ತುಂಗಭದ್ರಾ ಎಡದಂಡೆ ಕಾಲುವೆ : ಪರಿಷ್ಕೃತ ನೀರು ಹರಿಸುವಿಕೆಯ ವೇಳಾಪಟ್ಟಿ

ಕೊಪ್ಪಳ ಜ.  : ತುಂಗಭದ್ರಾ ಎಡದಂಡೆ ಕಾಲುವೆಗೆ ಸಂಬAಧಿಸಿದAತೆ 2019-20 ನೇ ಸಾಲಿಗೆ ಹಿಂಗಾರು ಹಂಗಾಮಿಗೆ ನೀರೊದಗಿಸಲು ಪರಿಷ್ಕೃತ ನೀರು ಹರಿಸುವಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 

2019 ರ ನವೆಂಬರ್ 21 ರಂದು ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಲಕ್ಷö್ಮಣ ಸಂಗಪ್ಪ ಸವದಿ ಇವರ ಅಧಕ್ಷತೆಯಲ್ಲಿ ಜರುಗಿದ 113ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ತುಂಗಭದ್ರಾ ಯೋಜನೆಯ ವಿವಿಧ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಹರಿಸುವಿಕೆಯ ಪ್ರಮಾಣದ ವಿವರ ಮತ್ತು ವೇಳಾಪಟ್ಟಿಯನ್ನು ಅಧೀಕ್ಷಕ ಅಭಿಯಂತರರ ಕಛೇರಿ ಪತ್ರ ಸಂಖ್ಯೆ: 2174 ದಿನಾಂಕ: 22.11.2019ರಲ್ಲಿ ಪ್ರಕಟಿಸಲಾಗಿತ್ತು.  ಪ್ರಸ್ತುತ ನೀರಿನ ಲಭ್ಯತೆಯ ಅನುಸಾರ ತುಂಗಭದ್ರಾ ಎಡದಂಡೆ ಕಾಲುವೆಯ ಹಿಂಗಾರು ಹಂಗಾಮಿಗೆ ನೀರು ಹರಿಸುವಿಕೆಯ ಪರಿಷ್ಕೃತ ಪ್ರಮಾಣದ ವಿವರವನ್ನು ಅಧ್ಯಕ್ಷರ ಆದೇಶದ ಮೇರೆಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತ, ತುಂಗಭದ್ರಾ ಯೋಜನಾ ವೃತ್ತದಿಂದ ಅಚ್ಚುಕಟ್ಟು ಪ್ರದೇಶದ ರೈತರ ಮಾಹಿತಿಗಾಗಿ ಪ್ರಕಟಿಸಲಾಗಿದೆ.  
2019 ರ ನವೆಂಬರ್ 21 ರಂದು ಜರುಗಿದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಿದಂತೆ ಹಿಂಗಾರು ಹಂಗಾಮಿಗೆ  ಡಿಸೆಂಬರ್ 01 ರಿಂದ 31 ರವರೆಗೆ ಸರಾಸರಿ 3800 ಕ್ಯೂಸೆಕ್ಸ್,  2020 ರ ಜನವರಿ 01 ರಿಂದ 31 ರವರೆಗೆ ಸರಾಸರಿ 3400 ಕ್ಯೂಸೆಕ್ಸ್, ಫೆಬ್ರವರಿ 01 ರಿಂದ 29 ರವರೆಗೆ ಸರಾಸರಿ 3000 ಕ್ಯೂಸೆಕ್ಸ್, ಮಾರ್ಚ್ 01 ರಿಂದ 31 ರವರೆಗೆ 3000 ಕ್ಯೂಸೆಕ್ಸ್, ಏಪ್ರಿಲ್ 01 ರಿಂದ 10 ರವರೆಗೆ ಕುಡಿಯುವ ನೀರಿಗಾಗಿ  2000 ಕ್ಯುಸೆಕ್ಸ್, ಏಪ್ರಿಲ್ 11 ರಿಂದ ಮೇ 10 ರವರೆಗೆ  ವಿಜಯನಗರ ಕಾಲುವೆಗಳಿಗೆ 100 ಕ್ಯೂಸೆಕ್ಸ್ ನೀರು ಹರಿಸಲು ನಿರ್ಧರಿಸಲಾಗಿತ್ತು.
ಪ್ರಸ್ತುತ ನೀರಿನ ಲಭ್ಯತೆ ಆಧಾರದಲ್ಲಿ ಪರಿಷ್ಕೃತ ವೇಳಾ ಪಟ್ಟಿಯ ಪ್ರಕಾರ  ಜನವರಿ 24 ರವರೆಗೆ ಕಾಲುವೆಯಲ್ಲಿ  ಹರಿಸಿದ  ಮತ್ತು ಮುಂದೆ ಹರಿಸಬಹುದಾದ ನೀರಿನ ಪ್ರಮಾಣದ ವಿವರಗಳು ಹೀಗಿವೆ, 2019ರ ಡಿಸೆಂಬರ್ 01 ರಿಂದ 31 ರವರೆಗೆ 3085 ಕ್ಯುಸೆಕ್ಸ್, ಜನವರಿ 01 ರಿಂದ 24 ರವರೆಗೆ 3494 ಕ್ಯೂಸೆಕ್ಸ್, ಜನವರಿ 25 ರಿಂದ 31 ರವರೆಗೆ 3900 ಕ್ಯೂಸೆಕ್ಸ್, ಫೆಬ್ರವರಿ 01 ರಿಂದ 29 ರವರೆಗೆ  3350 ಕ್ಯೂಸೆಕ್ಸ್, ಮಾರ್ಚ್ 01 ರಿಂದ 31 ರವರೆಗೆ 3500 ಕ್ಯೂಸೆಕ್ಸ್, ಏಪ್ರಿಲ್ 01 ರಿಂದ 10 ರವರೆಗೆ 2500 ಕ್ಯೂಸೆಕ್ಸ್, ಏಪ್ರಿಲ್ 11 ರಿಂದ 20 ರವರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ನಗರ/ಪಟ್ಟಣಗಳ ಕುಡಿಯುವ ನೀರಿಗಾಗಿ 1250 ಕ್ಯೂಸೆಕ್ಸ್, ವಿಜಯನಗರ ಕಾಲುವೆಗಳಿಗೆ ಏಪ್ರಿಲ್ 21 ರಿಂದ ಮೇ 10 ರವರೆಗೆ 100 ಕ್ಯೂಸೆಕ್ಸ್ ನೀರು ಹರಿಸಲು ನಿರ್ಧರಿಸಲಾಗಿದೆ. 
ಉಳಿದಂತೆ ತುಂಗಭದ್ರಾ ಜಲಾಶಯದ ಬಲಭಾಗದಡಿಯಲ್ಲಿ ಬರುವ  ಕಾಲುವೆಗಳ ವೇಳಾಪಟ್ಟಿಯಲ್ಲಿ ಮತ್ತು ಹರಿವಿನ ಪ್ರಮಾಣದಲ್ಲಿ  ಯಾವುದೇ ಬದಲಾವಣೆ ಇರುವುದಿಲ್ಲ. ಹಾಗೂ ಈಗಾಗಲೇ ಈ ಹಿಂದಿನ ಪ್ರಕಟಣೆಯಲ್ಲಿ ಬೆಳೆ ಉಲ್ಲಂಘನೆ ಮಾಡದಂತೆ ಹಾಗೂ ನಿಗದಿಪಡಿಸಿದ ಮಿತ ಬೆಳೆಗಳನ್ನು ಮಾತ್ರ ಬೆಳೆಯಬೇಕೆಂದು ರೈತರಲ್ಲಿ ಮನವಿ ಮಾಡಲಾಗಿತ್ತು. ಆದರೂ ಬಹುತೇಕ ರೈತರು ಅತೀ ಹೆಚ್ಚಿನ ನೀರಿನ ಸಾಂದ್ರತೆಯ ಬೇಡಿಕೆ ಇರುವ ಭತ್ತದ ಬೆಳೆಯನ್ನು ಬೆಳೆಯುತ್ತಿರುವುದು ಕಂಡುಬAದಿದೆ. ಆದ್ದರಿಂದ ಬೆಳೆ ಉಲ್ಲಂಘನೆ ಮಾಡದಂತೆ ಮತ್ತು ಮಿತ ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಮತ್ತು ಅಧಿಕಾರಿಗಳೊಡನೆ ಸಮರ್ಪಕ ನೀರು ನಿರ್ವಹಣೆಗೆ ಸಹಕರಿಸಲು ರೈತರಲ್ಲಿ ಮತ್ತೊಮ್ಮೆ ಕೋರಲಾಗಿದೆ. ಹಾಗೂ ಬೆಳೆ ಉಲ್ಲಂಘನೆಯಿAದ ಉಂಟಾಗುವ ಯಾವುದೇ ನಷ್ಟಕ್ಕೆ ಇಲಾಖೆಯು ಹೊಣೆಯಾಗುವುದಿಲ್ಲವೆಂದು ಮುನಿರಾಬಾದ್ ಕನೀನಿನಿ, ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ನೀರಾವರಿ ಅಧಿಕಾರಿಗಳು  ತಿಳಿಸಿದ್ದಾರೆ.     

Please follow and like us:
error