ಡಿ. 24 ರಿಂದ ನೋಂದಣಿ ಆರಂಭ ಪ್ರತಿ ಎಕರೆಗೆ 5 ಕ್ವಿಂಟಾಲ್‍ರಂತೆ ಗರಿಷ್ಠ 10 ಕ್ವಿಂಟಾಲ್ ತೊಗರಿ ಖರೀದಿ : ಸಿ.ಡಿ. ಗೀತಾ

ಕೊಪ್ಪಳ ಡಿ. 22 : ಜಿಲ್ಲೆಯಲ್ಲಿ ಡಿ. 24 ರಿಂದ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಆರಂಭವಾಗಲಿದ್ದು, ಪ್ರತಿ ರೈತರಿಂದ ಎಕರೆಗೆ 5 ಕ್ವಿಂಟಾಲ್‍ರಂತೆ ಗರಿಷ್ಠ 10 ಕ್ವಿಂಟಾಲ್ ತೊಗರಿ ಉತ್ಪನ್ನವನ್ನು ಖರೀದಸಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಹೇಳಿದರು.
ಬೆಂಬಲ ಯೋಜನೆಯಡಿ ತೊಗರಿ ಬೆಳೆ ಖರೀದಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರದಂದು ಆಯೋಜಿಸಲಾದ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆ ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಪ್ರತಿ ಕ್ವಿಂಟಾಲ್‍ಗೆ ರೂ.5675/- ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರಕಾರದ ಪ್ರೋತ್ಸಾಹ ಧನ ರೂ.425/- ಸೇರಿ ಒಟ್ಟು ರೂ.6100/-ಗಳ ಬೆಂಬಲ ಬೆಲೆ ನೀಡಿ ರೈತರಿಂದ ಖರೀದಿಸಲು ರಾಜ್ಯ ಸರ್ಕಾರದ ಆದೇಶಿಸಿದ್ದು, ಕೊಪ್ಪಳ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ತೊಗರಿ ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಪ್ರತಿ ರೈತರಿಂದ ಎಕರೆಗೆ 5 ಕ್ವಿಂಟಾಲ್‍ರಂತೆ ಗರಿಷ್ಠ 10 ಕ್ವಿಂಟಾಲ್ ತೊಗರಿ ಉತ್ಪನ್ನವನ್ನು ಖರೀದಸಲಾಗುತ್ತಿದ್ದು, ಡಿ. 24 ರಿಂದ ರಿಂದ 2019ರ ಜನವರಿ. 07 ರವರೆಗೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿಯು ನಡೆಯಲಿದೆ. ಎಫ್.ಎ.ಕ್ಯೂ. ಗುಣಮಟ್ಟದ ತೊಗರಿಯನ್ನು ಮಾತ್ರ ಖರೀದಿಸಲಾಗುವುದು. ತೊಗರಿ ಗುಣಮಟ್ಟದ ಕುರಿತು ಕೃಷಿ ಇಲಾಖೆಯು ಪರಿಶೀಲಿಸಬೇಕು. ಸರ್ಕಾರದ ನಿರ್ದೆಶನದಂತೆ ತೊಗರಿ ಖರೀದಿ ಪ್ರಕ್ರೀಯೆ ನಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖರೀದಿ ಕೇಂದ್ರಗಳು : ಬೆಂಬಲ ಯೋಜನೆಯಡಿ ತೊಗರಿ ಖರೀದಿಸಲು ಖರೀದಿ ನೋಂದಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಅವುಗಳ ವಿವರ ಇಂತಿದೆ. ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಪಿ.ಎ.ಸಿ.ಎಸ್. ಮುದ್ದಾಬಳ್ಳಿ. ಹನುಮಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಪಿ.ಎ.ಸಿ.ಎಸ್. ಹನುಮಸಾಗರ. ತಾವರಗೇರಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಪಿ.ಎ.ಸಿ.ಎಸ್. ತಾವರಗೇರಾ/ ಮೆಣೆದಾಳ. ಕುಕನೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ, ಟಿ.ಎ.ಪಿ.ಸಿ.ಎಂ.ಎಸ್. ಯಲಬುರ್ಗಾದಲ್ಲಿ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ರೈತರು ನೋಂದಣಿಗಾಗಿ ಪಹಣಿ ಪತ್ರಿಕೆ, ಆಧಾರ ಸಂಖ್ಯೆ ಜೋಡಣೆÀಗೊಂಡ ಬ್ಯಾಂಕ್ ಖಾತೆಯ ವಿವರದ ಝರಾಕ್ಸ್ ಪ್ರತಿಯೊಂದಿಗೆ ಡಿ. 24 ರಿಂದ ರಿಂದ 2019ರ ಜನವರಿ. 07 ರವರೆಗೆ ತೊಗರಿ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗಾಗಿ ಸಂಬಂಧಿಸಿದ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಬಹುದು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಪ್ಪಳದ ಶಾಖಾ ವ್ಯವಸ್ಥಾಪಕ, ಶ್ರೀಕಾಂತ ಮೊ.ಸಂ. 9449864420, ಇವರನ್ನು ಸಂಪರ್ಕಿಸಬಹುದಾಗಿದೆ.
ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ ವಿ. ಅಣ್ಣಿಗೇರಿ, ಪೊಲೀಸ್ ಇಲಾಖೆಯ ಹೆಬ್ಬಾಳ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ತೊಗರಿ ಖರೀದಿ ನೋಂದಣಿ ಕೇಂದ್ರಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.
(ಫೋಟೋ ಕಳುಸಿದೆ)
=======
ಪ್ರವಾಸಿ ಟ್ಯಾಕ್ಸಿ ಯೋಜನೆಯ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆಗೆ ಆಹ್ವಾನ
ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಇಲಾS ವತಿಯಿಂದ ಪ್ರಸಕ್ತ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಗಿದ್ದು, ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಪ್ರಸಕ್ತ ಸಾಲಿನ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ 3 ಲಕ್ಷ ಸಹಾಯಧನ ದೊಂದಿಗೆ ಸಾಲ ಸೌಲಭ್ಯ ನೀಡಿ, ಪ್ರವಾಸಿ ಟ್ಯಾಕ್ಸಿ ಒದಗಿಸಲು ಫಲಾನುಭವಿಗಳ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಪಟ್ಟಿಯನ್ನು ಕೊಪ್ಪಳ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಛೇರಿಯಲ್ಲಿ ಲಗತ್ತಿಸಿದ್ದು, ಈ ಪಟ್ಟಿಗೆ ಅಭ್ಯರ್ಥಿಗಳಿಂದ ಯಾವುದೇ ಆಕ್ಷೇಪಣೆ ಅಥವಾ ದೂರುಗಳಿದ್ದಲ್ಲಿ ಡಿ. 28 ರ ಸಂಜೆ 5 ಗಂಟೆಯೋಳಗಾಗಿ ಸಹಾಯಕ ನಿರ್ದೇಶಕರ ಕಛೇರಿ ಪ್ರವಾಸೋದ್ಯಮ ಇಲಾಖೆ 2 ನೇ ಮಹಡಿ ಜಿಲ್ಲಾಢಳಿತ ಭವನ ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಯಾವುದೇ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷರು ಆಗಿರುವ ಕೊಪ್ಪಳ ಸಹಾಯಕ ಆಯುಕ್ತರಾದ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
=======
ಡಿ. 24 ರಂದು ಕೊಪ್ಪಳದಲ್ಲಿ ಉದ್ಯೋಗಕ್ಕಾಗಿ ಸಂದರ್ಶನ
ಕೊಪ್ಪಳ ಡಿ. 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಉದ್ಯೋಗಕ್ಕಾಗಿ ಸಂದರ್ಶನವನ್ನು ಡಿ. 24 ರಂದು ಬೆಳಿಗ್ಗೆ 10-30 ರಿಂದ 2-30 ರವರೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಶನದಲ್ಲಿ ಜೈಕಿಸಾನ್ ಗ್ರೀನ್ ಕೇರ್ ಪ್ರೈ.ಲಿ. ಹುಬ್ಬಳ್ಳಿ, ಇವರು ಸಂದರ್ಶನವನ್ನು ಆಯೋಜಿಸಲಾಗಿದ್ದು, ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ವಾಕ್-ಇನ್-ಇಂಟರವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಭಾಗವಹಿಸಲು ಉಚಿತ ಪ್ರವೇಶವಿರುತ್ತದೆ. ಸಂದರ್ಶನದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು 18 ರಿಂದ 40 ವರ್ಷದ ವರೆಗಿನ, ಎಸ್.ಎ.ಎಲ್.ಸಿ., ಪಿಯುಸಿ, ಯಾವುದೇ ಪದವಿ ಪಡೆದ ನಿರುದ್ಯೋಗಿ ಯುವಕ-ಯುವತಿಯರು, ತಮ್ಮ ವಿಧ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಕಡ್ಡಾಯವಾಗಿ ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಸುಮ್) ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ವಾಕ್-ಇನ್-ಇಂಟರವ್ಯೂನಲ್ಲಿ ಭಾಗವಹಿಸಿ, ಉದ್ಯೋಗದ ನೇರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಪ್ಪಳ ದೂರವಾಣಿ ಸಂಖ್ಯೆ 08539-220859, 9880910977 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts