You are here
Home > Koppal News > ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ತಂಡ ರಚನೆ

ತುಂಗಭದ್ರಾ : ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ತಂಡ ರಚನೆ

Koppal News  ತುಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲ “ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್” ಅನ್ನು ನಿಯೋಜಿಸಿ ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಮುಂಗಾರು ಹಂಗಾಮಿಗೆ ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ. 20 ರಿಂದ ನವೆಂಬರ್. 30 ರವರೆಗೆ ನೀರು ಹರಿಸಬೇಕಾಗಿರುವ ಹಿನ್ನಲೆಯಲ್ಲಿ ರೈತರರು ನೀರನ್ನು ಅನಧಿಕೃತವಾಗಿ ಬಳಸದಂತೆ ಮತ್ತು ವಿತರಣಾ ಕಾಲುವೆಗಳ ಗೇಟ್‍ಗಳನ್ನು ಆಪರೇಟ ಮಾಡದಂತೆ ಕಾರ್ಯ ನಿರ್ವಹಿಸಲು “ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್” ಅನ್ನು ನಿಯೋಜಿಸುವಂತೆ ಮುಖ್ಯ ಅಭಿಯಂತರು, ಕ.ನೀ.ನಿ.ನಿ ನೀರಾವರಿ ಕೇಂದ್ರ ವಲಯ, ಮುನಿರಾಬಾದ್ ಇವರು ಕೋರಿದ್ದರು. ಈ ನಿಟ್ಟಿನಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ಉಪ ಕಾಲುವೆಗಳಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು “ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್” ಅನ್ನು ನಿಯೋಜಿಸುವುದು ಸೂಕ್ತವಿರುವುದರಿಂದ ಆ. 30 ರಿಂದ ನವೆಂಬರ್. 30 ರವರೆಗೆ ನಿಯೋಜಿಸಿ, ಈ ಆದೇಶವನ್ನು ಹೊರಡಿಸಲಾಗಿದೆ.
ತುಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ದಾಸನಾಳ ಬ್ರಿಡ್ಜ ಹತ್ತಿರದ ಉಪ ಕಾಲುವೆ ಸಂಖ್ಯೆ-16, ದಾಸನಾಳ ಉಪ ಕಾಲುವೆ ಸಂಖ್ಯೆ-17, ಆರಾಳ ಉಪ ಕಾಲುವೆ ಸಂಖ್ಯೆ-18 ಹಾಗೂ 19, ಕನಕಗಿರಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರ ಉಪ ಕಾಲುವೆ ಸಂಖ್ಯೆ-21, ಮಸಾರಿಕ್ಯಾಂಪ್ ಉಪ ಕಾಲುವೆ ಸಂಖ್ಯೆ-22, 23 ಹಾಗೂ 23ಅ, ಜೀರಾಳಕಲ್ಗುಡಿ ಉಪ ಕಾಲುವೆ ಸಂಖ್ಯೆ-25, ಚಿಕ್ಕಡಂಕನಕಲ್ ಉಪ ಕಾಲುವೆ ಸಂಖ್ಯೆ-27, 28, 29 ಹಾಗೂ 30, ಕಾರಟಗಿ-ನವಲಿ ರಸ್ತೆಯ ಮುಖ್ಯ ಕಾಲುವೆಯ ಕ್ರಾಸಿಂಗ್ ಹತ್ತಿರದ ಉಪ ಕಾಲುವೆ ಸಂಖ್ಯೆ-31 ಮತ್ತು ಮ್ಯಲಾಪುರ ಗ್ರಾಮದ ಹತ್ತಿರದ ಉಪ ಕಾಲುವೆ ಸಂಖ್ಯೆ-32, ಈ ಕಾಲುವೆಗಳಲ್ಲಿ ಪ್ರತಿ ಕಾಲುವೆ ವ್ಯಾಪ್ತಿಗೆ ಇಬ್ಬರು ಪೆÇಲೀಸ್ ಸಿಬ್ಬಂದಿ ಹಾಗೂ ಒಬ್ಬರು ನೀರಾವರಿ ಇಲಾಖೆ ಸಿಬ್ಬಂದಿಗಳನ್ನು ಹಗಲು ಹಾಗೂ ರಾತ್ರಿ ಪಾಳಿಯಲ್ಲಿ ಸರದಿಯಂತೆ ಕಾರ್ಯ ನಿರ್ವಹಿಸಲು, “ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್” ಅನ್ನು ಆ. 30 ರಿಂದ ನವೆಂಬರ್. 30 ರವರೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Top