಲ್ಲ. ಟಿಪ್ಪು ಸುಲ್ತಾನ್ ದನಕರುಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡ ವ್ಯಕ್ತಿ. ಅವುಗಳನ್ನು ನೋಡಿಕೊಳ್ಳುವುದಕ್ಕೆ ಗೋ ಶಾಲೆಯನ್ನು ಸ್ಥಾಪಿಸಿದ್ದರು. ಗೋಮಾತೆ ರಕ್ಷಕ ಟಿಪ್ಪು ಸುಲ್ತಾನ್. ಕೆಆರ್ ಎಸ್ ಡ್ಯಾಂ ನ ಸಣ್ಣ ಡ್ಯಾಂ ಕಟ್ಟಿದ್ದು, ಟಿಪ್ಪು. ಎಲ್ಲಾ ಧರ್ಮದವರನ್ನು ತನ್ನ ಆಸ್ಥಾನದಲ್ಲಿ ಇದ್ದರು.

ಮೈಸೂರಿನಲ್ಲಿರುವ ಜಮೀನುಗಳು ಕೆಲವೆ ಕೆಲವರ ಕೈಯಲ್ಲಿದ್ದವು.‌ಅವರನ್ನು ಬಗ್ಗು ಬಡೆದು ರೈತರಿಗೆ ನೀಡಿದ ವ್ಯಕ್ತಿ. ಕಾರಣ ಅಂದು ಪಾಳೆಗಾರಿಕೆ ಮಾಡಿದ ಇಂದಿನ ಜನಾಂಗಕ್ಕೆ ಇದು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.

ಟಿಪ್ಪು ದೊರೆಯಾಗಿದ್ದರೂ, ಸಣ್ಣ ಮನೆಯಲ್ಲಿ ಇದ್ದರು. ಇತರೆ ಅರಸರಂತೆ ವೈಭೋಗದಲ್ಲಿ ಜೀವನ ನಡೆಸುತ್ತಿರಲಿಲ್ಲ. ಟಿಪ್ಪು ಸುಲ್ತಾನ್ ಹೆಸರು ಎಲ್ಲಿಯವರೆಗೂ ನಾಲಿಗೆ ಮೇಲೆ ಇರುತ್ತೋ, ಅಲ್ಲಿಯವರೆಗೆ ಅಂದು ಟಿಪ್ಪುವಿಗೆ ಹೆದರುತ್ತಿದ್ದ ಇಂದಿನ ಸಂತತಿ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹೆದುರುತ್ತಲೇ ಇರುತ್ತಾರೆ. ಏಕೆಂದರೆ ಟಿಪ್ಪುವಿನ ಹೆಸರು ತೆಗೆದುಕೊಳ್ಳುವ ವ್ಯಕ್ತಿ ಟಿಪ್ಪುವಿನಂತೆ ವೀರ ಧೀರ ಯೋಧನಾದರೆ ತಮಗೆ ಉಳಿಗಾಲವಿಲ್ಲ ಅಂತ ಆತನ ಹೆಸರು ಹಾಳು ಮಾಡಲು ನೋಡುತ್ತಿದ್ದಾರೆ.

ಟಿಪ್ಪು ಜೀವನ ಎಂದರೆ ಯುದ್ಧಗಳಿಂದ ತುಂಬಿದ ಜೀವನ. ಅಲ್ಲದೆ ಬುದ್ದಿ, ಜ್ಞಾನದ ಬಲದಿಂದ ವ್ಯಾಪರ ವಹಿವಾಟು, ಉತ್ಪಾದನೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಮಾಡಿದ ಚಾಣಕ್ಷ. ಇಂತಹ ವ್ಯಕ್ತಿಯ ಪಕ್ಕದಲ್ಲಿ ಇರುವವರೆ ಪಿತೂರಿ ಮಾಡುತ್ತಾರೆ. ಬ್ರಿಟಿಷ್ ರ ಮುಂದೆ ಶರಣಾಗತಿಯಾಗಲು ಬಯಸಿದವರು ದೊಡ್ಡವರು ಅನಿಸಿಕೊಳ್ಳುತ್ತಿದ್ದಾರೆ. ಆದ್ರೆ ತನ್ನ ಸಾವಿನಲ್ಲೂ ಟಿಪ್ಪು ತನ್ನ ಖಡ್ಗವನ್ನು ಸಮರ್ಪಿಸದ ಅಂತಹ ವೀರ ಟಿಪ್ಪು. ದಿವಾನ ಪೂರ್ಣಯ್ಯ ಟಿಪ್ಪು ಮೇಲೆ ದಾಳಿ ಮಾಡುವಂತೆ ಪಿತೂರಿ ಮಾಡಿದ ವ್ಯಕ್ತಿ ಅಂತ ಇತಿಹಾಸ ಇದೆ. ೧೭೯೯ ರಲ್ಲಿ ಟಿಪ್ಪು ಸಾಯಲಿಲ್ಲ ಅಂದ್ರೆ, ಬ್ರಿಟಿಷ್ರು ೧೯೪೭ ರವರೆಗೆ ಈ ದೇಶಲ್ಲಿ ಆಡಳಿತ ಮಾಡುತ್ತಿರಲಿಲ್ಲ. ಟಿಪ್ಪು ಅಂತಹ ಅಪ್ಪಟ ಕನ್ನಡ ಪ್ರೇಮಿ. ಟಿಪ್ಪು ಸಾವಿಗೆ ಮೀರ ಸಾಧಿಕ್ ಕಾರಣ ಅಂತಾರೆ. ಆದ್ರೆ ದಿವಾನ್ ಪೂರ್ಣಯ್ಯ ಅಂತ ಹೇಳುವುದಿಲ್ಲ. ಶೃಂಗೇರಿ ಮಠವನ್ನು ಲೂಟಿಮಾಡಲು ಮರಾಠರು ಬಂದಾಗ ಟಿಪ್ಪು ಅವರನ್ನು ಓಡಿಸಲು ತನ್ನ ಸೈನ್ಯವನ್ನು ಕಳುಹಿಸುತ್ತಾನೆ. ತನ್ನ ಸುತ್ತಮುತ್ತ ಇರುವ ದೇವಾಲಯಗಳನ್ನು ಉಳಿಸಿಕೊಂಡ ಏಕೈಕ ಮಹಾವೀರ ಟಿಪ್ಪು. ಇಂಗ್ಲೆಂಡ್ ನಲ್ಲಿ ಮೆರಿ ಮ್ಯೂಸಿಯಂ ಅಲ್ಲಿ ಟಿಪ್ಪುವಿನ ಚರಿತ್ರೆಯ ಬಗ್ಗೆ ಬರೆದಿರುವ ವಸ್ತುಗಳಿವೆ. ಟಿಪ್ಪು ಸುಲ್ತಾನ್ ನ ಕನ್ನಡ ನಾಡೆ ನಿಜವಾದ ಕನ್ನಡ ನಾಡು ಅಷ್ಟೊಂದು ಹರಡಿಕೊಂಡಿತ್ತು. ಇಂದಿರುವ ನಾಡು ಕನ್ನಡ ನಾಡು ಅಲ್ಲ. ಮದ್ದನ್ನು ತಯಾರಿಸಿ ರಾಕೆಟ್ ಉಡಾವಣೆ ಮಾಡುವವರು ಟಿಪ್ಪುವಿನ ಆಸ್ಥಾನದಲ್ಲಿದ್ದರು. ಟಿಪ್ಪುವಿನ ರಾಕೆಟ್ ತಂತ್ರಜ್ಞಾನ ಬ್ರಿಟಿಷ್ ರ ಕೈಗೆ ಸಿಗಲಿಲ್ಲ ಅಂದ್ರೆ, ಮೊದಲನೇ ಹಾಗು ಎರಡನೇ ಯುದ್ಧ ನಡೆಯುತ್ತಿರಲಿಲ್ಲ.

ಅಮೇರಿಕಾದ ನಾಸದಲ್ಲಿ ಇಂದು ಟಿಪ್ಪುವಿಗೆ ಗೌರವ ಸಲ್ಲಿಸಲಾಗುತ್ತದೆ. ಆದ್ರೆ ನಮ್ಮ ಭಾರತದಲ್ಲಿ ಇದು ಇಲ್ಲ. ಟಿಪ್ಪು ಸಾಹಿತಿಗಳಿಗೆ, ಸಂಶೋಧಕರೆ ಕಥಾ ವಸ್ತು. ಆ ಕಾಲದಲ್ಲಿ ರೈತರು ತೆರೆಗೆ ಕಟ್ಟದಿದ್ದರೆ, ಅವರಿಗೆ ಬೆನ್ನು ತಟ್ಟಿ ಹಲಸಿನ ಗಿಡ ಮಾವಿನ ಗಿಡ ಬೆಳೆಯಲು ತಿಳಿಸುತ್ತಿದ್ದ. ರೈತರಿಗೆ ಶಿಕ್ಷೆ ನೀಡುತ್ತಿರಲಿಲ್ಲ. ಟಿಪ್ಪು ಸುಲ್ತಾನ್ ಪೇಂಟಿಂಗ್ ಗಳು ಆತನ ಇತಿಹಾಸ ಹೇಳುತ್ತವೆ. ಇತಿಹಾಸ ಎನ್ನುವುದು ಇತಿಹಾಸ. ಅದು ಯಾರದ್ದೇ ಆಗಲಿ. ಅದರಿಂದ ಒಳ್ಳೆಯದನ್ನು ತೆಗೆದುಕೊಂಡು ಕಲಿಬೇಕು. ಕೆಟ್ಟದನ್ನ ತೆಗೆದುಕೊಂಡು ಯುದ್ಧ ಮಾಡುವುದು ಸರಿಯಲ್ಲ. ವರ್ಷಕ್ಕೊಮ್ಮೆ ಧರ್ಮಕ್ಷೇತ್ರಗಳಿಗೆ ಹೇಗೆ ಹೋಗುತ್ತೇವೆಯೋ, ಹಾಗೆ ಟಿಪ್ಪು ಅಭಿಮಾನಿಗಳು ಆತ ಹುಟ್ಟಿದ ಸ್ಥಳಕ್ಕೆ, ಆಡಳಿತ ಮಾಡಿದ ಅರಮನೆ, ಮಡಿದ ಸ್ಥಳಗಳಿಗೆ ಹೋಗಬೇಕು. ಆತನ ಧೀರತ್ವ ಮತ್ತು ಶುರತ್ವ ಬರಲಿ ಅಂತ ನೆನೆಯಬೇಕು, ವ್ಯಾವಹರಿಕ ,ತಾಳ್ಮೆ, ವಿದ್ಯೆ, ಜ್ಞಾನ, ಓದು, ಧ್ಯೇಯ, ಕರುಣೆ, ಕೃಷಿ, ದೇಶ ಪ್ರೇಮ ಕಳಕಳಿ ಬರುವಂತೆ ನನೆಯಬೇಕು ಅಂತ ಎಂ ನಂಜುಡ ಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಎಸ್ಪಿ ರೇಣುಕಾ ಎಸ್ ಕುಮಾರ, ತಹಶೀಲ್ದಾರ್ ಮಜ್ಜಿಗಿ, ಎಡಿಸಿ ಸಿಡಿ ಗೀತಾ ಸೇರಿದಂತೆ ನಗರ ಸಭೆ ಸದಸ್ಯರು ಇನ್ನಿತರ ಮುಸ್ಲಿಂ ಸಮುದಾಯದ ಹಿರಿಯರು ಭಾಗವಹಿಸಿದ್ದರು.

Related posts