ತ‌ಂದೆ ತಾಯಿಯನ್ನು ಕೊಂದು ಹಾಕಿದ ಪಾಪಿ ಪುತ್ರ

ಕೊಪ್ಪಳ: ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ-ತಾಯಿ ಹೇಳಲಾಗುತ್ತೆ. ಆದರೆ ಇಲ್ಲೊಬ್ಬ ಪಾಪಿ ಪುತ್ರ ತನ್ನ ಹೆತ್ತವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ತಾಯಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಂದೆ ಸಾವು-ಬದುಕಿನ‌ ಮಧ್ಯೆ ಹೋರಾಡಿ, ಗಂಗಾವತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಘಟನೆ ನಡೆದದ್ದು‌ ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ. ಸಾವನ್ನಪ್ಪಿರುವ ತಾಯಿಯನ್ನು ಅಕ್ಕಮ್ಮ (೫೫) ಎಂದೂ, ತಂದೆಯನ್ನು ಗಿರಿಯಪ್ಪ (೬೦) ಎಂದು ಗುರುತಿಸಲಾಗಿದೆ.

ಇವರ ಮಗ ರಾಮು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕ್ಷುಲ್ಲಕ ಕಾರಣಕ್ಕೆ ತಂದೆ-ತಾಯಿಯೊಡನೆ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಆರೋಪಿ ರಾಮು ಸದ್ಯ ಪೊಲೀಸ್ ವಶದಲ್ಲಿದ್ದಾನೆ.

Please follow and like us:
error