ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡಲು ಒತ್ತಾಯಿಸಿ ಪ್ರತಿಭಟನೆ

ಕೊಪ್ಪಳ: ಕೃಷಿ ಚಟುವಟಿಕೆಗೆ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರುಬಿಡಲು ಆಗ್ರಹಿಸಿ ತಾಲೂಕಿನ ಮುನಿರಾಬಾದ್ ಕಾಡಾ ಕಛೇರಿ ಮುಂದೆ ತುಂಗಭದ್ರಾ ರೈತ ಹಿತರPಣಾ ವೇದಿಕೆಯಿಂದ ಬುಧವಾರ ಪ್ರತಿಭಟಿಸಲಾಯಿತು.
ಬಿಜೆಪಿ ಮುಖಂಡ ಅಮರೇಶ ಕರಡಿ ಮಾತನಾಡಿ, ಸದ್ಯ ತುಂಗಭದ್ರಾ ಜಲಾಶಯದಲ್ಲಿ ಸುಮಾರು ೪೬ ಟಿಎಮ್.ಸಿ ನೀರಿದ್ದು, ಒಂದು ಬೆಳೆಗೆ ನೀರು ಪೋರೈಸಬಹುದು. ಆದಾಗ್ಯೂ ಟಿಬಿ ಬೋರ್ಡ ಕಾರ್ಯದರ್ಶಿ ಆರ್ ರಂಗಾರಡ್ಡಿ ಮೊಂಡು ಹಟಕ್ಕೆಬಿದ್ದು ನೀರು ಬಿಡುತ್ತಿಲ್ಲ. ಈ ಬಗ್ಗೆ ಕಾಳಜಿ ವಹಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಕಣ್ಣುಮುಚ್ಚಿ ಕುಳಿತಿದ್ದಾರೆ. ಇಂತಹ ಸಮಯದಲ್ಲಿ ರೈತರ ನೆರವಿಗೆ ಬರಬೇಕಿದ್ದವರೇ ಜಾಣ ಕಿವುಡು ಮೆರೆಯುತ್ತಿರುವುದು ದುರಾದೃಷ್ಟಕರ. ಕಳೆದ ವರ್ಷ ಈ ವೇಳೆಗೆ ಜಲಾಶಯದಲ್ಲಿ ೪೩ ಟಿಎಮ್.ಸಿ ನೀರಿತ್ತು ಆದಾಗ್ಯೂ ನೀರು ಬಿಡಲಾಗಿತ್ತು. ಆದರೆ, ಈ ಬಾರಿ ಅದಕ್ಕಿಂತ ಹೆಚ್ಚು ನೀರಿದ್ದರೂ ನೀರು ಬಿಡದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿದೆ. ನಾಯಕರೇ ನಿಮ್ಮ ಶೋಕಿ ಜೀವನದ ಮದ್ಯೆ ಅನ್ನಬೆಳೆಯುವ ಬಡ ರೈತನಡೆಗೆ ಸ್ವಲ್ಪ ನಿಮ್ಮ ಗಮನ ಹರಿಸಿ ಎಂದರು. ಈಗ ಶಾಂತಿಯುತ ಧರಣಿ ಆರಂಭವಾಗಿದೆ. ಮುಂದೆ ಇದು ಉಘ್ರ ತಿರುವು ಪಡೆಯುವ ಮೊದಲು ಎಚ್ಚೆತ್ತು ನೀರು ಬಿಡುವ ಕುರಿತು ಶೀಘ್ರ ಪರಿಹಾರಕ್ಕೆ ಮಂದಾಗಬೇಕು. ಎಡದಂಡೆ ಕಾಲುವೆಗೆ ನೀರು ಬಿಡುವವರೆಗೆ ನಾವು ಇಲ್ಲಿಂದ ಕಾಲಕೀಳುವುದಿಲ್ಲವೆಂದು ಎಚ್ಚರಿಸಿದರು.

ಪ್ರತಿಭಟನೆಯ ನೇತೃತ್ವವ ವಹಿಸಿದ್ದ ರೈತ ಮುಖಂಡ ತಿಪ್ಪೆರುದ್ರಸ್ವಾಮಿ ಮಾತನಾಡಿ, ನಿಯಮದಂತ ಆಂದ್ರ ಮತ್ತು ಕರ್ನಾಟಕ ಏತರ ಅಧಿಕಾರಿಗಳು ಟಿಬಿ ಬೋರ್ಡ ಕಾರ್ಯದರ್ಶಿಯಾಗಿ ನೇಮಕ ವಾಗಬೇಕು. ಆದರೆ, ಆಂದ್ರ ಮೂಲದವರು ಟಿ.ಬಿ. ಬೋರ್ಡ ಕಾರ್ಯದರ್ಶಿಯಾಗಿದ್ದಾರೆ ಇವರಿಗೆ ರೈತಪರ ಖಾಳಜಿ ಇಲ್ಲ. ಬದಲಾಗಿ ಆಂದ್ರ ಲಾಭಿಮಾಡುತ್ತಿದ್ದು, ಖಾಸಗಿ ಕಾರ್ಖಾನೆಗಳು ಜಲಾಶಯದ ಹಿನ್ನೀರಿನಿಂದ ನೀರು ಖದಿಯುತ್ತಿದ್ದರು ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಜಮೀನಿಗೆ ಹರಿಯಬೇಕಿದ್ದ ನೀರು ಖಾಸಗಿ ಕಾರ್ಖಾನೆಗಳಿಗೆ ಹೋಗುತ್ತಿದ್ದು ತಡೆಯ ಬೇಕಿದ್ದ ರಾಜ್ಯ ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. ನೀರು ಕಳ್ಳತನ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಪರಣ್ಣ ಮನವಳ್ಳಿ, ಜಿಧ್ಯP ವಿರುಪಾPಪ್ಪ ಸಿಂಗನಾಳ ರೈತರ ಪರವಾಗಿ ಮಾತನಾಡಿದರು, ಮುಖಂಡರಾದ ಬಸವರಾಜ ದಡೇಸಗೂರ, ಯಮನಪ್ಪ ವಿಠಲಾಪೂರ, ಭೀಮನಗೌಡ ಆರಾಳ, ನಾಗರಾಜ ಬಿಲ್ಗಾರ, ಸಂತೋಷ ಕೊಳಜಿ, ಸೇರಿದಂತೆ ಕೊಪ್ಪಳ, ಗಂಗಾವತಿ ತಾಲೂಕಿನ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error