ದುಷ್ಚಟಗಳಿಂದ ದೂರವಿರುವಂತೆ ಯುವಕರಿಗೆ ಹಿರಿಯ ಸಿವಿಲ್ ನ್ಯಾಯಧೀಶರ ಕರೆ

ಟಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಧೀಶರು, ಕೊಪ್ಪಳ

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಟಿ. ಶ್ರೀನಿವಾಸ, ಹಿರಿಯ ಸಿವಿಲ್ ನ್ಯಾಯಧೀಶರು, ಕೊಪ್ಪಳ ಇವರು ಯುವಜನತೆಗೆ ಮಾದಕ ವ್ಯಸನಗಳಿಂದ ದೂರವಿರಬೇಕು. ವ್ಯಸನಿಗಳಾದರೆ ಯುವಕರು ಮಾನಸಿಕ & ದೈಹಿಕ ಅಸ್ವಸ್ಥತೆಯಾಗುತ್ತದೆ. ತಿಳಿದೂ ತಿಳಿಯದೋ ಜೀವನದಲ್ಲಿ ಮಾಡಿದ ಸಣ್ಣ ತಪ್ಪಿನಿಂದ ಮುಂದೆ ಬಹುದೊಡ್ಡ ಬೆಲೆ ತೆತ್ತಬೇಕಾಗುತ್ತದೆ ಎಂದು ತಿಳಿಸಿದರು. ಕಾನೂನಿನ ಅರಿವು ಹೊಂದುವುದು ಎಲ್ಲರ ಕರ್ತವ್ಯವಾಗಿದೆ. ಜಾಗೃತ ಜೀವನ ನಡೆಸುವದು ಯುವಕರ ಆದ್ಯತೆಯಾಗಿರಬೇಕು.
ಮುಖ್ಯ ಅತಿಥಿಗಳಾಗಿ ಆಗಮಿಸಿದ  ಆಸಿಫ ಅಲಿ, ಜಿಲ್ಲಾ ಸರಕಾರಿ ವಕೀಲರು ಮಾತನಾಡುತ್ತ ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಿಗಳಾಗದೇ ಆತ್ಮ ವಿಶ್ವಾಸದಿಂದ ಮತ್ತು ಸಕರಾತ್ಮಕ ವಿಚಾರಗಳಿಂದ ಸ್ವತಂತ್ರವಾಗಿ ಬದುಕುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇನ್ನೋರ್ವ ಅತಿಥಿ  ಹನುಮಂತರಾವ್, ವಕೀಲರು ಯುವಜನತೆಯಲ್ಲಿ ರ‍್ಯಾಗಿಂಗ್ ವಿಷಯದ ಕುರಿತು ಮಾತನಾಡುತ್ತ ವಿಭಿನ್ನ ಸ್ವರೂಪದ ರ‍್ಯಾಗಿಂಗಗಳನ್ನು ಉಲ್ಲೇಖಿಸುತ್ತ ಇದರ ನಿಯಂತ್ರಣಕ್ಕಾಗಿ ಕಾನೂನು ತಿಳುವಳಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತ, ಸಂಸ್ಕಾರಯುತ ವಿದ್ಯಾರ್ಥಿ ಜೀವನವನ್ನು ಪೊರೈಸಲು ಕರೆ ನೀಡಿದರು.
ಈ ಸಮಾರಂಭದಲ್ಲಿ ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ನರರೋಗ ತಜ್ಞರಾದ ಡಾ|| ಗೀತಾ ಇವರು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಆಗುವ ವಿವಿಧ ರೀತಿಯ ರ‍್ಯಾಗಿಂಗ್ ಕ್ರಿಯೆಗಳನ್ನು ವಿದ್ಯಾರ್ಥಿಗಳ ಗೌರವದ ಮೇಲೆ ಆಗುವ ಕ್ರಿಯೆ ಎಂದು ಅರ್ಥೈಸಿ, ತಮ್ಮ ಶಾಲಾ ದಿನಗಳ ಅವಧಿಯಲ್ಲಿನ ರ‍್ಯಾಂಗಿಂಗ್ ವಿಷಯಗಳನ್ನು ಮೆಲಕು ಹಾಕುತ್ತ ರ‍್ಯಾಂಗಿಂಗ್ ಚಟುವಟಿಕೆಗಳಿಂದ ವಿದ್ಯಾರ್ಥಿಗಳು ಜಾಗೃತರಾಗಿರಲು ಮತ್ತು ಸಂಬಂಧಪಟ್ಟ ಶಿಕ್ಷಕರನ್ನು ಇಲ್ಲವೇ ಸಂಸ್ಥೆಯ ಮುಖ್ಯಸ್ಥರನ್ನು ಅಥವಾ ಪೋಲಿಸರನ್ನು ರಕ್ಷಣೆಗಾಗಿ ಸಂಪರ್ಕಿಸುವಂತೆ ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ.ಎಂ.ಎಸ್.ದಾದ್ಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾರ್ಥನೆ ಕು.ಗೌರಮ್ಮ ಕುಂಬಾರ, ಸ್ವಾಗತ, ಪ್ರಸ್ತಾವನೆ ಡಾ.ಜೆ.ಎಸ್.ಪಾಟೀಲ, ನಿರೂಪಣೆ ಡಾ. ದಯಾನಂದ ಸಾಳುಂಕೆ ಹಾಗೂ ವಂದನಾರ್ಪಣೆ ಡಾ.ಬಸವರಾಜ ಪೂಜಾರ ನಿರ್ವಹಿಸಿದರು.

Please follow and like us:
error