ಕೊಪ್ಪಳ : ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ೬ ವರ್ಷದ ಪುಟ್ಟ ಹೆಣ್ಣುಮಗು ತಾಯಿ ಯಂತೆ ನೋಡಿಕೊಳ್ಳುತ್ತಿರುವ ಸುದ್ದಿ ಪ್ರಸಾರವಾ ಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಆಸ್ಪತ್ರೆಗೆ ಬೇಟಿ ನೀಡಿದ್ದಾರೆ.ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ದುರ್ಗಮ್ಮಳಿಗೆಹೊಟ್ಟೆನೋವು, ತಲೆನೋವು ಅಂತ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಾಗೇ ಮೆಲ್ನೋಟಕ್ಕೆ ಮಾನಸಿಕ ಅಸ್ವಸ್ಥಳಂತೆ ಇದ್ದಾಳೆ. ಈಕೆಯನ್ನ ನಾಲ್ಕೈದು ದಿನಗಳ ಹಿಂದೆ ಈಕೆಯ ಗಂಡ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾನೆ. ಮಗಳಿಗೆ ಇಲ್ಲೋಗಿ ಬರ್ತಿನಿ ಅಂತ ಹೇಳಿ ಹೋದವರು ಇದು ವರೆಗೂ ಇತ್ತ ಸುಳಿದಿಲ್ಲ. ಅನಾರೋಗ್ಯದ ತಾಯಿಯನ್ನ ನೋಡಿಕೊಳ್ಳೊದಿಕ್ಕೆ ಈ ಮಗು ಬಿಟ್ರೆ ಬೇರಾರು ಇಲ್ಲ. ತನಗೆ ತುತ್ತು ಕೊಟ್ಟು ಬೆಳಸಿದ ತಾಯಿಯನ್ನ ಬಿಟ್ಟೋಗೋಕೆ ಆಗದೆ ಹೆತ್ತವಳ ಆರೈಕೆ ಮಾಡುತ್ತಿದ್ದಾಳೆ. ಆಸ್ಪತ್ರೆಗೆ ಬಂದವರ ಬಳಿ ಭಿಕ್ಷೆ ಬೇಡಿ ಏಳೆನೀರು, ಹಾಲು ತಂದುಕೊಟ್ಟು ಉಪಚರಿಸುತ್ತಿದ್ದಾಳೆ.ವರದಿ ಪ್ರಸಾರವಾಗುತ್ತಿದ್ದಂತೆ ಆಸ್ಪತ್ರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಭೇಟಿ ನೀಡಿದ್ದಾರೆ. ದುರುಗಮ್ಮಮತ್ತು ಅವಳ ೬ ವರ್ಷದ ಮಗಳು ಭಾಗ್ಯ ಳನ್ನ ವಿಚಾರಿಸಿದ್ದಾರೆ. ಮಾನವೀಯತೆ ಇಲ್ಲದೆ ಹೆಂಡತಿ ಮಗಳನ್ನ ಬಿಟ್ಟು ಹೋಗಿರುವ ಗಂಡನ ಬಗ್ಗೆ ವಿಚಾರಿಸಿ ಅಡ್ರೆಸ್ ಕಲೆಹಾಕಿದ್ದಾರೆ. ಅವರನ್ನ ಕರೆಯಿಸಿ ದುರ್ಗಮ್ಮಳನ್ನ ಕಳಿಸಿಕೊಡೊಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಅವರ್ಯಾರು ಬರದೆ ಇದ್ರೆ ತಾಯಿ ಮಗಳಿಗೆ ಸಾದರಗೃಹದಲ್ಲಿ ವಸತಿ ಸಹಿತ ಮೆಡಿಕಲ್ ವ್ಯವಸ್ತೆ ಕಲ್ಪಿಸುವುದಾಗಿ ಹೇಳಿದ್ದಾರೆ. ಹಾಗೇ ಪುಟ್ಟ ಬಾಲಕಿ ಭಾಗ್ಯಳ ಶಿಕ್ಷಣದ ಬಗ್ಗೆ ಕೂಡ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ. ಸುದ್ದಿಗೆ ಸ್ಪಂದಿಸಿರುವ ಸಾರ್ವಜನಿಕರು ಸಹ ಸಹಾಯಕ್ಕೆ ಮುಂದಾಗಿದ್ದಾರೆ . ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದ ಮಾಜಿ ಡಿಸಿಎಂ ಆರ್. ಅಶೋಕ್ ಆ ಬಾಲಕಿಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳಲು ಮುಂದಾಗಿದ್ದಾರೆ. ಇದಲ್ಲದೆ ನೂತನ ಸಂಸದ ಸಂಗಣ್ಣ ಕರಡಿ ೧೦ ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದಾರೆ.ಆರ್. ಅಶೋಕ್ ಬಿಜೆಪಿ ಮುಖಂಡ ಅಮರೇಶ್ ಕರಡಿಗೆ ದೂರವಾಣಿ ಕರೆ ಮಾಡಿ, ಆ ಬಾಲಕಿಯ ತಾಯಿಯ ಆರೋಗ್ಯ ವಿಚಾರಿಸಿ, ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಇದಲ್ಲದೆ ಭಾಗ್ಯಶ್ರೀಯ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹತ್ತುಕೊಳ್ಳುವುದಾಗಿ ತಿಳಿಸಿದ್ದಾರೆ.ಭಾಗ್ಯಶ್ರೀ ತನ್ನ ತಾಯಿಯ ಆರೈಕೆ ಮಾಡುವುದು, ಭಿಕ್ಷೆ ಬೇಡಿ ಚಿಕಿತ್ಸೆ ಕೊಡಿಸುವ ಸುದ್ದಿ ತಿಳಿದ ಸಂಸದ ಸಂಗಣ್ಣ ಕರಡಿ ಕೂಡಲೇ ತಮ್ಮ ಪುತ್ರ ಜಿಪಂ ಸದಸ್ಯ ಗವಿಸಿದ್ದಪ್ಪ ಕರಡಿ ಅವರಿಗೆ ಆಸ್ಪತ್ರೆಗೆ ಕಳುಹಿಸಿ ಆ ಬಾಲಕಿ ಮತ್ತು ಆಕೆಯ ತಾಯಿಯ ಚಿಕಿತ್ಸೆಗೆ ನೆರವಾಗಲು ತಿಳಿಸಿದ್ದಾರೆ. ಹೀಗಾಗಿ ಗವಿಸಿದ್ದಪ್ಪ ಕರಡಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಬಾಲಕಿ ಭಾಗ್ಯಶ್ರೀ ಸೋದರ ಮಾವ ವೆಂಕಟೇಶ್ಗೆ ೧೦ ಸಾವಿರ ರೂಪಾಯಿ ಧನ ಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ ದುರ್ಗಮ್ಮನಿಗೆ ೨ ಸೀರೆ, ಕುಪ್ಪಸ, ಬಾಲಕಿಗೆ ೨ ಫ್ರಾಕ್, ಹಣ್ಣು, ಬ್ರೆಡ್ ನೀಡಿ ವೈದ್ಯರೊಂದಿಗೆ ಆಕೆಯ ಆರೋಗ್ಯದ ಬಗ್ಗೆ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.ಈ ವೇಳೆ ಜಿಪಂ ಸದಸ್ಯ ರಾಮಣ್ಣ ಚೌಡ್ಕಿ, ಬಸವರಾಜ ಭೋವಿ, ಗವಿಸಿದ್ದಪ್ಪ ಜಂತಕಲ್, ಬಸವರಾಜ ಇಂದರಗಿ, ವಸಂತ ಸೇರಿದಂತೆ ಮತ್ತಿತರರು ಇದ್ದರು.
ತಾಯಿಗೆ ತಾಯಿಯಾದ ೬ ವರ್ಷದ ಮಗು : ಸಾರ್ವಜನಿಕರ ಸಹಾಯ ಹಸ್ತ
Please follow and like us: