ದಸರಾ ಯುವ ಕವಿಗೋಷ್ಠಿಗೆ ಮಹೇಶ


ಕೊಪ್ಪಳ: ನಗರದ ಯುವ ಕವಿ ಮಹೇಶ ಬಳ್ಳಾರಿ ಈ ಸಲ ಮೈಸೂರಿನಲ್ಲಿ ದಿನಾಂಕ ೧೩-೧೦-೨೦೧೮ ರಂದು ಶನಿವಾರ ಬೆಳಿಗ್ಗೆ ೧೦.೩೦ ಕ್ಕೆ ಮೈಸೂರ ವಿಶ್ವ ವಿದ್ಯಾಲಯದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜರುಗುವ ದಸರಾ ಯುವ ಕವಿಗೋಷ್ಠಿಗೆ ಆಯ್ಕೆಯಾಗಿರುತ್ತಾರೆ. ಮಹೇಶ ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಕಗ್ಗತ್ತಲು , ಮರ್ಮ, ಎಡವಿಬಿದ್ದ ದೇವರು ಎಂಬ ಮೂರು ಕವನ ಸಂಕಲನಗಳನನು ಪ್ರಕಟಿಸಿರುತ್ತಾರೆ. ಸ್ಫೂರ್ತಿಯ ಸೆಲೆ ಎಂಬ ಕಿರುಕತೆಗಳ ಸಂಗ್ರಹ, ಕಲ್ಲು ಲಿಂಗವಾದ ದಿನ ಎಂಬ ವೈಚಾರಿಕ ಪ್ರಬಂಧ ಸಂಕಲನ ಹಾಗೂ ಕನ್ನಡದ ಹಾಯಿಕುಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕಾವ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಹೇಶ ಇವರಿಗೆ ಮೈಸೂರ ದಸರಾ ಯುವ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸುವ ಅವಕಾಶ ಬಂದಿರುವದಕ್ಕೆ ಜಿಲ್ಲೆಯ ಸಾಹಿತಿಗಳ ಬಳಗ ಅಬಿನಂಧಿಸಿದೆ.

Please follow and like us:
error