ದಸರಾ ಹಬ್ಬದ ಪ್ರಯುಕ್ತ ಮೇಘರಾಜ್ ಬಂಧುಗಳಿಂದ ಕಿರಾಣಿ ವಿತರಣೆ

Koppal News ದಸರಾ ಹಬ್ಬದ ಪ್ರಯುಕ್ತ ಭಾಗ್ಯನಗರದ ಮೇಘರಾಜ್ ಬಂಧುಗಳು ಉಲ್ಪಿ ( ಕಿರಾಣಿ ಸಾಮಾನುಗಳು) ವಿತರಣೆ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಮೇಘರಾಜ್ ಬಂಧುಗಳು ಸಮಾಜದ ಬಡ ಕುಟುಂಬಗಳಿಗೆ ಕಿರಾಣಿ ಸಾಮಾನುಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ , ಮೇಘರಾಜ್ ಕುಟುಂಬದ ಬಂಧುಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು. ೧೫೦ಕ್ಕೂ ಹೆಚ್ಚು ಕುಟುಂಬಗಳಿಗೆ ಕಿರಾಣಿ ಸಾಮಾನು ವಿತರಿಸಲಾಯಿತು.

Please follow and like us:
error