ದಾಖಲಾಗಿರುವ ಮಕ್ಕಳ ಪ್ರಕರಣಗಳನ್ನು ಸರ್ಮಪಕವಾಗಿ ನಿರ್ವಹಿಸಿ : ಸೋನಿ ಕುಟ್ಟಿ ಜಾರ್ಜ

ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಹಾಗೂ ಅಧಿಕಾರಿಗಳಿಗೆ ತರಬೇತಿ

ಕೊಪ್ಪಳ ಅ.  ): ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲಾಗಿರುವ ಮಕ್ಕಳ ಪ್ರಕರಣಗಳನ್ನು ಸರ್ಮಪಕವಾಗಿ ನಿರ್ವಹಿಸಿ ಎಂದು ದಕ್ಷಿಣ ಭಾರತ ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆ, ಹೈದ್ರಾಬಾದ್‌ನ ಮಕ್ಕಳ ತಜ್ಞರಾದ ಸೋನಿ ಕುಟ್ಟಿ ಜಾರ್ಜ ಅವರು ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್- ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಇವರ ಸಹಯೋಗದಲ್ಲಿ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರಡಿಯಲ್ಲಿ ನೋಂದಾಯಿತವಾದ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳಿಗೆ ಮಕ್ಕಳ ಪ್ರಕರಣಗಳ ನಿರ್ವಹಣೆ ಕುರಿತು ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಸೋಮವಾರದಂದು ಆಯೋಜಿಸಲಾದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರ ಮುಖ್ಯ ಉದ್ದೇಶ ಏನೆಂದರೆ ಕಾನೂನಿನೂಡನೆ ಸಂಘರ್ಷದಲ್ಲಿರುವ ಮಕ್ಕಳ ಮತ್ತು ಆರೈಕೆ ಮತ್ತು ಪೋಷಣೆ ಅವಶ್ಯವಿರುವ ಮಕ್ಕಳ ಪುನರವಸತಿಯನ್ನು ಕಲ್ಪಿಸುವದರೊಂದಿಗೆ ಅವರಗಳು ಹಕ್ಕುಗಳನ್ನು ಎತ್ತಿಹಿಡಿದು, ಘನತೆ ಮತ್ತು ಗೌರವವನ್ನು ಒದಗಿಸಿಕೊಡುವದಾಗಿದೆ. ಪಾಲನಾ ಸಂಸ್ಥೆಗಳಲ್ಲಿ ನಿವಾಸಿ ಮಕ್ಕಳಿಗೆ ಈ ಕಾಯ್ದೆಯಡಿಯಲ್ಲಿ ನಿರೂಪಿತವಾದ ಕನಿಷ್ಠ ಗುಣಮಟ್ಟದ ಸೇವೆಗಳನ್ನು ಮಕ್ಕಳ ಪಾಲನಾ ಕೇಂದ್ರಗಗಳಲ್ಲಿ ಖಾತರಿಪಡಿಸುವದು ಕಡ್ಡಾಯವಾಗಿದ್ದು, ಅದನ್ನು ಸರಕಾರಗಳು ಖಾತರಿಪಡಿಸುವದು ಅತ್ಯವಶ್ಯಕವೆಂದು ಮಾನ್ಯ ಸರ್ವೋಚ್ಛ ನ್ಯಾಯಾಲದವು ರಿಟ್ ಸಂಖ್ಯೆ ೧೦೨/೨೦೧೨ರ ವಿಚಾರಣೆ ಸಂದರ್ಭದಲ್ಲಿ ನಿರ್ದೇಶಿಸಿದೆ. ಅದರನ್ವಯ ಮೊದಲ ಹಂತವಾಗಿ ರಾಜ್ಯದಲ್ಲಿರುವ ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರುಗಳಿಗೆ ಹಾಗೂ ಅಧಿಕಾರಿಗಳಿಗೆ ಸಾರ್ಮಥ್ಯಾಭಿವೃದ್ಧಿ ಕಾರ್ಯಗಾರವನ್ನು ಆಯೋಜಿಸಿ ಸಾರ್ಮಥ್ಯವನ್ನು ವೃದ್ಧಿಸಲಾಗುತ್ತಿದೆ. ಆದ್ದರಿಂದ ಈ ಕಾರ್ಯಾಗಾರದಲ್ಲಿ ತಾವುಗಳು ಸಕ್ರೀಯವಾಗಿ ಭಾಗವಹಿಸಿ ತರಬೇತಿ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವದರೊಂದಿಗೆ, ಪಾಲನಾ ಸಂಸ್ಥೆಗಳಲ್ಲಿ ದಾಖಲಾಗಿರುವ ಮಕ್ಕಳ ಪ್ರಕರಣಗಳನ್ನು ಸರ್ಮಪಕವಾಗಿ ನಿರ್ವಹಿಸಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವದರೊಂದಿಗೆ ಮಗುವನ್ನು ಕುಟುಂಬದೊಂದಿಗೆ ಪುನರಸೇರ್ಪಡೆಗೊಳಿಸುವ ಹೊಣೆ ನಿಮ್ಮ ಮೇಲಿದೆ ಎಂದು ದಕ್ಷಿಣ ಭಾರತ ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆ, ಹೈದ್ರಾಬಾದ್‌ನ ಮಕ್ಕಳ ತಜ್ಞರಾದ ಸೋನಿ ಕುಟ್ಟಿ ಜಾರ್ಜ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಈರಣ್ಣ ಪಾಂಚಾಳ ಅವರು ಮಾತನಾಡಿ, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-೨೦೧೫ರ ಕಲಂ ೪೧ರನ್ವಯ ಮಕ್ಕಳ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪೋಷಣೆಗಾಗಿ ದಾಖಲಿಸಿಕೊಂಡಿರುವ ಸರಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳ ಕೇಂದ್ರಗಳು ಅದು ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಯಾಗಲಿ ಅಥವಾ ಅನುದಾನರಹಿತ ಸಂಸ್ಥೆಯಾಗಿರಲಿ ಸಹ ಕಡ್ಡಾಯವಾಗಿ ನೋಂದಾಯಿಸ ಬೇಕಾಗಿರುತ್ತದೆ. ನೋಂದಾಣೆಯಾಗದೇ ಮಕ್ಕಳನ್ನು ಸಂಸ್ಥೆಯಲ್ಲಿ ದಾಖಲಿಸಿಕೊಂಡಲ್ಲಿ, ಈ ಕಾಯ್ದೆಯ ಕಲಂ ೪೨ರಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವರ್ಷ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗೆ ಕಡಿಮೆಯಿಲ್ಲದಂತೆ ದಂಡವನ್ನು ವಿಧಿಸಬಹುದಾಗಿದೆ. ಕೇವಲ ನೋಂದಾಣೆಯಾಗುವದಲ್ಲದೇ ಕಾಯ್ದೆಯಡಿಯಲ್ಲಿ ನಿರೂಪಿತವಾದ ಗುಣಮಟ್ಟದ ಸೇವೆಯನ್ನು ನೀಡುವದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಲಾಗುವದೆಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ ಮಾತನಾಡಿ, ಮಕ್ಕಳಿಗೆ ಕೇವ ವಸತಿ ಮತ್ತು ಭೋಜನ ನೀಡುವದು ಮಾತ್ರ ಪಾಲನಾ ಕೇಂದ್ರದ ಜವಾಬ್ದಾರಿಯಲ್ಲ, ಬದಲಾಗಿ ಆ ಮಗು ಸಂಕಷ್ಠ ಪರಸ್ಥಿತಿಗೆ ಸಿಲುಕಲು ಕಾರಣವನ್ನು ಪತ್ತೆ ಹಚ್ಚಿ, ಅದರಿಂದ ಮಗುವಿನ ಮೇಲಾಗಿರುವ ದುಷ್ಫರಿಣಾಮಗಳಿಂದ ಮಗುವನ್ನು ಹೊರತರುವುದಲ್ಲದೇ ಕುಟುಂಬದೊಂದಿಗೆ ಪುನರಮೀಲಿನಗೊಳಿಸಿ ಪುನಃ ಮಗುವನ್ನು ಮುಖ್ಯವಾಹಿನಿಗೆ ತರುವದಾಗಿದೆ. ಮಕ್ಕಳ ಪಾಲನಾ ಸಂಸ್ಥೆಗಳ ಮುಖ್ಯಸ್ಥರಿಗೆ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಿಸ್ಟರ್ ಡುಲ್ಸಿನ ಕ್ರಾಸ್ಟಾರವರು “ಪ್ರಕರಣ ನಿರ್ವಹಣೆಯ” ಬಗ್ಗೆ, ರವಿಕುಮಾರ ಪವಾರ ಅವರು “ಸಾಮಾಜಿಕ ತನಿಖಾ ವರದಿ” ಕುರಿತು ಮತ್ತು ವೀರಭದ್ರಪ್ಪ ಅವರು “ವೈಯಕ್ತಿಕ ಪಾಲನಾ ಯೋಜನೆಯ” ಬಗ್ಗೆ, ರಘುವರ್ಮ ಅವರು “ದಾಖಲಾತಿ ನಿರ್ವಹಣೆ” ಕುರಿತು ಮಾಹಿತಿಯನ್ನು ನೀಡಿದರು. ಜಿಲ್ಲೆಯಲ್ಲಿ ನೊಂದಾಯಿತವಾಗಿರುವ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error