You are here
Home > Koppal News > ತಹಶೀಲ ಕಾರ್ಯಾಲಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ

ತಹಶೀಲ ಕಾರ್ಯಾಲಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ

parisara-dinacharane
ಕೊಪ್ಪಳ : ವಿಶ್ವ ಪರಿಸರ ದಿನಾಚರಣೆ ನಿಮಿತ್ಯ ದಿ: ೦೫-೦೬-೨೦೧೬ ರಂದು ರವಿವಾರ ಬೆಳಿಗ್ಗೆ ಜಿಲ್ಲಾದ್ಯಂತ ಸಸಿ ನೆಡುವ ನಿರ್ಧಾರದ ಹಿನ್ನೆಲೆಯಲ್ಲಿ ಸತತವಾಗಿ ೪೨. ರಿಂದ ೪೩ ಡಿಗ್ರಿ ತಾಪಮಾನವನ್ನು ಮನಗಂಡು ಇದಕ್ಕಾಗಿ ಹೆಚ್ಚು ಹೆಚ್ಚು ಸಸಿಗಳನ್ನು ಬೆಳಸಲೇ ಬೇಕು ಎನ್ನುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ವಿವಿಧ ಇಲಾಖೆ ಕಂಪನಿ, ಹಾಗೂ ಸಂಘ ಸಂಸ್ಥೆಗಳು ಸಹಯೋಗದಲ್ಲಿ ನಗರದ ಜನ ವಸತಿ ಪ್ರದೇಶ ಹಾಗೂ ಇಲಾಖೆಗಳ ಆವರಣದಲ್ಲಿ ಸಸಿ ನೆಡಲು ಮುಂದಾಗಿರುವ ಸಂಕಲ್ಪದೊಂದಿಗೆ ಕೊಪ್ಪಳದ ತಹಶೀಲ ಹಾಗೂ ಉಪನೊಂದಣಿ ಇಲಾಖೆಗಳ ಆವರಣದಲ್ಲಿ ಮಾನ್ಯ ತಹಶೀಲ್ದಾರರಾದ ಶ್ರೀ ಪುಟ್ಟರಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಒಂದು ಕಾರ್ಯಕ್ರಮದಲ್ಲಿ ಕೊಪ್ಪಳ ರಿಯಲ್ ಎಸ್ಟೇಟ್ ಹಾಗೂ ಡೆವ್ಹಲಪರ‍್ಸ್ ಅಶೋಷಿಯನ್ ಪರವಗಿ ಅರ್ಜುನಸಾ ಕಾಟವಾ, ನಾಗರಾಜ ಬಳ್ಳಾರಿ, ರವಿ ಬುಡ್ಡೊಡಿ, ಶಬ್ಬಿರ್ ಸಿದ್ದಖಿ, ಶಿವನಂದ ಹೂದ್ಲೂರು, ಸಂಗಪ್ಪ ಸಂಕ್ಲಾಪೂರ, ಶ್ರೀಕಾಂತ ದಲಬಂಜನ, ಎಂ.ಡಿ ಆಸಿಫ್, ರೇಣುಕಾ ಪ್ರಸಾದ ಕಾಟ್ರಳ್ಳಿ, ಎಸ್.ಬಿ ಮಾಲಿಪಾಟೀಲ್ ಸೈಯದ ಬಗನಾಳ, ಗಫಾರ್ ದಿಡ್ಡಿ ಇನ್ನೂ ಮುಂತಾದ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ಅರ್ಜುನಸಾ ಕಾಟವ ತಿಳಿಸಿದ್ದಾರೆ.

Leave a Reply

Top