fbpx

ತುಂಗಭಧ್ರಾ ಹೆಚ್ಚುವರಿ ನೀರು ಬಿಡುಗಡೆಗೆ ತೆಲಂಗಾಣಕ್ಕೆ ನಿಯೋಗ

ಕೃಷ್ಣಾ ಬಿ. ಸ್ಕೀಂ; ಮೂರನೆ ಹಂತದ ಏತ ನೀರಾವರಿ ಯೋಜನೆಗೆ ಶೀಘ್ರ ಶಂಕುಸ್ಥಾಪನೆ

: ಕೊಪ್ಪಳ ಜಿಲ್ಲೆಯ ರೈತರ ನೀರಿನ ಬವಣೆ ತಪ್ಪಿಸಲು ೨೩೯೬ ಕೋಟಿ ರೂ.ವೆಚ್ಚದಲ್ಲಿ ಕೃಷ್ಣಾ ನದಿಯ ಮೂರನೇ ಹಂತದ ನೀರು ಪೂರೈಕೆಗೆ ಜಿಲ್ಲೆಯ ಸಚಿವರ ಹಾಗೂ ಶಾಸಕರ ಆಗ್ರಹದಂತೆ ಶೀಘ್ರ ಏತ ನೀರವರಿ ಯೋಜನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಆದಷ್ಟು ಬೇಗನೆ ಅದರ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವುದಾಗಿ ರಾಜ್ಯದ ಮುಖ್ಯಮಂತ್ರಿ   ಸಿದ್ದರಾಮಯ್ಯ ಭರವಸೆ ನೀಡಿದರು. 

ಕನಕಗಿರಿಯ ಎ.ಪಿ.ಎಂ.ಸಿ ಆವರಣದಲ್ಲಿ ಕನಕಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದ ನುಡಿದಂತೆ ನಡೆದಿದ್ದೇವೆ ಸಾಧನಾ ಸಂಭ್ರಮದ ಜಿಲ್ಲಾ ಹಾಗೂ ತಾಲೂಕುಗಳ ಪ್ರಗತಿಮಾಹಿತಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಕಾರಟಗಿ ಮತ್ತು ಕನಕಗಿರಿ ನೂತನ ತಾಲೂಕುಗಳು ಬರುವ ಜನೇವರಿಯಿಂದ ಕಾರ್ಯ ನಿರ್ವಹಿಸಲಿವೆ ಎಂದು ಘೋಷಿಸಿ ಅವರು ಮಾತನಾಡಿದರು. ಜಿಲ್ಲೆಯ ಈಭಾಗದ ರೈತರ ಎರಡನೆ ಬೆಳೆಗೆ ನೀರು ಇಲ್ಲ ಆದರೆ ತೆಲಂಗಾಣ ಮುಖ್ಯಮಂತ್ರಿಗಳ ಮನ ಒಲಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡಲಿದ್ದು ಅದಕ್ಕಾಗಿ ಅಗತ್ಯವಿದ್ದಲ್ಲಿ ನಿಯೋಗವೊಂದನ್ನು ಕಳುಹಿಸುವುದಾಗಿ ಮುಖ್ಯಮಂತ್ರಿಗಳು ನುಡಿದರು.ತಾವಿಂದು ಕನಕಗಿರಿ ವಿಧಾನಸಭಾ ಕ್ಷೇತ್ರದ ೪೦೦ ಕೋಟಿ ರೂ. ಮಿಕ್ಕಿದ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಅದರಲ್ಲಿ ೧೪೧ ಕೋಟಿ ರೂ.ವೆಚ್ಚದಲ್ಲಿ ೭ ಪ್ರಮುಖ ಕೆರೆಗಳನ್ನು ತುಂಬಿಸುವ ಯೋಜನೆ ರೈತರಿಗೆ, ಜನರಿಗೆ ಹೆಚ್ಚು ಉಪಯೋಗವಾಗಲಿದೆ. ತಮ್ಮ ಸರ್ಕಾರ ರೈತರ ಮಳೆಯಾಶ್ರಿತ ತೊಂದರೆ ತಪ್ಪಿಸಲು ರಾಜ್ಯದ ಸಮಗ್ರ ನೀರಾವರಿ ಯೋಜನೆಗೆ ಹಾಗು ಕೃಷಿ ಭಾಗ್ಯದಡಿ ಕೃಷಿಹೊಂಡಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಮಾರ್ಚ ಅಂತ್ಯದೊಳಗೆ ಇನ್ನು ೭ ಸಾವಿರ ಕೋಟಿ ನೀರಾವರಿಗೆ ವಿನಿಯೋಗಿಸಿ ಒಟ್ಟಾರೆ ೫೨ ಸಾವಿರ ಕೋಟಿ ರೂ. ವಿನಿಯೋಗಿಸುವ ಗುರಿ ತಲುಪಲಿದೆ. ತಾವು ರೈತರ ಸಹಕಾರಿ ಸಾಲ ಮನ್ನಾ ಮಾಡಿದ ಕುರಿತಂತೆ ರಾಜ್ಯ ಸರ್ಕಾರದಿಂದ ಸುಮಾರು ೪೪೦೦ ಕೋಟಿ ರೂ.ಗಳನ್ನು ಅಪೆಕ್ಸ ಬ್ಯಾಂಕಿಗೆ ಒದಗಿಸಿದ್ದು ಇದರಿಂದ ರೈತರಿಗೆ ಸಾಲ ಪಡೆಯಲು ಅನುಕೂಲವಾಗಲಿದೆ. ತಮ್ಮ ಸರ್ಕಾರ ಪಾರದರ್ಶಕ ಮತ್ತು ಹಗರಣ ಮುಕ್ತ ಆಡಳಿತ ನೀಡಿದ್ದು ಅಭಿವೃದ್ಧಿಯಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ಹಾಗೂ ಸಮಾನ ಅವಕಾಶ ನೀಡಿ ಎಲ್ಲ ವರ್ಗದವರು ಶಾಂತಿ ಸಮಾಧಾನದಿಂದ ಜೀವನ ನಡೆಸಲು ಪ್ರಯತ್ನಸುತ್ತಿದೆ. ತಾವು ಕಳೆದ ಬಾರಿ ನೀಡಿದ್ದ ಎಲ್ಲ ೧೬೫ ಭರವಸೆಗಳನ್ನು ನೆರವೇರಿಸಿದ್ದು ಈಗ ನವಕರ್ಣಾಟಕದ ನಿರ್ಮಾಣದ ಮೂಲಕ ರಾಜ್ಯವು ಇಡೀ ದೇಶಕ್ಕೆ ಮಾದರಿಯಾಗಿಸುವ ಆಶಯ ಹೊಂದಿದ್ದು ಜನ ಮತ್ತೆ ತಮಗೆ ಜನಾರ್ಶಿವಾದ ನೀಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ ಮುಖುಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಮೂಲಕ, ಸರ್ವರಿಗೂ ಅವಕಾಶ, ಎಲ್ಲ ವರ್ಗಗಳನ್ನೋಳಗೊಂಡ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಣ್ಣ ಬಸವಣ್ಣನ ಆಶಯ ಸರ್ಕಾರದ ಯೋಜನೆಗಳಿಗೆ ಪ್ರೇರಣೆಯಾಗಿದೆ. ಹಸಿವು ಮುಕ್ತ ಕರ್ನಾಟಕವಾಗಿಸಿದ ರಾಜ್ಯವನ್ನು ಹೊಸ ಮುನ್ನೋಟದ ನವಕರ್ನಾಟಕ ನಿರ್ಮಾಣಕ್ಕೆ ಎಲ್ಲರು ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಬೇಕು ಎಂದರು. ಬರುವ ಜನೇವರಿಯೊಳಗೆ ಅಡುಗೆ ಅನಿಲ ರಹಿತ ಎಲ್ಲ ಅರ್ಹ ಬಿಪಿಎಲ್.ಕುಟುಂಬಗಳಿಗೆ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಒದಗಿಸಲಾಗುವುದು. ಜಿಲ್ಲೆಯಲ್ಲಿ ೨೯೦ ಕೋಟಿ ವೆಚ್ಚದಲ್ಲಿ ಪ್ರಮುಖ ಕೆರೆಗಳನ್ನು ನದೀ ನೀರಿನಿಂದ ತುಂಬಿಸಲಾಗುತ್ತಿದೆ ಎಂದು ಬಸವರಾಜ ರಾಯರಡ್ಡಿ ನುಡಿದರು.

ಕನಕಗಿರಿ ಶಾಸಕ ಶಿವರಾಜ ಎಸ್. ತಂಗಡಗಿ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ ಇಂದು ಮುಖ್ಯ ಮಂತ್ರಿಗಳು ನದಿನೀರು ತುಂಬಿದ ಲಕ್ಷ್ಮೀದೇವಿ ಕೆರೆಗೆ ಬಾಗೀನ ಅರ್ಪಿಸಿ ೧೮೫.೯೬ ಕೋಟಿ ರೂ.ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ೧೮೭.೧೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಭಾಗದ ರೈತರ ನೀರಾವರಿ ಸೌಲಭ್ಯಕ್ಕಾಗಿ ಕೃಷ್ಣಾ ನದಿ ಮೂರನೇ ಹಂvದ ಯೋಜನೆಯಡಿ ಏತನೀರಾವರಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿದರು.
ಕೊಪ್ಪಳ ಜಿಲ್ಲಾಧಿಕಾರಿ ಶ್ರೀಮತಿ ಎಂ ಕನಗವಲ್ಲಿ ಸರ್ವರನ್ನು ಸ್ವಾಗತಿಸಿದರು.

ಶಾಸಕರುಗಳಾದ ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ಕೆ. ರಾಘವೇಂದ್ರ ಹಿಟ್ನಾಳ್, ಹಂಪನಗೌಡಾ ಬಾದರ್ಲಿ, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಕೊಪ್ಪಳ ಜಿ.ಪಂ ಉಪಾಧ್ಯಕ್ಷೆ ಲಕ್ಷಮ್ಮ ಸಿದ್ದಪ್ಪ ನೀರಲೂಟಿ, ಗಂಗಾವತಿ ತಾ.ಪಂ ಅಧ್ಯಕ್ಷ ವಿರುಪಾಕ್ಷಗೌಡ ಮಾಲಿಪಾಟೀಲ್, ಕಾರಟಗಿ ಪುರಸಭೆ ಅಧ್ಯಕ್ಷೆ ಮಹಾದೇವಿ ಲಕ್ಷ್ಮಣ ಭಜಂತ್ರಿ, ಕನಕಗಿರಿ ಪಟ್ಟಣ ಪಂಚಾಯತ್ ಅಧ್ಯಕ್ಷ ರವಿ ಭಜಂತ್ರಿ, ಕಾರಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಶಿಧರಗೌಡ ಪಾಟೀಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್, ಕೊಪ್ಪಳ ಸಿಇಓ ವೆಂಕಟ್ ರಾಜಾ ಜಿಲ್ಲಾ ಪೋಲಿಸವರಿಷ್ಠಾಧಿಕಾರಿ ಡಾ. ಅನೂಪ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಡಾ. ರುದೇಶ ಘಾಳಿ. ಜನಪ್ರತಿನಿಧಿಗಳು,ಗಣ್ಯರು, ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Please follow and like us:
error
error: Content is protected !!