ತುಂಗಭದ್ರಾ ಕಾಲುವೆಗಳಿಗೆ ನೀರು : ನೀರಾವರಿ ಸಲಹಾ ಸಮಿತಿ ನಿರ್ಧಾರ

: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗಳಿಗೆ ಡಿಸೆಂಬರ್ 15 ರವರೆಗೂ 4000 ಕ್ಯೂಸೆಕ್ ನಂತೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರದಂದು ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ತುಂಗಭದ್ರಾ ಜಲಾಶಯದಿಂದ 2017-18 ನೇ ಸಾಲಿಗೆ ಲಭ್ಯವಾಗುವ ನೀರನ್ನು ಉಪಯೋಗಿಸುವ ಹಾಗೂ ಕುಡಿಯುವ ನೀರಿಗಾಗಿ ಜೂನ್-2018 ರವರೆಗೆ ನೀರನ್ನು ಕಾಯ್ದಿರಿಸಿ, ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ, ವಿವಿಧ ಕಾಲುವೆಗಳಡಿ ಹರಿಸಬಹುದಾದ ನೀರಿನ ಪ್ರಮಾಣ ಮತ್ತು ಅವಧಿಯನ್ನು ನಿರ್ಧರಿಸಲಾಗಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ಕೈಗೊಂಡ ನಿರ್ಣಯದ ವಿವರ ಇಂತಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ :
******** ನವೆಂಬರ್ 30 ರವರೆಗೆ 4000 ಕ್ಯೂಸೆಕ್ ನಂತೆ ಮುಂದುವರೆಸಿ, ಡಿ. 01 ರಿಂದ ಡಿ. 15 ರವರೆಗೆ 4000 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ನಂತರ ಡಿ. 16 ರಿಂದ ಜ. 05 ರವರೆಗೆ 2000 ಕ್ಯೂಸೆಕ್ ನಂತೆ, ಜ. 06 ರಿಂದ ಜ. 20 ರವರೆಗೆ 2300 ಕ್ಯೂಸೆಕ್‍ನಂತೆ. ಜ. 21 ರಿಂದ ಫೆ. 10 ರವರೆಗೆ 2800 ಕ್ಯೂಸೆಕ್ ನಂತೆ. ಫೆ. 11 ರಿಂದ ಫೆ. 28 ರವರೆಗೆ 3200 ಕ್ಯೂಸೆಕ್ ನಂತೆ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯವಾಗುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ :
************ ಡಿ. 10 ವರೆಗೆ 700 ಕ್ಯೂಸೆಕ್‍ನಂತೆ ನೀರು ಹರಿವು ಮುಂದುವರೆಸಲಾಗುವುದು. ಡಿ. 11 ರಿಂದ ಡಿ. 31 ರವರೆಗೆ ನೀರು ನಿಲುಗಡೆ ಮಾಡಲಾಗುವುದು. ನಂತರ ಜ. 01 ರಿಂದ ಜ. 22 ರವರೆಗೆ 600 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು. ಜ. 23 ರಿಂದ ಫೆ. 02 ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಫೆ. 03 ರಿಂದ ಫೆ. 25 ರವರೆಗೆ 600 ಕ್ಯೂಸೆಕ್‍ನಂತೆ ನೀರು ಬಿಡಲಾಗುವುದು. ಫೆ. 26 ರಿಂದ ಮಾ. 07 ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಮಾ. 08 ರಿಂದ ಮಾ. 30 ರವರೆಗೆ 600 ಕ್ಯೂಸೆಕ್‍ನಂತೆ ನೀರು ಹರಿಸಲಾಗುವುದು. ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯವಾಗುತ್ತದೆ.
ರಾಯ ಬಸವಣ್ಣ ಕಾಲುವೆ :
******* ಡಿ. 10 ರವರೆಗೆ 200 ಕ್ಯೂಸೆಕ್‍ನಂತೆ ನೀರು ಹರಿವು ಮುಂದುವರೆಯಲಿದೆ. ಡಿ. 11 ರಿಂದ ಜ. 10 ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಜ. 11 ರಿಂದ ಮೇ. 31 ರವರೆಗೆ 200 ಕ್ಯೂಸೆಕ್‍ನಂತೆ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ :
********** ಡಿ. 21 ರವರೆಗೆ 33 ಕ್ಯೂಸೆಕ್‍ನಂತೆ ನೀರು ಹರಿಸುವುದನ್ನು ಮುಂದುವರೆಸಲಾಗುವುದು. ಡಿ. 22 ರಿಂದ ಡಿ. 31 ರವರೆಗೆ ನೀರು ನಿಲುಗಡೆ ಮಾಡಲಾಗುವುದು. ಜ. 01 ರಿಂದ ಕಾಲುವೆ ಮಟ್ಟ ತಲುಪುವವರೆಗೆ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ :
*********** ಡಿ. 10 ರವರೆಗೆ 1200 ಕ್ಯೂಸೆಕ್‍ನಂತೆ ನೀರು ಹರಿಸುವುದನ್ನು ಮುಂದುವರೆಸಲಾಗುವುದು. ಡಿ. 11 ರಿಂದ ಡಿ. 31 ರವರೆಗೆ ಕಾಲುವೆ ನಿಲುಗಡೆ. ಜ. 01 ರಿಂದ ಜ. 10 ರವರೆಗೆ 1200 ಕ್ಯೂಸೆಕ್‍ನಂತೆ ನೀರು ಹರಿಸಿ ನಂತರ ಸಂಪೂರ್ಣ ನಿಲುಗಡೆ ಮಾಡಲಾಗುವುದು. ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಇರುವವರೆಗೆ ಮಾತ್ರ, ಹಾಗೂ ಕಾಲುವೆಯ ಮಟ್ಟ ತಲುಪುವವರೆಗೆ ಇದರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ.
ನ. 14 ರಿಂದ ಫೆ. 28 ರವರೆಗೆ ತುಂಗಭದ್ರಾ ಎಡದಂಡೆ ಮುಖ್ಯ ನಾಲೆಯ ಮೈಲ್ 47 ಮತ್ತು 69 ಗೇಜ್‍ಗಳಲ್ಲಿ ಹರಿವಿನ ಅನುಗುಣವಾಗಿ ಗೇಜ್ ನಿರ್ವಹಣೆಯನ್ನು ನಿರ್ವಹಿಸಲು ಅನುವಾಗುವಂತೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಷ್ ವರಿಷ್ಠಾಧಿಕಾರಿಗಳು ಸೂಕ್ತ ಪೊಲಿಸ್ ಬಂದೋಬಸ್ತ್ ಅನ್ನು ಒದಗಿಸಿ ಕ್ರಮ ಜರುಗಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.

Please follow and like us:
error