ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ ಕೋರ್ಸ: ಅರ್ಜಿ ಆಹ್ವಾನ

ಕೊಪ್ಪಳ ಮೇ.:: ರಾಯಚೂರು ಜಿಲ್ಲೆಯ ಲಿಂಗಸೂರಿನ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿನ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ ಕೋರ್ಸಿನ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ.ಟಿ.ಟಿ.ಸಿ)ವು ಈ ಭಾಗದ ಯುವಕರಿಗೆ ಉನ್ನತ ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಗಳನ್ನು ನಡೆಸುತ್ತಿದೆ. ಸಂಸ್ಥೆಯು ಪ್ರಸಕ್ತ ಸಾಲಿನ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ (ಡಿಟಿಡಿಎಂ) ಕೋಸಿಗೆ ಎಸ್.ಎಸ್.ಎಲ್.ಸಿ ಅಥವಾ ಐಟಿಐ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಈ ಕೋರ್ಸಿಗೆ ಸರ್ಕಾರ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಮಾನ್ಯತೆಯಿರುತ್ತದೆ. ಡಿಟಿಡಿಎಂ ಕೋರ್ಸ್ 3+*1 ವರ್ಷ ಅವಧಿಯದ್ದಾಗಿದ್ದು, ಮೊದಲ 3 ವರ್ಷ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು. ನಂತರ 4ನೇಯ ವರ್ಷ, ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಕಡ್ಡಾಯ ಕೈಗಾರಿಕಾ ತರಬೇತಿಗಾಗಿ ಕಳುಹಿಸಲಾಗುವುದು. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಆಕರ್ಷಕ ಸ್ಟೆöÊಫಂಡ್ ಮತ್ತು ಇನ್ನಿತರ ಸೌಲಭ್ಯಗಳನ್ನು ಕೂಡ ದೊರೆಯುತ್ತದೆ. ಡಿಟಿಡಿಎಂ ಕೋರ್ಸ್ನಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದ 371(ಜೆ) ಮೀಸಲಾತಿ ಇರುತ್ತದೆ. ಮತ್ತು ಆಯ್ಕೆ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರದ ಮೆರಿಟ್-ಕಮ್-ರೋಸ್ಟರ್ ಪದ್ದತಿಯಂತೆ ನಡೆಸಲಾಗುವುದು. ಈ ತರಬೇತಿಯು ಇನ್ನಿತರ ಡಿಪ್ಲೊÃಮಾ ಕೊರ್ಸಗಳಿಗಿಂತ ವಿಭಿನ್ನವಾಗಿದ್ದು, ಹಲವಾರು ವಿಶೇಷತೆಗಳನ್ನು ಹೊಂದಿರುತ್ತದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರತಿಶತ 100ರಷ್ಟು ಉದ್ಯೊÃಗ ದೊರಕಿಸಿಕೊಟ್ಟು ದಾಖಲೆ ಸಂಸ್ಥೆಗಿದೆ. ಈ ಸಂಸ್ಥೆಯಿಂದ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉದ್ಯೊÃಗ ಪಡೆದಿದ್ದಾರೆ.
ಎಸ್.ಎಸ್.ಎಲ್.ಸಿ ಪಾಸಾಧ ಕ್ರಿಯಾಶೀಲ, ಸೃಜನಶೀಲ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್ (ಡಿಟಿಡಿಎಂ) ತರಬೇತಿಯು ಸುವರ್ಣಾವಕಾಶವಾಗಿದ್ದು, ಅತ್ಯಂತ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ನೀಡಿ, ಉದ್ಯೊÃಗ ದೊರಕಿಸಿಕೊಡುವ ವಿಶಿಷ್ಟ ತರಬೇತಿ ಇದಾಗಿದೆ. ಡಿಟಿಡಿಎಂ ತರಬೇತಿಗೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ರಾಷ್ಟಿçÃಕೃತ ಬ್ಯಾಂಕುಗಳಲ್ಲಿ ಶಿಕ್ಷಣ ಸಾಲದ ಸಹಾಯ ಕೂಡ ದೊರೆಯುತ್ತದೆ. ತರಬೇತಿಯ ನಂತರ ಉನ್ನತ ವಿದ್ಯಾಭ್ಯಾಸವಾದ ಬಿಇ ಮಾಡಲು ಅವಕಾಶವೂ ಇರುತ್ತದೆ. ಆಸಕ್ತ ವಿದ್ಯಾರ್ಥಿ, ಪಾಲಕರು ಅರ್ಜಿಗಳನ್ನು ಲಿಂಗಸುಗೂರು ಜಿಟಿಟಿಸಿ ನ ಉಪ ಕೇಂದ್ರದಿಂದ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಿ.ಟಿ.ಟಿ.ಸಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹಾಗೂ ಸರ್ಕಾರಿ ತೋಟ, ಕರಡಕಲ್ ರಸ್ತೆ ಲಿಂಗಸುಗೂರು-584122 ದೂರವಾಣಿ ಸಂಖ್ಯೆ 9916231899, 8762564872, ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿ.ಟಿ.ಟಿ.ಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error