ದಾಳಿ ಮಾಡಿದ ನರಿಯನ್ನು ಕೊಂದ ರೈತ

ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ನರಿ ದಾಳಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದಲ್ಲಿ ನರಿ ದಾಳಿ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ರೈತನೇ ನರಿಯನ್ನು ಕೊಂದಿದ್ದಾನೆ. ಶೇಖರಪ್ಪ ಎಂಬ ವ್ಯಕ್ತಿ ಮೇಲೆ ನರಿ ದಾಳಿ ಮಾಡಿದ್ದು, ತೋಟದಲ್ಲಿ ಮೆಣಸಿನಕಾಯಿ ಸಸಿಗೆ ನೀರು ಬಿಡುವಾಗ ಈ ದಾಳಿ ನಡೆದಿದೆ. ಇನ್ನು

ದಾಳಿಯಿಂದ ತಪ್ಪಿಸಿಕೊಳ್ಳಲು ಶೇಖರಪ್ಪನ ನರಿಯನ್ನು ಕತ್ತು ತಿರುವಿ ಸಾಯಿಸಿದ್ದಾನೆ. ಇನ್ನು ಶೇಖರಪ್ಪನ ಕಾಲುಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ನರಿಗೆ ಹುಚ್ಚು ಹಿಡಿದ ಹಿನ್ನಲೆಯಲ್ಲಿ ನರಿ ದಾಳಿ ಮಾಡಿದೆ ಎನ್ನುವ ಮಾತುಗಳು ಕೇಳಿಬ ಂದಿದೆ

Please follow and like us:

Related posts