ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಿ – ಬಾಹುಬಲಿ ಅಕ್ಕಳ್ಳಿ

-ಶಾಲಾ ಕ್ರೀಡಾಕೂಟ ಸಮಾರಂಭ
ಕೊಪ್ಪಳ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ದೇಶಕ್ಕೆ ನಿಮ್ಮದೇ ಆದ ಕೊಡುಗೆ ನೀಡಿ ಎಂದು ಪ್ರೋಬೆಷನರಿ ಆರ್‌ಎಸ್‌ಐ ಬಾಹುಬಲಿ ಅಕ್ಕಳ್ಳಿ ಹೇಳಿದರು.ನಗರದ ಮಾಸ್ತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಶಾಲಾ ಕ್ರೀಡಾಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಮಕ್ಕಳಲ್ಲಿ ಶಿಸ್ತು ಮತ್ತು ಸಮಯ ಪ್ರಜ್ಞೆ ಬೆಳೆಯುತ್ತದೆ. ಈ ಶಾಲೆಯು ತುಂಬಾ ಶಿಸ್ತು ಸ್ವಚ್ಛತೆಯಿಂದ ಕೂಡಿದ್ದು, ವಿದ್ಯಾರ್ಥಿಗಳು ಕ್ರೀಯಾಶೀಲತೆ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಎಲ್ಲರೂ ಪಾಲ್ಗೊಂಡು ದೇಶಕ್ಕೆ ನಿಮ್ಮದೇ ಆದ ಕ್ರೀಡಾ ಸೇವೆ ಸಲ್ಲಿಸಿ ಎಂದು ಮಕ್ಕಳಿಗೆ ತಿಳಿಸಿದರು.
ಮಕ್ಕಳು ಕ್ರೀಡೆಗಳಿಂದ ಆರೋಗ್ಯ ಸುಧಾರಿಸಿಕೊಳ್ಳಬೇಕು. ಹಲವಾರು ರೀತಿಯ ಕ್ರೀಡೆಗಳಲ್ಲಿ ಭಾಗವಹಿಸಿ, ಕ್ರೀಡಾಸ್ಪೂರ್ತಿ ಮೆರೆಯಬೇಕು ಎಂದ ಬಳಿಕ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹುಲಗಪ್ಪ ಕಟ್ಟಿಮನಿ ಮಾತನಾಡಿ, ಮಕ್ಕಳು ದಿನನಿತ್ಯದ ಜೀವನದಲ್ಲಿ ಸ್ವಚ್ಛತೆ, ಓದು, ಬರಹದೊಂದಿಗೆ ದಿನಾಲೂ ಕ್ರೀಡೆಗಳ ಜೊತೆ ಸಮಯ ಕಳೆದರೇ ಆರೋಗ್ಯ ವೃದ್ದಿಯಾಗುತ್ತದೆ. ನಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡಗೊಳ್ಳಲು ಕ್ರೀಡೆಗಳು ನಮಗೆ ಅವಶ್ಯಕವಾಗಿವೆ.
ಕ್ರೀಡಾ ಜಗತ್ತಿನಲ್ಲಿ ಹಲವಾರು ರೀತಿಯ ಸಾಧಕರ ಸಾಧನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಾಹಿತಿ ಮಹಾಂತೇಶ ಮಲ್ಲನಗೌಡರ, ಶಾಲಾ ಕಾರ್ಯದರ್ಶಿ ಪರಶುರಾಮ ಮ್ಯಾಳಿ
ಸೇರಿ ವಿದ್ಯಾರ್ಥಿಗಳಿದ್ದರು. ಶಿಕ್ಷಕಿ ಶಾಹೀಸ್ತಾ ನಿರೂಪಿಸಿದರು. ಶಿಕ್ಷಕಿ ಶಿಲ್ಲಾಶ್ರೀ ಸ್ವಾಗತಿಸಿದರು. ಶಿಕ್ಷಕಿ ಶಗುಪ್ತಾ ವಂದಿಸಿದರು.