ದೆಹಲಿ ಸಭೆಗೆ ಹೋಗಿಬಂದವರಲ್ಲಿ ಯಾರಲ್ಲೂ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ: ಪಿ. ಸುನೀಲ್ ಕುಮಾರ್


ಕೊಪ್ಪಳ :  ದೆಹಲಿಯ ಹಜರತ್ ನಿಜಾಮುದ್ದೀನ್‌ನಲ್ಲಿ ಆಯೋಜಿಸಲಾಗಿದ್ದ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ ಜಿಲ್ಲೆಯ 13 ಜನರಲ್ಲಿ ಯಾರಲ್ಲೂ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ 13 ಜನರು ಭಾಗವಹಿಸಿದ್ದರು. ಅವರಲ್ಲಿ ಒಬ್ಬರು ಫೆಬ್ರವರಿ 13 ರಂದು ಹಾಗೂ ಉಳಿದ 12 ಜನರು ಮಾರ್ಚ್ 10 ರಂದು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದು ಕಂಡುಬAದಿದೆ. ಇವರೆಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾರಲ್ಲೂ ಕೊರೊನಾ ಲಕ್ಷಣ ಕಂಡುಬAದಿರುವುದಿಲ್ಲ. ಇವರು ಜಿಲ್ಲೆಗೆ ಆಗಮಿಸಿ 14 ದಿನಗಳು ಗತಿಸಿದ್ದು, ಇನ್ನೂ 14 ದಿನಗಳವರೆಗೆ ಅಂದರೆ ಒಟ್ಟು 28 ದಿನಗಳವರೆಗೆ ಗೃಹ ನಿರ್ಬಂಧನ ಮಾಡಲಾಗಿದೆ ಎಂದು  ತಿಳಿಸಿದ್ದಾರೆ.

Please follow and like us:
error