ಡ್ಯಾಂ ಹೂಳೆತ್ತುವ ಕಾರ್ಯ : ಡಿಜೆಲ್ ವೆಚ್ಚ ಭರಿಸಲು ಮುಂದಾದ ಯುವ ಉದ್ಯಮಿ ಹೆಚ್.ಜಿ. ಗುರುದತ್ತ

hg-gurudatt-hospeteತುಂಗಭದ್ರಾ ಡ್ಯಾಂ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ.. ಸ್ವಯಂಪ್ರೇರಿತ ರಾಗಿ ರೈತರೇ ನಡೆಸುತ್ತಿರುವ ಹೂಳೆತ್ತುವ ಕೆಲಸಕ್ಕೆ ಬಹಳಷ್ಟು ಜನ ಸಹಾಯ ಹಸ್ತ ಚಾಚುತ್ತಿದ್ದಾರೆ. ಇಡೀ ಕಾರ್ಯಾಚರಣೆಗೆ ಬೇಕಾದ ಡಿಜೆಲ್ ವೆಚ್ಚ ಭರಿಸಲು ಮುಂದಾಗಿದ್ದಾರೆ ಯುವ ಉದ್ಯಮಿ, ಹೊಸಪೇಟೆ ಯ ಮಾಜಿ ಶಾಸಕ ಹೆಚ್.ಆರ್.ಗವಿಯಪ್ಪನವರ ಪುತ್ರ ಹೆಚ್.ಜಿ. ಗುರುದತ್ತ…ರೈತರ ಬಹುಬೇಡಿಕೆಯಾಗಿದ್ದ ಇಂಧನ ಭರಿಸಲು  ಸ್ಥಳೀಯ ಹೆಆರ್ ಜಿ ಸ್ಟೀಲ್ಸ್ ನ ಮಾಲಿಕರೂ ಆಗಿರುವ  ಹೆಚ್.ಜಿ.ಗುರುದತ್ತ ಮುಂದಾಗಿದ್ದಾರೆ. ಹೂಳೆತ್ತುವ ಕಾಮಗಾರಿಯಲ್ಲಿ ಸರಕಾರ ಕನಿಷ್ಠ ಇಂದನವನ್ನಾದರೂ  ಭರಿಸಲು ರೈತರು ಆಗ್ರಹಿಸಿದ್ದರು. ರೈತರ ಬೇಡಿಕೆಯನ್ನು ಗಮನಿಸಿ ಇಂದು ಗವಿಮಠದ ಶ್ರೀಗಳ ಸಮ್ಮುಖದಲ್ಲಿ ೫ ಲಕ್ಷ ರೂಪಾಯಿಗಳ ಚೆಕ್ ನ್ನು ನೀಡಿದ ಗುರುದತ್ ಪ್ರತಿದಿನ ೮೦೦ದಿಂದ ೧೦೦೦ ಲೀಟರ್ ಡಿಜಲ್ ಬೇಕಾಗುತ್ತೆ.  ಅದಕ್ಕೆಬೇಕಾಗುವ ಹಣವನ್ನು ನೀಡಲಾಗುವದು. ಹೂಳು ತೆಗೆಯುವ ಕಾರ್ಯಾಚರಣೆ  ಎಲ್ಲಿಯವರೆಗೆ ನಡೆಯುತ್ತದೆ ಯೊ ಅಲ್ಲಿಯವರೆಗೆ ನಾವು ವೆಚ್ಚವನ್ನು ಭರಿಸಲು ಸಿದ್ದರಿದ್ದೇವೆ. ಇದು ದೊಡ್ಡ ಕಾರ್ಯಾವಾಗಿದ್ದು ಇದರಲ್ಲಿ ಎಲ್ಲರೂ ಭಾಗವಹಿಸಬೇಕಿದೆ. ಶ್ರೀಗಳ ಆಶೀವಾರ್ವದ  ಮುಖಾಂತರ ನೀಡಿದರೆ ಒಳ್ಳೆಯದು ಎನ್ನುವ ಭಾವನೆಯಿಂದ ಚೆಕ್ ಅರ್ಪಿಸಿದ್ದೇವೆ ಎಂದರು.

ಸ್ಟೀಲ್ ಕಂಪನಿಯ ಮಾಲೀಕರೂ  ಸ್ಥಳೀಯರಾಗಿರುವ ಹೆಚ್.ಜಿ.ಗುರುದತ್ತ್  ಈ ಕೆಲಸಕ್ಕೆ ಮುಂದಾಗಿರುವುದಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತುಂಗಭದ್ರಾ ನದಿಯ ಪಕ್ಕದಲ್ಲಿ ಹತ್ತಾರು ಕಾರ್ಖಾನೆಗಳಿದ್ದೂ  ಇದುವರೆಗೆ ಯಾರೂ ಸಹಾಯಕ್ಕೆ ಮುಂದಾಗಿಲ್ಲ.  ನದಿಯ ನೀರನ್ನೇ ಬಳಸುವ ಇವರು ಇದುವರೆಗೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

Leave a Reply