ಡಿಸೇಲ್ ಬ್ಯಾರಲ್ ಬ್ಲಾಸ್ಟ್ ಪ್ರಕರಣ : ಭೂವಿಜ್ಞಾನಿ ಸಾವು

ಕೊಪ್ಪಳ :

ಅಧಿಕಾರಿಗಳು ದಾಳಿ ವೇಳೆ ಡಿಸೇಲ್ ಬ್ಯಾರಲ್ ಬ್ಲಾಸ್ಟ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರು ಅಧಿಕಾರಿಗಳ ಪೈಕಿ ಓರ್ವ ಅಧಿಕಾರಿ ಸಾವನ್ನಪ್ಪಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ಗಣಿ & ಭೂ ವಿಜ್ಞಾನ ಇಲಾಖೆ ಅಧಿಕಾರಿ ದಿನೇಶ್ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಅನಧಿಕೃತ ಕಲ್ಲು ಗಣಿಗಾರಿಕೆ ಮೇಲೆ ದಾಳಿ ವೇಳೆ ಬ್ಯಾರೆಲ್ ಬ್ಲಾಸ್ಟ್ ಆಗಿ ಗಾಯಗೊಂಡಿದ್ದ ದಿನೇಶ್ ಹಾಗೂ ನವೀನ್ ಗಾಯಗೊಂಡಿದ್ದರು.

ಕುಷ್ಟಗಿ ತಾಲೂಕಿನ ಲಿಂಗನಬಂಡಿ ಗ್ರಾಮದ ಬಳಿ ನಡೆದಿದ್ದ ಘಟನೆ. ಆಕ್ಟೋಬರ್ ೦6 ರಂದು ಘಟನೆ ನಡೆದಿತ್ತು. ಅನಧಿಕೃತ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಅಂತ ಅಧಿಕಾರಿ ದಾಳಿ ನಡೆಸಿದ್ದರು. ಅಧಿಕಾರಿಗಳಾದ ದಿನೇಶ್ ಹಾಗೂ ನವೀನ್ ಸ್ಥಳಕ್ಕೆ ತೆರಳಿದ್ರು . ವೀಕ್ಷಣೆ ವೇಳೆ ಡೀಸೆಲ್ ಬ್ಯಾರೆಲ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಹೇಳಲಾಗಿತ್ತು.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿತ್ತು ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗಿದೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ. ಯಲಬುರ್ಗಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಡಿಜಲ್ ಬ್ಯಾರಲ್ ಸ್ಪೋಟ ಎಂದು ಹೇಳಲಾಗಿರುವ ಈ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಇದೆ. ಈ ರೀತಿ ಘಟನೆ ನಡೆಯಲು ಸಾಧ್ಯವೇ ? ಬೇರೆ ಏನಾದರೂ ನಡೆದಿತ್ತೆ ಎನ್ನುವ ಅನುಮಾನಗಳು ಪೂರ್ಣ ತನಿಖೆಯ ನಂತರವೇ ಹೊರಬರಲಿವೆ.

Please follow and like us:
error