ತುಂಗಭದ್ರಾ ಜಲಾಶಯ ಹೂಳು ತೆಗೆಯುವ ಕಾರ್ಯಾಚರಣೆಯ ಲೆಕ್ಕಪತ್ರ

ಕೊಪ್ಪಳ : ಕಳೆದ ವರ್ಷ ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಆದ ಖರ್ಚು ವೆಚ್ಚಗಳ ವಿವರವನ್ನು ಜನಾರ್ಧನ ಹುಲಗಿ ಪತ್ರಿಕಾಗೋಷ್ಠಿಯಲ್ಲಿ ನೀಡಿದರು. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿಕೊಂಡಿ ರುವುದರಿಂದ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ರೈತರು, ಹೋರಾಟಗಾರರು, ಜನಪ್ರತಿನಿಧಿಗಳು ಸ್ವಯಂಪ್ರೇರಣೆಯಿಂದ ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಿದ್ದರು. ಕಳೆದ ವರ್ಷ ಒಟ್ಟು ೩೪ ದಿನಗಳು ಹೂಳು ತೆಗೆಯುವ ಕಾರ್ಯಕ್ರಮ ನಡೆಯಿತು. ಇದಕ್ಕೆ ೨೪ ಲಕ್ಷ ೯೨ ಸಾವಿರ ದುಡ್ಡು ಜಮಾ ಆಗಿತ್ತು. ಇದರಲ್ಲಿ ೨೩ ಲಕ್ಷ ೬೧ ಸಾವಿರ ಖರ್ಚಾಗಿದೆ. ಇದನ್ನೇ ಸರಕಾರೇನಾದರೂ ಮಾಡಿದ್ದರೆ ೬ ಕೋಟಿ ಗೂ ಹೆಚ್ಚು ದುಡ್ಡು ಖರ್ಚಾಗುತ್ತಿತ್ತು ಎಂದು ಮಾಜಿ ಜಿ.ಪಂ. ಅದ್ಯಕ್ಷ , ಮುಖ್ಯ ಸಂಚಾಲಕ ಟಿ.ಜನಾರ್ಧನ ಹುಲಗಿ ಹೇಳಿದರು. ಕ್ರೀಯಾ ಸಮಿತಿಯ ವಿವಿಧ ಸಂಘಟಕರು ಪತ್ರಿಕಾಗೋಷ್ಠಿಯಲ್ಲಿದ್ದರು.

https://youtu.be/ibakSvTp1w4