ತ್ರಿವರ್ಣ ನಡೆಗೆ ಅಭಿಯಾನ

ಕೊಪ್ಪಳ : ಜ.26 ರಂದು ಯುವ ಕಾಂಗ್ರೇಸ್‍ವತಿಯಿಂದ ತ್ರಿವರ್ಣ ನಡೆಗೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 :30ಕ್ಕೆ ಗಡಿಯಾರ ಕಂಭ ವೃತ್ತದಿಂದ ಜವಾಹರ ರೋಡ್ ಮಾರ್ಗವಾಗಿ ಪಾದಯಾತ್ರೆಯ ಮೂಲಕ ಅಂಬೇಡ್ಕರ ವೃತ್ತದ ವರಗೆ ಸಂವಿಧಾನವನ್ನು ರಕ್ಷಿಸಿ ರಾಷ್ಟ್ರವನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷ ಕುರಗೋಡ ರವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ, ಈ ಅಭಿಯಾನದಲ್ಲಿ ಕಾಂಗ್ರೇಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಶರಣ ಬಸವರಾಜ ಸೇರಿದಂತೆ, ಶಾಸಕರು, ಜಿಲ್ಲಾ ಮತ್ತು ತಾಲೂಕ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು, ಕೊಪ್ಪಳ ಜಿ.ಪಂ ಅಧ್ಯಕ್ಷರು, ತಾ.ಪಂ ಅಧ್ಯಕ್ಷರು ನಗರ ಸಭೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಕಾಂಗ್ರೇಸ್‍ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳಾದ ಸಲಿಂ ಅಳವಂಡಿ ಹಾಗೂ ಮಹಾಂತೇಶ ಚಾಕ್ರಿ ತಿಳಿಸಿದ್ದಾರೆ

Please follow and like us:
error