ದೇವಸ್ಥಾನ ಸಮಿತಿಗೆ ಹಕ್ಕಾಪಕ್ಕಿ ಅಧ್ಯಕ್ಷ


ಕೊಪ್ಪಳ: ನಗರದ ಹಟಗಾರ ಪೇಟೆಯಲ್ಲಿರುವ ಶ್ರೀ ಹನುಮಾನ್ ಸೇವಾ ಟ್ರಸ್ಟ್‌ಗೆ ಬಿಜೆಪಿಯ ಯುವನಾಯಕ ಶಿವಕುಮಾರ ಹಕ್ಕಾಪಕ್ಕಿ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಗವಿಸಿದ್ದಪ್ಪ ಚಿನ್ನೂರ್ ಅವರು ಶಿವಕುಮಾರ ನೇಮಕವನ್ನು ಸೂಚಿಸಿದರು. ಅದನ್ನು ಇಡೀ ಸಭೆ ಒಮ್ಮತದಿಂದ ಅನುಮೋದಿಸಿತು. ನಂತರ ಟ್ರಸ್ಟ್‌ನ ಇತರ ಪದಾಧಿಕಾರಿಗಳೆಲ್ಲರನ್ನೂ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಗವಿಸಿದ್ದಪ್ಪ ಚಿನ್ನೂರ್, ಉಪಾಧ್ಯಕ್ಷರಾಗಿ ಬಸವರಾಜ ಮುತ್ತಾಳ ಹಾಗೂ ಮಹೇಶ ಅಂಗಡಿ, ಖಜಾಂಚಿಯಾಗಿ ಮಲ್ಲಿಕಾರ್ಜುನ ಸಜ್ಜನ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಾಣೇಶ ಮಹೇಂದ್ರಕರ್, ಸಹಕಾರ್ಯದರ್ಶಿಗಳಾಗಿ ಶ್ರೀಶೈಲಪ್ಪ ಪಲ್ಲೇದ ಮತ್ತು ರವಿಸಾ ಬಾಕಳೆ ಹಾಗೂ ಸದಸ್ಯರಾಗಿ ಕಿರಣಕುಮಾರ ದಿವಟರ, ಪರಸಪ್ಪ ಭುಜಂಗರ, ಮಾರುತಿ ಹದ್ದಿನ, ಗೋಪಾಲಕೃಷ್ಣ ಶೆಟ್ಟರ್ ಹಾಗೂ ನಿಂಗಪ್ಪ ಭೋವಿ ಆಯ್ಕೆಯಾಗಿದ್ದಾರೆ.

Please follow and like us:
error