ದರೋಡೆಕೋರರ ಬಂಧನ

ಎ.ಟಿ.ಎಮ್, ಹಾಗೂ ಅಂಗಡಿಗಳ ಕನ್ನ ಹಾಕಿದ ಮೂವರ ಅಂತರ್ ರಾಜ್ಯ ದರೋಡೆಕೋರರ ಬಂಧನ.

ಜಗದೀಶ್, ವಿಕ್ರಮ್ ಕುಮಾರ್ ಹಾಗೂ ಭವರಲಾಲ್ ಬಂಧಿತ ಆರೋಪಿಗಳು.

ಮೂವರು ಜಿಲ್ಲೆಯಲ್ಲಿ ಒಟ್ಟು ಏಳು ವಿವಿಧ ಕಡೆ ಕಳ್ಳತನ ಮಾಡಿದ್ರು.ಕೊಪ್ಪಳ ತಾಲೂಕಿನ ಇರಕಲ್ ಗಡ, ಅಗಳಕೇರಾ ಗ್ರಾಮದಲ್ಲಿ ಎ.ಟಿ.ಎಮ್ ದರೋಡೆಗೆ ವಿಫಲ ಯತ್ನ ನಡೆಸಿದ್ರು.ಹುಲಗಿ, ಕನಕಗಿರಿ, ಗಿಣಗೇರಾ ಹಾಗೂ ಕುಷ್ಟಗಿಯಲ್ಲಿ ಅಂಗಡಿಗಳನ್ನ ಕಳ್ಳತನ ಮಾಡಿದ್ರು.ಬಂಧಿತ ಮೂವರು ಆರೋಪಿಗಳು ರಾಜಸ್ತಾನ ಮೂಲದವರು.

ಬಂದಿತರಿಂದ 9 ಮೊಬೈಲ್, ಒಂದು ಬೈಕ್, ಎರಡು ಬಂಗಾರದ ತಾಳಿ, ಹಾಗೂ ಒಂದು ಲಕ್ಷಕ್ಕೂ ಅಧಿಕ ಹಣ ವಶ.