ತೋಟಗಾರಿಕೆ ಇಲಾಖೆ ಯಿಂದ ಮಾವು ಬೆಳೆಗಾರರಿಗೆ ಸಲಹೆ


ಕೊಪ್ಪಳ ಅ. : ಕೊಪ್ಪಳ ತೋಟಕಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಮಾವು ಬೆಳೆಗಾರರಿಗೆ ಸಲಹೆಗಳನ್ನು ನೀಡಲಾಗಿದೆ.
ಕೊಪ್ಪಳ ಜಿಲ್ಲೆ ಮಾವಿನ ಬೆಳೆಗೆ ಅತ್ಯಂತ ಸೂಕ್ತವಾಗಿದ್ದು, ಹಣ್ಣಿನ ಬೆಳೆಗಳ ರಾಜ ಎಂದೇ ಪ್ರಖ್ಯಾತಿ ಹೊಂದಿರುವ ಮಾವು ಈ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಸುಮಾರು ೩೦೦೦ ಹೆಕ್ಟರ್ ಗೂ ಹೆಚ್ಚಿನ ವಿಸ್ತೀರ್ಣದಲ್ಲಿ ಮಾವಿನ ವಿವಿಧ ತಳಿಗಳನ್ನು ಜಿಲ್ಲೆಯಾದ್ಯಂತ ಬೆಳೆಯಲಾಗುತ್ತಿದೆ. ಇದರಲ್ಲಿ ಬೆನೆಷಾನ್ ಅಥವಾ ಬಂಗೇನಪಲ್ಲಿ ಎಂಬ ತಳಿಯದ್ದೆ ಸಿಂಹಪಾಲು ಶೇ೬೦-ಕ್ಕೊ ಹೆಚ್ಚಿನ ಪ್ರದೇಶದಲ್ಲಿ ಈ ತಳಿಯನ್ನು ಬೆಳೆಯಲಾಗುತ್ತಿದೆ. ಈ ತಳಿಯ ನಿರ್ವಹಣೆಯು ಸುಲಭವಾಗಿದ್ದು, ರಫ್ತಿಗೂ ಯೋಗ್ಯವಾದ ತಳಿಯಾಗಿದೆ. ಇದಲ್ಲದೇ ಕೇಸರ್, ರಸಪುರಿ, ಮಲ್ಲಿಕಾ, ದಶಹರಿ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದೆ. ಆಪೂಸು ಅಥವಾ ಬಾದಾಮಿ ಈ ಭಾಗಕ್ಕೆ ಸೂಕ್ತವಲ್ಲ.
ಕೇಸರ್ ತಳಿಯು ರಫ್ತಿಗೆ ಸೂಕ್ತವಾಗಿದ್ದು, ಕಳೆದ ವರ್ಷ ಕೆಲವು ರೈತರು ಈಗಾಗಲೇ ರಫ್ತು ಮಾಡಿ ಅದರ ಲಾಭ ಪಡೆದಿರುತ್ತಾರೆ. ರಫ್ತಿಗೆ ಯೋಗ್ಯವಾದ ಗುಣಮಟ್ಟ ಪಡೆಯಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಈ ಬಾರಿ ಮಾವು ಅಲ್ಲಲ್ಲಿ ಹೂ ಬಿಡಲು ಆರಂಭಿಸಿದೆ. ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುವುದರಿಂದ ಏಕ ಕಾಲದಲ್ಲಿ ಹೂ ಬಿಡುವಂತೆ ಮಾಡಬಹುದು. ಆದ್ದರಿಂದ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಈ ಕೆಳಗಿನಂತೆ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.
ನಿರ್ವಹಣಾ ಕ್ರಮಗಳು : ಇದಕ್ಕೂ ಮೊದಲು ಗೊಬ್ಬರ ಕೊಟ್ಟಿರದಿದ್ದರೆ ನವೆಂಬರ್ ತಿಂಗಳಿನಲ್ಲಿ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರಗಳನ್ನು ನೀಡಬೇಕು. ಇದರ ಜೊತೆಗೆ ಬೋರಾನ್ ಮತ್ತು ಜಿಂಕ್ ಸಲ್ಫೆಟ್ ಜೊತೆಗೆ ೧-೨ ಕಿ.ಗ್ರಾಂ. ನಷ್ಟು ಬೇವಿನ ಹಿಂಡಿ ಕೊಟ್ಟು ಒಂದೆರಡು ಸಾರಿ ನೀರು ಹರಿಸಿದ ನಂತರ ನೀರು ಕೊಡುವುದನ್ನು ನಿಲ್ಲಿಸಬೇಕು. ನೆಲದಿಂದ ಮೂರು ಅಡಿ ಮೇಲಕ್ಕೆ ಬೋರ್ಡೊ ಲೇಪನವನ್ನು ಮಾಡಬೇಕು. ಒಣಗಿದ ರೋಗಗ್ರಸ್ತ ರೆಂಬೆಗಳನ್ನು ತೆಗೆದು ಹಾಕಬೇಕು. ಈ ಸಮಯದಲ್ಲಿ ಜೇಡರ ಬಲೆ ಜಾಸ್ತಿಯಾಗುತ್ತಿದ್ದು, ಈ ರೀತಿ ಕಂಡುಬಂದಲ್ಲಿ ಅಂತಹ ರೆಂಬೆ ಕೊಂಬೆಗಳನ್ನು ಕತ್ತರಿಯಿಂದ ಕತ್ತರಿಸಿ ಹಾಕಬೇಕು. ನಂತರ ಕತ್ತರಿಸಿದ ಭಾಗಕ್ಕೆ ಸಿ.ಓ.ಸಿ ಎಂಬ ಶಿಲೀಂದ್ರ ನಾಶಕವನ್ನು ಬ್ರಶ್‌ನಿಂದ ಲೇಪಿಸಬೇಕು. ಹೂ ಬಿಡುವ ಸಮಯದಲ್ಲಿ ಜಿಗಿಹುಳು ಮತ್ತು ಬೂದಿರೋಗದ ಹಾವಳಿ ಜಾಸ್ತಿಯಾಗಿರುತ್ತದೆ. ಹತೋಟಿಗಾಗಿ ಇಮಿಡಾ ಕ್ರೊಪ್ರಿಡ್ ೧ಲೀ. ನೀರಿನಲ್ಲಿ ೦.೩೦ ಮಿ.ಲೀ. ಜೊತೆಗೆ ಕಾರ್ಬೆಂಡಾಜಿಮ್ ೧ ಗ್ರಾಂ. ಅಥವಾ ನೀರಿನಲ್ಲಿ ಕರಗುವ ಗಂಧಕ ೩.೦೦ ಗ್ರಾಂ. ೧ಲೀ. ನೀರಿಗೆ ಬೆರೆಸಿ ಸಿಂಪರಿಸಬಹುದಾಗಿದೆ. ಹೂ ಇರುವ ಹಂತದಲ್ಲಿ ಗಂಧಕ ಸಿಂಪರಿಸಬಾರದು.
ಶೇ.೫೦ ರಷ್ಟು ಹೂ ಬಿಟ್ಟನಂತರ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೇಸರಿಗಟ್ಟದಿಂದ ಉತ್ಪಾದಿಸಿದ ಮಾವು ಸ್ಪೇಷಲ್‌ನ್ನು ೫ಗ್ರಾಂ. ೧ ಲೀ. ನೀರಿನಲ್ಲಿ ಬೆರೆಸಿ ಸಿಂಪರಿಸಬೇಕು. ಈ ಮಿಶ್ರಣವನ್ನು ತಿಂಗಳಿಗೊಂದು ಸಾರಿಯಂತೆ ಮೂರು ಸಾರಿ ಸಿಂಪರಣೆ ಮಾಡಬೇಕು. ಕೀಟ ರೋಗಗಳ ಹತೋಟಿಗಾಗಿ ಸಿಂಪಡಿಸಲ್ಪಡುವ ಔಷಧಿಗಳೊಂದಿಗೂ ಕೂಡ ಮಾವು ಸ್ಪೇಷಲ್ ಬೆರೆಸಿ ಸಿಂಪಡಿಸಬಹುದು. ಮಾವಿನ ಹೂವಿನಲ್ಲಿ ಶೇ.೯೯ ಕ್ಕು ಹೆಚ್ಚಿನಾಂಶ ಉದುರುತ್ತದೆ. ಹೆಚ್ಚಿನ ಉದುರುವಿಕೆ ಕಂಡು ಬಂದಲ್ಲಿ ಬೋರಾನ್ ೨ಗ್ರಾಂ. ೧ಲೀ. ನೀರಿಗೆ ಬೆರೆಸಿ ಸಿಂಪರಿಸಬೇಕು. ಇದಲ್ಲದೇ ಪ್ಲಾನೋಪಿsಕ್ಸ್ ಎನ್ನುವ ಸಸ್ಯ ಚೋದಕ ೦.೪೦ ಮೀ.ಲಿ. ೧ಲೀ. ನೀರಿಗೆ ಬೆರೆಸಿ ಸಿಂಪರಿಸಬಹುದು. ಕಾಯಿಗಳು ಅಡಿಕೆ ಕಾಳಿನಷ್ಟಿದ್ದಾಗ ಪುನಃ ನೀರು ಕೊಡುವುದನ್ನು ೨ರಿಂದ ೩ ವಾರಗಳವರೆಗೆ ನಿಲ್ಲಿಸಬೆಕು. ಹನಿ ನೀರಾವರಿ ಮೂಲಕ ನೀರನ್ನು ೪-೫ ದಿನಗಳಿಗೊಮ್ಮೆ ಕೊಟ್ಟರೆ ಸಾಕು. ದೊಡ್ಡ ಪಾತಿಮಾಡಿ ನೀರು ಮತ್ತು ಗೊಬ್ಬರ ಕೊಡಬೇಕು.
ಈ ಹಂತದಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಸಾವಯವ ಹೊದಿಕೆ ಅಂದರೆ ಗಿಡಗಳ ಸುತ್ತಲೂ ಒಣಗಿದ ಎಲೆ, ಮೆಕ್ಕೆಜೋಳ ರೌದಿಯಿಂದ ಮಲ್ಚಿಂಗ ಮಾಡಬೇಕು. ಕಾಂಡಕ್ಕೆ ಬೋರ್ಡೊ ಲೇಪನ ಮಾಡುವುದರಿಂದ ಅಧಿಕ ತಾಪಮಾನದಿಂದ ಕಾಂಡಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದಲ್ಲದೆ ಇತರೆ ರೋಗಗಳನ್ನು ನಿಯಂತ್ರಿಸಬಹುದು. ಗೊಣ್ಣೆ ಹುಳದ ಕಾಟವಿದ್ದಲ್ಲಿ ಕ್ಲೋರೋಪೈರಿಫಾಸ್ ೫೦ ಇ.ಸಿ.ಯನ್ನು ೩. ಮೀ. ಲಿ. ಒಂದು ಲೀ. ನೀರಿಗೆ ಬೆರೆಸಿ ೪-೫ .ಲೀ. ಒಂದು ಗಿಡಕ್ಕೆ ಸುರಿಯಬೇಕು. ಈ ರೀತಿಯಾಗಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಲ್ಲಿ ಉತ್ತಮ ಗುಣಮಟ್ಟದ ರಫ್ತಿಗೆ ಯೋಗ್ಯವಾದ ಫಸಲು ಪಡೆಯುವುದು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಾ ಕಛೇರಿಗಳನ್ನು ಅಥವಾ ಕೊಪ್ಪಳ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರವನ್ನು ಸಂಪರ್ಕಿಸಬಹು