ತುಂಗಭದ್ರ ಎಡತಂಡೆ ಮುಖ್ಯ ಕಾಲುವೆಗೆ ನೀರು : ಅಧಿಕಾರಿ, ಸಿಬ್ಬಂದಿಗಳ ನಿಯೋಜನೆ

ಕೊಪ್ಪಳ ಆ. 31  : ತಂಗಭದ್ರಾ ಜಲಾಶದ ಎಡದಂಡೆ ಮುಖ್ಯ ಕಾಲುವೆ ಮೈಲ್ 0.00 ರಿಂದ 46.00 ರವರೆಗೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಗೆ ಕುಡಿಯುವ ಸಲುವಾಗಿ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ಆದೇಶವನ್ನು ಹೊರಡಿಸಿದ್ದಾರೆ.
ಇಂದು (ಆಗಸ್ಟ್. 31) ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಯಚೂರು ಜಿಲ್ಲೆಗೆ ತುಂಗಭದ್ರ ಜಲಾಶಯದಿಂದ ಜನ/ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ತುಂಗಭದ್ರ ಎಡದಂಡೆ ಕಾಲುವೆ ಮೈಲ್ 0.00 ರಿಂದ 46.00 ರವರೆಗೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಗೆ ಸಮಪಧಕ ನೀರು ನಿರ್ವಹಣೆ ಮಾಡುವ ಕುರಿತು ತೀರ್ಮಾನಿಸಲಾಗಿದ್ದು, ಆಗಸ್ಟ್. 31 ರಿಂದನವೆಂಬರ್. 31 ರವರೆಗೆ ನೀರನ್ನು ಹರಿಸಬೇಕಾಗಿದೆ.  ಈ ಹಿನ್ನೆಲೆಯಲ್ಲಿ  ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಕಂದಾಯ, ಪೊಲೀಸ್, ನೀರಾವರಿ ಹಾಗೂ ಜೆಸ್ಕಾಂ ಇಲಾಖೆಯ  ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳು ನೀರನ್ನು ರೈತರು ಅನಧೀಕೃತವಾಗಿ ಬಳಸದಂತೆ ಮತ್ತು ವಿತರಣಾ ಕಾಲುವೆಗಳ ಗೇಟಗಳನ್ನು ಆಪರೇಟ ಮಾಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error