ಮುಸ್ಲಿಂ,ದಲಿತರ ಮೇಲೆ ಹಲ್ಲೆ,ಕಗ್ಗೊಲೆ ಖಂಡಿಸಿ ಬೃಹತ್ ಪ್ರತಿಭಟನೆ

ಕೊಪ್ಪಳ : ದೇಶದೆಲ್ಲೆಡೆ ಅಲ್ಪಸಂಖ್ಯಾತರು, ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯ ಹಾಗೂ ಪ್ರಗತಿಪರ ಸಂಘಟನೆಗಳವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ದೇವರು, ಧರ್ಮದ ಹೆಸರಿನಲ್ಲಿ ಅಮಾಯಕ ಜನರ ಕಗ್ಗೊಲೆ ಮಾಡಲಾಗುತ್ತಿದೆ. ನಮ್ಮದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಸರ್ವರಿಗೂ ಸ್ವತಂತ್ರವಾಗಿ ಬದುಕಲು ಹಕ್ಕಿದೆ. ಆದರೆ ಕೆಲವು ಕೋಮುವಾದಿ ಹಾಗು ವಿಚ್ಛಿದ್ರಕಾರಿ ಶಕ್ತಿಗಳು ಭಾರತದ ಕೋಮು ಸೌಹಾರ್ಧತೆಯನ್ನು ಕದಡುವುದಕ್ಕಾಗಿ, ಶಾಂತಿ ಭಂಗ ಮಾಡಲು ಇಲ್ಲ ಸಲ್ಲದ ನೆಪಗಳನಿಟ್ಟುಕೊಂಡು ಅಮಾಯಕರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುತ್ತಿದ್ದಾರೆ. ಇದನ್ನು ಕೊಪ್ಪಳದ ಎಲ್ಲ ಪ್ರಗತಿಪರ ಮನಸ್ಸುಗಳು, ಹೋರಾಟಗಾರರು, ದಲಿತ ಹಾಗೂ ಮುಸ್ಲಿಂ ಸಂಘಟನೆಗಳು ಖಂಡಿಸುತ್ತವೆ. ಇದರ ವಿರುದ್ದ ಧ್ವನಿ ಎತ್ತುವುದಕ್ಕಾಗಿ ನಾಳೆ ದಿ. ೨೮-೬-೨೦೧೯ರಂದು ಕೊಪ್ಪಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಾಳೆ ಮಧ್ಯಾಹ್ನ ೨;೩೦ಕ್ಕೆ ಗಡಿಯಾರ ಕಂಬದಿಂದ ಅಶೋಕ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲ ಪ್ರಜಾಪ್ರಭುತ್ವವಾದಿಗಳು, ಜನಪರ ಸಂಘಟಕರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಲು ಎಲ್ಲ ಸಂಘಟನೆಗಳ ಪರವಾಗಿ ಹಿರಿಯ ವಕೀಲರಾದ ಅಸೀಪ್ ಅಲಿ, ಲಾಯಕ್ ಅಲಿ, ಕಾಟನ್ ಪಾಷಾ, ವಿಠ್ಠಪ್ಪ ಗೋರಂಟ್ಲಿ, ಜೆ.ಭರದ್ವಾಜ ಸೇರಿದಂತೆ ಕೊಪ್ಪಳ ಜಿಲ್ಲೆಯ ಪ್ರಗತಿಪರ ಸಂಘಟಕರು ಕೋರಿದ್ದಾರೆ.
ವಿವರಗಳಿಗೆ ಅಸೀಪ್ ಅಲಿ ಎಸ್. ೯೮೮೦೯೯೮೭೨೬, ಕಾಟನ್ ಪಾಷಾ ೯೮೮೦೯೮೪೦೭೬

Please follow and like us:
error