ಡಿ. 28 ರಂದು ಬೆಂಗಳೂರಿನಲ್ಲಿ ಮಾಜಿ ಸೈನಿಕರಿಗೆ ಉದ್ಯೋಗ ಮೇಳ

ಕೊಪ್ಪಳ ಡಿ. 22 (): ಡೈರೆಕ್ಟರ್ ಜನರಲ್ ರೀಸೆಟ್ಲ್‍ಮೆಂಟ್, ನ್ಯೂ ದೆಹಲಿ ಇವರು ಮಾಜಿ ಸೈನಿಕರಿಗಾಗಿ ಉದ್ಯೋಗ ಮೇಳವನ್ನು ಡಿ. 28 ರಂದು ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಸಂಘಟನ ಸ್ಪೋಟ್ರ್ಸ್ ಸ್ಟೇಡಿಯಂ (ಎಸ್.ಟಿ ಜಾನ್ ರೋಡ್) ನಲ್ಲಿ ಏರ್ಪಡಿಸಲಾಗಿದೆ.
ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ನೆಲಸಿರುವ ಮಾಜಿ ಸೈನಿಕರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳುವಂತೆ ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
=======

Please follow and like us:
error