ತಾಂಡಾ ಕಂದಾಯ ಗ್ರಾಮಗಳನ್ನಾಗಿಸುವ ಮಸೂದೆಗೆ ಅನುಮೋದನೆಗೆ ಒತ್ತಾಯ ; ರಾಷ್ಟ್ರಪತಿಗೆ ಪತ್ರ 

ಲಂಬಾಣಿ ತಾಂಡಾಗಳನ್ನು ಕಂದಾಯ 


ಗ್ರಾಮಗಳನ್ನಾಗಿಸುವ ರಾಜ್ಯ. ದ ಮಸೂದೆಗೆ ಅನುಮೋದನೆ ನೀಡಲು ಒತ್ತಾಯಿಸಿ , ರಾಷ್ಟ್ರಪತಿಗಳಿಗೆ ಪತ್ರ ಬರೆಯುವುದರ ಮೂಲಕ ಪತ್ರ ಚಳುವಳಿ ಮಾಡಲಾಯಿತು. 
ಬಳ್ಳಾರಿಯ ಜಿಲ್ಲಾಧಿಕಾರಿಳ ಕಚೇರಿ ಪಕ್ಕದಲ್ಲಿ ಇರುವ ಮುಖ್ಯ ಅಂಚೆ ಕಚೇರಿಗೆ ಆಗಮಿಸಿದ ಬಂಜಾರ ಸಮುದಾಯದ ಮುಖಂಡರು ಪತ್ರ ಬರೆದು ರಾಷ್ಟ್ರಪತಿಗಳಿಗೆ ಪತ್ರವನ್ನು ಪೋಸ್ಟ್ ಮಾಡಿದರು. 

ಪತ್ರಕರ್ತ ಕೆ.ಸುರೇಶ್ ಚೌವ್ಹಾಣ್ ಮಾತನಾಡಿ  ಲಂಬಾಣಿ ಮತ್ತಿತರ ಶೋಷಿತ ದಲಿತ-ಬುಡಕಟ್ಟುಗಳ ತಾಂಡ, ಹಟ್ಟಿ, ಹಾಡಿ, ಪಲ್ಲಿ, ಗಲ್ಲಿ, ವಾಡಿ, ಪಾಳ್ಯ ವಾಸಿಗರಿಗೆ ಭೂ ಒಡೆತನ ಮತ್ತು ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಉದ್ದೇಶದ ಕ್ರಮ ಸಂಖ್ಯೆ 37 ರ ‘ಕರ್ನಾಟಕ ಭೂ ಸುಧಾರಣೆಗಳ ವಿಧೇಯಕ-2016’ ಅನ್ನು ಅನುಮೋದಿಸಲು ರಾಷ್ಟ್ರಪತಿಯವರನ್ನು  ಕೋರಿ ಈ ಪತ್ರ ಚಳುವಳಿ ಇಂದು ಮಾಡುತ್ತಿದ್ದು,  ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಳೆದರು ಲಂಬಾಣಿ ಮತ್ತಿತರ ಸಮುದಾಯದ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿಲ್ಲ. ಹಾಗಾಗಿ ಯಾರದೊ ಖಾಸಗಿ ಮಾಲಿಕತ್ವದ ಜಮೀನಿನಲ್ಲಿ, ಅರಣ್ಯ ಭೂಮಿಯಲ್ಲಿ, ಬಗರ್ ಹುಕುಂ ಜಮೀನಿನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿಯವರೆಗೆ ತಮ್ಮ ಮನೆಯ ಹಕ್ಕು ಪತ್ರ ಯಾರ ಹೆಸರಲ್ಲಿದೆ ಎಂಬ ಮಾಹಿತಿಯೆ ಈ ಸಮುದಾಯಗಳಿಗೆ ಇಲ್ಲ ಎಂದರು. 

ಬಂಜಾರ ಸಮುದಾಯದ ಮುಖಂಡ ಡಿ.ರಾಮಾನಾಯ್ಕ್ ಮಾತನಾಡಿ ಜನವಸತಿಗೆ ಶಾಶ್ವತ ನೆಲೆ ಇಲ್ಲದ ಕಾರಣ ವಲಸೆ, ಅಲೆಮಾರಿಗಳಂತೆ ಈ ಸಮುದಾಯ ತಿರುಗಾಡುತ್ತಿದೆ. ಮಕ್ಕಳ ಮಾರಾಟ, ಮಹಿಳೆಯರ ಮಾರಾಟ ಪ್ರಕರಣಗಳು ಸಮುದಾಯದಲ್ಲಿ ಭೀಕರ ಬಡತನ ಅವರಿಸಿರುವುದನ್ನು ಎತ್ತಿ ತೋರಿಸುತ್ತಿದೆ. ಇತ್ತ ಮನೆಯ ಹಕ್ಕುಗಳು ಇಲ್ಲದೆ, ಅತ್ತ ಉಳುಮೆಗೆ ಭೂಮಿಯೂ ಇಲ್ಲದೇ ಲಂಬಾಣಿಗರು ಪರದಾಡುವಂತ ಸ್ಥಿತಿ ಇದೆ ಎಂದು ಹೇಳಿದರು. 

ಕಂದಾಯ ಗ್ರಾಮಗಳಾಗಿಲ್ಲದೆ, ನಾಗರಿಕ ಹಕ್ಕುಗಳಿಂದ ವಂಚಿತರಾಗಿರುವ ಲಂಬಾಣಿಗರನ್ನು ಮುಖ್ಯವಾಹಿನಿ ಉದ್ದೇಶಿತ ‘ ಕರ್ನಾಟಕ ಭೂ ಸುಧಾರಣೆ ವಿಧೇಯಕ-2016’ ಅನುಮೋದನೆ ಮಾಡಲು ಒತ್ತಾಯಿಸಲಾಯಿತು. ಬಂಜಾರ ಸಮುದಾಯದ ಮುಖಂಡರಾದ ವಿಷ್ಣು, ಕೃಷ್ಣನಾಯ್ಕ್, ಉಮೇಶ್ ನಾಯ್ಕ್,  ಠಾಕೂರ್ ನಾಯ್ಕ್, ವಿನೋದ್ ನಾಯ್ಕ್, ಹೊನ್ನಳ್ಳಿ ತಾಂಡಾದ ರಾಮಾನಾಯ್ಕ್, ರವಿನಾಯ್ಕ್, ಪ್ರವೀಣ್ ನಾಯ್ಕ್  ಇದ್ದರು.

Leave a Reply