ತುಂಗಭದ್ರಾ ಕಾಲುವೆಗಳಲ್ಲಿ ನೀರು ಮುಂದುವರೆಸಲು ನಿರ್ಧಾರ

ತುಂಗಭದ್ರಾ ಜಲಾಶಯದ ಪ್ರಸಕ್ತ ಸಾಲಿಗೆ ಲಭ್ಯವಾಗುವ ನೀರನ್ನು ಉಪಯೋಗಿಸುವ ಹಾಗೂ ಕುಡಿಯುವ ನೀರಿಗಾಗಿ ಜೂನ್-೨೦೧೮ ರವರೆಗೆ ನೀರನ್ನು ಕಾಯ್ದಿರಿಸಿ, ಉಳಿಕೆಯಾಗುವ ನೀರನ್ನು ತಡವಾಗಿ ಆರಂಭವಾದ ಮುಂಗಾರು ಹಂಗಾಮಿನ ಬೆಳದು ನಿಂತಿರುವ ಬೆಳೆಗಳಿಗೆ ಮತ್ತು ಮಳೆ ಆಶ್ರಿತ ಮಿತ ಬೆಳೆಗಳಿಗೆ ಕಾಲುವೆಗಳಲ್ಲಿ ನೀರನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರು ಹಾಗೂ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ತುಂಗಭದ್ರಾ ಯೋಜನೆಯ ೧೧೦ನೇ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ, ಮುಂಗಾರು ಹಂಗಾಮಿನ ಬೆಳದು ನಿಂತಿರುವ ಬೆಳೆಗಳಿಗೆ ಮತ್ತು ಮಳೆ ಆಶ್ರಿತ ಮಿತ ಬೆಳೆಗಳಿಗೆ ಕಾಲುವೆಗಳಲ್ಲಿ ನೀರನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ನೀರನ್ನು ಒದಗಿಸುವ ಕಾಲಾವಧಿ ವಿವರ ಇಂತಿದೆ,
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ಡಿಸೆಂಬರ್. ೦೧ ರಿಂದ ೨೦೧೮ರ ಫೆಬ್ರುವರಿ ೨೮ ರವರೆಗೆ ಸರಾಸರಿ ೨೫೦೦ ಕ್ಯೂಸೆಕ್ಸ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ : ಡಿ. ೧೦ ರವರೆಗೆ ೭೦೦ ಕ್ಯೂಸೆಕ್ಸ್‌ನಂತೆ ಮುಂದುವರೆಸುವುದು. ಡಿ. ೧೧ ರಿಂದ ೩೧ ರವರೆಗೆ ನೀರು ನಿಲುಗಡೆ, ನಂತರ ೨೦೧೮ರ ಜನೇವರಿ. ೦೧ ರಿಂದ ೨೨ ರವರೆಗೆ ೬೦೦ ಕ್ಯೂಸೆಕ್ಸ್‌ನಂತೆ, ಜ. ೨೩ ರಿಂದ ಫೆಬ್ರುವರಿ. ೦೨ ರವರೆಗೆ ನೀರು ನಿಲುಗಡೆ. ಫೆ. ೦೩ ರಿಂದ ಫೆ. ೨೫ ರವರೆಗೆ ೬೦೦ ಕ್ಯೂಸೆಕ್ಸ್‌ನಂತೆ, ನಂತರ ಫೆ. ೨೬ ರಿಂದ ಮಾರ್ಚ್. ೦೭ ರವರೆಗೆ ನಿಲುಗಡೆ. ಮಾ. ೦೮ ರಿಂದ ಮಾ. ೩೦ ರವರೆಗೆ ೬೦೦ ಕ್ಯೂಸೆಕ್ಸ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ : ಡಿ. ೧೦ ರವರೆಗೆ ೧೨೦೦ ಕ್ಯೂಸೆಕ್ಸ್ ನಂತೆ ಮುಂದುವರೆಸುವುದು. ಡಿ. ೧೧ ರಿಂದ ಡಿ. ೩೧ ರವರೆಗೆ ನೀರು ನಿಲುಗಡೆ, ೨೦೧೮ರ ಜನೇವರಿ. ೦೧ ರಿಂದ ೧೦ ರವರೆಗೆ ೧೨೦೦ ಕ್ಯೂಸೆಕ್ಸ್‌ನಂತೆ ಹರಿಸಿ ನಂತರ ಸಂಪೂರ್ಣ ನಿಲುಗಡೆ. ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಹಾಗೂ ಕಾಲುವೆಯ ಮಟ್ಟ ತಲುಪುವವರೆಗೆ ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ರಾಯ ಬಸಣ್ಣ ಕಾಲುವೆ : ಡಿ. ೧೦ ರವರೆಗೆ ೨೦೦ ಕ್ಯೂಸೆಕ್ಸ್ ನಂತೆ ಮುಂದುವರೆಸುವುದು. ಡಿ. ೧೧ ರಿಂದ ೨೦೧೮ರ ಜನೇವರಿ. ೧೦ ರವರೆಗೆ ಕಾಲುವೆ ನಿಲುಗಡೆ. ಜ. ೧೧ ರಿಂದ ಮೇ. ೩೧ ರವರೆಗೆ ೨೦೦ ಕ್ಯೂಸೆಕ್ಸ್‌ನಂತೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆ: ಡಿ. ೧೫ ರವರೆಗೆ ೩೩ ಕ್ಯೂಸೆಕ್ಸ್‌ನಂತೆ ಮುಂದುವರೆಸುವುದು. ನಂತರ ಡಿ. ೧೬ ರಿಂದ ಡಿ. ೩೧ ರವರೆಗೆ ನಿಲುಗಡೆ, ೨೦೧೮ರ ಜನೇವರಿ. ೦೧ ರಿಂದ ಕಾಲುವೆ ಮಟ್ಟ ತಲುಪುವವರೆಗೆ ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ಎಡದಂಡೆ ವಿಜಯನಗರ ಕಾಲುವೆಗಳು : ೨೦೧೮ರ ಫೆಬ್ರುವರಿ. ೨೮ ರವರೆಗೆ ೧೫೦ ಕ್ಯೂಸೆಕ್ಸ್‌ನಂತೆ ಮುಂದುವರೆಸುವುದು. ನಂತರ ಮಾರ್ಚ್. ೦೧ ರಿಂದ ಮೇ. ೧೦ ರವರೆಗೆ ೧೫೦ ಕ್ಯೂಸೆಕ್ಸ್‌ನಂತೆ ಹರಿಸುವುದು ಅಥವಾ ಈ ಕಾಲುವೆಯಡಿ ನೀರಿನ ಲಭ್ಯತೆಯು ಇರುವವರೆಗೆ ಮಾತ್ರ, ಇದರಲ್ಲಿ ಯಾವುದು ಮೊದಲೊ ಅದು ಅನ್ವಯಿಸುತ್ತದೆ.
ತುಂಗಭದ್ರಾ ಜಲಾಶಯದಲ್ಲಿ ಪ್ರಸಕ್ತ ವರ್ಷ ಪ್ರಸಕ್ತ ಸಾಲಿನಲ್ಲಿ ಲಭ್ಯವಾಗುವ ನೀರನ್ನು ಉಪಯೋಗಿಸುವ ಹಾಗೂ ಕುಡಿಯುವ ನೀರಿಗಾಗಿ ಜೂನ್-೨೦೧೮ ರವರೆಗೆ ನೀರನ್ನು ಕಾಯ್ದಿರಿಸಿ, ಉಳಿಕೆಯಾಗುವ ನೀರನ್ನು ತಡವಾಗಿ ಆರಂಭವಾದ ಮುಂಗಾರು ಹಂಗಾಮಿನ ಬೆಳದು ನಿಂತಿರುವ ಬೆಳೆಗಳಿಗೆ ಮತ್ತು ಮಳೆ ಆಶ್ರಿತ ಮಿತ ಬೆಳೆಗಳಿಗೆ ಕಾಲುವೆಗಳಲ್ಲಿ ನೀರನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ ರೈತ ಭಾಂದವರು ಲಭ್ಯವಿರುವ ಅಲ್ಪಪ್ರಮಾಣದ ನೀರನ್ನು ಮಿತವ್ಯಯವಾಗಿ ಬಳಸಿ ಇಲಾಖೆಯೊಡನೆ ಸಹಕರಿಸಲು ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರು ಹಾಗೂ ನೀರಾವರಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂದುವರೆದು ಯಾವುದೇ ಉಲ್ಲಂಘನೆ ಮಾಡಿ ಬೆಳೆ ನಷ್ಟ ಮಾಡಿಕೊಂಡಲ್ಲಿ ಇಲಾಖೆಯು ಜವಾಬ್ದಾರಿ ಯಾವುವುದಿಲ್ಲ

Please follow and like us:
error