ದಕ್ಷಿಣ ವಲಯಕ್ಕೆ ಆಯ್ಕೆ

ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಳ್ಳಾರಿಯಲ್ಲಿ ಜರುಗಿದ ಅಂತರ್ ಮಹಾವಿದ್ಯಾಲಯದ ಯುವಜನೋತ್ಸವ-2017 ರಲ್ಲಿ ಸ್ನಾತಕೋತ್ತರ ಕೇಂದ್ರ, ಕೊಪ್ಪಳದ ವಿದ್ಯಾರ್ಥಿಗಳು ಭಾಗವಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ದಕ್ಷೀಣ ವಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮವನ್ನು ದ

ಿ 12ರಂದು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಕೃಷ್ಣಪ್ಪ, ರಡ್ಡೆಪ್ಪ, ವಿನಾಯಕ (ಚರ್ಚಾ ಸ್ಪರ್ಧೆ) ಇವರು ಬಳ್ಳಾರಿಯ ವಿವಿಯಲ್ಲಿ ನಡೆದ ಅಂತರ್ ಮಹಾವಿದ್ಯಾಲಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ‘ಚೆನ್ನೈ’ ನಲ್ಲಿ ನಡೆಯುವ ‘ದಕ್ಷೀಣ ವಲಯ’ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸ್ನಾತಕೋತ್ತರ ಕೇಂದ್ರದ ವಿಸೇಷಾಧಿಕಾರಿಗಳಾದ ಡಾ. ಮನೋಜ್ ಡೊಳ್ಳಿ ಹಾಗೂ ಎಲ್ಲಾ ವಿಭಾಗ್ ಉಪನ್ಯಾಸಕರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತಕ್ಕೆ ಸುಭ ಹಾರೈಸಿದ್ದಾರೆ.
ಇದೇ ಸಂದರ್ಭದಲ್ಲಿ ಅಂತರ್ ಮಹಾವಿದ್ಯಾಲಯ ಯುವಜನೋತ್ಸವ-2017 ರಲ್ಲಿ ಸ್ನಾತಕೋತ್ತರ ಕೇಂದ್ರದಿಂದ ನಾಟಕದಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನವನ್ನು ಪಡೆದ ಜಾಫರ್ ಶರೀಫ್, ನವೀನ್ , ಲಕ್ಷ್ಮೀ, ಆಯಿಷಾ, ಮರೆಗೌಡ, ಕುಮಾರಸ್ವಾಮಿಯವರಿಗೆ ಪ್ರಶಸ್ತಿಪತ್ರ ಮತ್ತು ಫಲಕಗಳನ್ನು ನೀಡುವುದರ ಮೂಲಕ ಗೌರವಿಸಲಾಯಿತು

Please follow and like us:
error

Related posts