ತಬ್ಬಲಿ ಮಕ್ಕಳಿಗೆ ಜಿಲ್ಲಾಧಿಕಾರಿಯ ಸಾಂತ್ವಾನ

ಆಕ್ರೋಶಗೊಂಡ ಜನರಿಗೆ ಸಮಾಧಾನ ಹೇಳಿದ ಡಿಸಿ

ತಬ್ಬಲಿ ಮಕ್ಕಳ ಭವಿಷ್ಯಕ್ಕೆ ನೆರವಾಗುವ ಭರವಸೆ

ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮದ ಎಚ್ಚರಿಕೆ

Kanakagiri News ಚಾಲಕನ ನಿರ್ಲಕ್ಷದಿಂದ ಐವರು ಕೃಷಿ ಕಾರ್ಮಿಕ ಮಹಿಳೆಯರು ಸಾವನ್ನಪ್ಪಿದ ಹಿನ್ನೆಲೆ ನವಲಿ ತಹಶಿಲ್ದಾರ ಕಚೇರಿ ಮುಂದೆ ಸಿಪಿಐ ಎಂಎಲ್ ನೇತೃತ್ವದಲ್ಲಿ ಧರಣಿ ನಡೆಯಿತು.

ಕೊಪ್ಪಳದ ಕನಕಗಿರಿ ತಾಲೂಕಿನ ನವಲಿ ಗ್ರಾಮದಲ್ಲಿ ಪ್ರತಿಭಟನೆ ಮಾಡಿದ ಹೋರಾಟಗಾರರು ಮೃತ ಕುಟುಂಬಕ್ಕೆ 10 ಲಕ್ಷ ಪರಿಹಾರ, 2 ಎಕ್ರೆ ಜಮೀನು ನೀಡುವಂತೆ ಒತ್ತಾಯಿಸಿದರು.ಕಾರಟಗಿ ತಾಲೂಕಿನ ಸೋಮನಾಳ ಬಳಿಯ ತುಂಗಾಭದ್ರ ಎಡದಂಡೆ ಕಾಲುವೆಗೆ ಪಲ್ಟಿಯಾಗಿದ್ದ ಟ್ರ್ಯಾಕ್ಟರ್ ನ ಚಾಲಕ ಸೋಮನಾಳಕ್ಯಾಂಪ್ ನ ಪಟ್ಟಾಭಿರಾಮಯ್ಯನ ಬಂಧಿಸುವಂತೆ ಆಗ್ರಹಿಸಿದರು.

ಮೃತ ಕುಟುಂಬದವರ ಜೊತೆ CPIML, ಅಖಿಲ ಭಾರತ ಕೃಷಿ, ಗ್ರಾಮೀಣ ಕಾರ್ಮಿಕ ಸಂಘಟನೆಯಿಂದ ಧರಣಿ ಸತ್ಯಾಗ್ರಹ ನಡೆಯಿತು. ಅಪಘಾತದಲ್ಲಿ ತಾಯಿಯನ್ನ ಕಳೆದುಕೊಂಡು ತಬ್ಬಲಿಯಾದ ಇಬ್ಬರು ಸಹೋದರಿಯರು ಹಾಜರಿದ್ದರು. ಈ ಮಕ್ಕಳ ತಂದೆ ಈ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ರುಈಗ ತಂದೆ ತಾಯಿ ಕಳೆದುಕೊಂಡು ತಬ್ಬಲಿಯಾದ ಮಕ್ಕಳಿಗೆ ಬದುಕು ಕಲ್ಪಿಸಿಕೊಡಲು ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಪ್ರತಿಭಟನ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು. ಅಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಕೊಡಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಹೋರಾಟಗಾರ ಜೆ.ಭಾರದ್ವಾಜ್, ಶಾಸಕ ಬಸವರಾಜ ದಡೆಸುಗೂರು ಉಪಸ್ಥಿತರಿದ್ದರು.

ಸ್ವತಃ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ತಮ್ಮ ಅಹವಾಲು ಕೇಳಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.

Please follow and like us:
error