ತುಂಗಭದ್ರಾ ಡ್ಯಾಂ ಹೂಳು ತಗೆಯೋದು ಅಸಾಧ್ಯ -ಸಚಿವ ಎಂ ಬಿ ಪಾಟೀಲ್

kannadanet-dot-com

ತುಂಗಭದ್ರಾ ಡ್ಯಾಂ ನಲ್ಲಿ ತುಂಬಿರೋ ೩೨ ಟಿಎಂಸಿಯಷ್ಟು ಹೂಳು ತಗೆಯೋದು ಅಸಾಧ್ಯ ಅಂತ ಕೊಪ್ಪಳದಲ್ಲಿ ನೀರಾವರಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಕೊಪ್ಪಳ ಬಳಿಯ ಗಿಣಗೇರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಂ.ಬಿಪಾಟೀಲ್. ತುಂಗಭದ್ರಾ ಡ್ಯಾಂನಲ್ಲಿರೋ ಹೂಳನ್ನ ರೈತರು ತಗೆಯಲು ಮುಂದಾಗಿದ್ದಾರೆ ಅಂತ ಮಾಧ್ಯಮದವರು ಪ್ರಶ್ನಿಸಿದಾಗ ಈ ರೀತಿ ಪ್ರತಿಕ್ರಿಯಿಸಿದ್ರು. ಹತ್ತು ಅಡಿಯಷ್ಟು ಹೂಳು ತಗೆಯಬೇಕಾಗುತ್ತೆ, ಇದ್ರಿಂದ ಬಂದಿರೋ ಹೂಳನ್ನ ಸಂಗ್ರಹ ಮಾಡೋದು ಕೂಡಾ ಕಷ್ಟ. ಹಾಗಾಗಿ ಸಮಾನಾಂತರ ಜಲಾಯಶ ನಿರ್ಮಾಣ ಮಾಡೋದ್ರಿಂದ ಪರಿಹಾರ ಸಿಗುತ್ತೆ .ಈ ಬಗ್ಗೆ ರಾಜ್ಯ ಸರಕಾರ ಸಮಾನಾಂತರ ಜಲಾಶಯ ನಿರ್ಮಾಣ ಮಾಡೋಕೆ ಸಿಎಂ ಕ್ರಮಕೈಗೊಳ್ತಾರೆ ಅಂತ ಹೇಳಿದ್ರು…

Leave a Reply