ತಂಗಡಗಿ ಗೆಲುವಿಗಾಗಿ ದೀಡ್ ನಮಸ್ಕಾರ

ಕಾಂಗ್ರೆಸ್ ಶಾಸಕ ಹಾಗೂ ಅಭ್ಯರ್ಥಿ ಶಿವರಾಜ್ ತಂಗಡಗಿ ಗೆಲುವಿಗಾಗಿ ಇಬ್ಬರು ಅಭಿಮಾನಿಗಳು ದೀರ್ಘದಂಡ ನಮಸ್ಕಾರ ಹಾಕಿದ ಘಟನೆ ಕೊಪ್ಪಳದ ಕನಕಗಿರಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ವೇಳೆಗೆ 42° ತಾಪಮಾನದಲ್ಲಿ ಸುಡೊ ರಸ್ತೆಯುದ್ದಕ್ಕು ಸುಮಾರು 9 ಕಿ.ಮಿ ವರೆಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಕನಕಗಿರಿ ಕ್ಷೇತ್ರದ ಕನ್ನೇರಮಡುಗು ಗ್ರಾಮದ ನಿವಾಸಿಗಳಾದ ಮಹೇಶ ಅಗಸಿಮುಂದಿನ್, ಬಸವರಾಜ್ ಕಂಬಳಿ ತಂಗಡಗಿ ಯ ಕಟ್ಟಾ ಅಭಿಮಾನಿಗಳಾಗಿದ್ದು, ತಮ್ಮ ನಾಯಕ ಈ ಬಾರಿಯು ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಲಿ ಅಂತ ಹರಕೆ ಹೊತ್ತುಕೊಂಡಿದ್ದಾರೆ. ಕನ್ನೇರುಮಡುಗು ಗ್ರಾಮದಿಂದ ಕನಕಗಿರಿಯ ಕನಕಚಲಪತಿ ಲಕ್ಷ್ಮೀನರಸಿಂಹ ದೇವಸ್ಥಾನದ ವರೆಗೆ ಧೀರ್ಘದಂಡ ನಮಸ್ಕಾರ ಹಾಕಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇವರಿಬ್ಬರ ಕಾರ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿ ಅಭಿನಂಧಿಸಿದ್ದಾರೆ.