ದಸರ ಕವಿಗೋಷ್ಠಿ ,ಶರಣು ವಿಶ್ವವಚನ ಫೌಂಡೇಶನ್ ಉದ್ಘಾಟನೆ

koppal  ಶರಣು ವಿಶ್ವವಚನ ಫೌಂಡೇಶನ್ ಕೊಪ್ಪಳ ತಾಲ್ಳೂಕ ಘಟಕದ ಉದ್ಘಾಟನೆ ಕಾರ್ಯಕ್ರಮ ಹಾಗೂ ದಸರ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು .‌ಉದ್ಘಾಟಕರಾಗಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಸಿ. ಬಿ.ಚಿಲ್ಕರಾಗಿಯವರು ಕಾರ್ಯಕ್ರಮ ಉದ್ಘಾಟಿಸಿ ವಚನಗಳಲ್ಲಿ ಲಿಂಗ ವರ್ಣ ವರ್ಗ ಭೇದಗಳಿರದೇ ಸರ್ವ ಸಮಾನತೆಯನ್ನು ಕಾಣಬಹುದು ಎಂದರು.
ಪ್ರಾಸ್ತಾವಿಕವಾಗಿ ಶ್ರೀಮತಿ ಅರುಣನರೇಂದ್ರರವರು ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಶರಣು ವಿಶ್ವವಚನ ಫೌಂಡೇಶನ್ ನ ತಾಲೂಕು ಘಟಕದ ಅದ್ಯಕ್ಷರಾದ ಶ್ರೀಮತಿ ಅನಸೂಯ ಜಹಗೀರದಾರ ವಹಿಸಿದ್ದರು. ದಸರಾ ಕವಿಗೋಷ್ಠಿಯ ಅದ್ಯಕ್ಷತೆಯನ್ನು ಸಾಹಿತಿ ಮಹಂತೇಶ ಮಲ್ಲನಗೌಡರ್ ವಹಿಸಿದ್ದರು..ಮುಖ್ಯ ಅತಿಥಿಗಳಾಗಿ ಉಪಪ್ರಾಚಾರ್ಯರಾದ ಶ್ರೀಮತಿ ಜಿ. ಸರಿತಾ ಹಾಗು ಹಿರಿಯ ಸಾಹಿತಿ ಶಾಂತಾದೇವಿ ಹಿರೇಮಠ ಸ್ಥಾನವಹಿಸಿಕೊಂಡಿದ್ದರು.ಶಾಲಾ ಕಾಲೇಜು ಮಕ್ಕಳಿಗೆ ವಚನಕಂಠಪಾಠ ಸ್ಪರ್ದೆ ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಪುಸ್ತಕ ಹಾಗು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಸಂಕನಗೌಡರ್ ಕಾರ್ಯಕ್ರಮ ನಿರ್ವಹಿಸಿದರು. ಬಾಲಕಿಯರ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಾದ ವಿಶಾಲಾಕ್ಷಿ ಮತ್ತು ಸುಶ್ಮಿತ ಅವರು ವಚನದೊಂದಿಗೆ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಚಾಲನೆಗೊಳಿಸಿದರು..
ಕವಿಗೋಷ್ಠಿಯಲ್ಲಿ ಶಿಲ್ಪಾ ಮ್ಯಾಗೇರಿ, ಬನಶಂಕರಿ ವೈದ್ಯ, ಕಲಾವತಿ ಕುಲಕರ್ಣಿ, ವೈಷ್ಣವಿ ಹುಲಗಿ, ನಿಂಗಪ್ಪ ಕಂಬಳಿ, ಮಂಜುನಾಥ, ಪುಷ್ಪಲತಾ ಏಳುಭಾವಿ, ಭಾಗವಹಿಸಿದ್ದರು.‌ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಈಶ್ವರ ಹತ್ತಿ, ಎಚ್ ಎಸ್ ಪಾಟೀಲ, ಕಾಸಿಂಸಾಬ್,
ಎ.ಎಮ್.ಮದರಿ,‌ ಬಸವರಾಜ ಆಕಳವಾಡಿ ಉಪಸ್ಥಿತರಿದ್ದರು.‌ಮಂಜುನಾಥ ರವರು ವಂದಿಸಿದ

Please follow and like us:
error