ತುಂಗಭದ್ರಾ ಜಲಾಶಯದ ಮೇಲ್ಮಟ್ಟ ಕಾಲುವೆ ಕ್ರಸ್ಟ್ ಗೇಟ್ ತೂಬು ದುರಸ್ತಿ ಕಾಮಗಾರಿ ಸ್ಥಳಕ್ಕೆ ಶಾಸಕರ ದಿಡೀರ್ ಭೇಟಿ


ಕೊಪ್ಪಳ, ಮೇ.: ಕೆಲವು ತಿಂಗಳ ಹಿಂದೆ ಅತಿವೃಷ್ಠಿಯಾಗಿ ತುಂಗಭದ್ರಾ ಡ್ಯಾಂನ ತೂಬು ಕಿತ್ತು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ನಡೆಯುತ್ತಿದೆ. ಕ್ರಸ್ಟ್ ಗೇಟ್ ಕಿತ್ತು ಹೋಗಿ ನದಿ ಕೆಳಭಾಗದ ಸಾವಿರಾರು ಜನರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೇ ಪ್ರಸಿದ್ದ ಪಂಪಾವನ ಸಂಪೂರ್ಣವಾಗಿ ನೀರಲ್ಲಿ ಮುಳುಗಿ ಹೋಗಿ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿತ್ತು. ಹಲವು ದಿನಗಳ ಪ್ರಯತ್ನದ ನಂತರ ಹೊರಹೋಗುತ್ತಿದ್ದ ನೀರಿಗೆ ತಾತ್ಕಾಲಿಕ ಗೇಟ್ ಅಳವಡಿಸಲಾಗಿತ್ತು.  ಈಗ ನೀರು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಶಾಶ್ವತವಾದ ದುರಸ್ತಿ ಕಾರ್ಯ ಆರಂಭಿಸಲಾಗಿದೆ.  ಶಾಸಕ ರಾಘವೇಂದ್ರ ಹಿಟ್ನಾಳ್  ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಮೇಲ್ಮಟ್ಟ ಕಾಲುವೆ ಕ್ರಸ್ಟ್ ಗೇಟ್ ತೂಬು ದುರಸ್ತಿ ಕಾಮಗಾರಿ ಸ್ಥಳಕ್ಕೆ  ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ತುಂಗಭದ್ರಾ ಜಲಾಶಯಕ್ಕೆ ನೀರು ಸಂಗ್ರಹವಾಗುವಷ್ಟರಲ್ಲಿ ದುರಸ್ತಿ ಕಾಮಗಾರಿ ತ್ವರಿತ ರೀತಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದರು. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರವೇ ಕಾಮಗಾರಿಯನ್ನು ಮುಗಿಸಬೇಕು. ಮುಂದೆ ಮಳೆಗಾಲ ಅರಂಭವಾದರೆ ಮತ್ತೆ ಕಷ್ಟ್ ಅನುಭವಿಸುವಂತಾಗಬಾರದು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಪಂ ಅಧ್ಯಕ್ಷ ಬಾಲಚಂದ್ರನ್, ಜಲಸಂಪನ್ಮೂಲ ಮುಖ್ಯ ಅಭಿಯಂತರ ಎಸ್.ಎಚ್. ಮಂಜಪ್ಪ,  ಭರಮಪ್ಪ ಬೆಲ್ಲದ, ಶಂಕ್ರಪ್ಪ, ಹಿಟ್ನಾಳ ಜಿ.ಪಂ. ಸದಸ್ಯೆ ಭೀನಾ ಬೇಗಂ, ಮಾಜಿ ಜಿ.ಪಂ. ಅಧ್ಯಕ್ಷ ರಾಜಶೇಖರ ಹಿಟ್ನಾಳ, ಕುರಗೋಡ ರವಿ  ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Please follow and like us:
error