ಡಿಜೆ ಸೀಜ್ ಮಾಡಿದ ಕೊಪ್ಪಳ ಪೋಲಿಸರು

ಕೊಪ್ಪಳ : ಅತಿ ಹೆಚ್ಚು ಧ್ವನಿ ಸೂಸುವ ಡಿಜೆ ವಶಕ್ಕೆ ಪಡೆದ ಕೊಪ್ಪಳ ಪೊಲೀಸರು. ನಿಯಮ ಉಲ್ಲಂಘಿಸಿದ ಹಿನ್ನೆಲೆ ೫ ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಕೊಪ್ಪಳದ ಗೌರಿ ಶಂಕರ ಬಳಿ ವಿನಾಯಕನನ್ನು ಕೂಡಿಸುವ ಹಿಂದೂ ಮಹಾಮಂಡಳಿಯಿಂದ ನಿಯಮ ಉಲ್ಲಂಘನೆಯಾಗಿದೆ ಎನ್ನಲಾಗಿದೆ.

ಅತಿ ಹೆಚ್ಚು ಧ್ವನಿ ಸೂಸುವ ಧ್ವನಿವರ್ಧಕಗಳ ನಿಷೇಧವಿದ್ದರೂ, ಬಳಕೆ ಮಾಡಿದ್ದಲ್ಲದೇ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹಾಡುಗಳನ್ನು ಜಿಲ್ಲಾಡಳಿತ ನಿಷೇಧ ಮಾಡಿದೆ. ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಹಾಡುಗಳನ್ನು ಹಾಕಿದ ಮಹಾಮಂಡಳಿ ಪದಾಧಿಕರಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಇಂದು ವಿನಾಯಕನ ಪ್ರತಿಷ್ಠಾನದ ಮೆರವಣಿಗೆ ವೇಳೆ ಧ್ವನಿವರ್ಧಕಗಳನ್ನು ಬಳಸಿದ್ದರಿಂದ ಹೊಸಪೇಟೆ ರಸ್ತೆಯ ಹೆಚ್ ಡಿ ಎಫ್ ಸಿ ಬ್ಯಾಂಕ್ ಬಳಿ ೪ ಸೌಂಡಬಾಕ್ಸ್, ಎಂಪ್ಲಿಫಾಯರ್ ಹಾಗು ಟಾಟಾ ಜಿತೋ ವಾಹನ ವಶಕ್ಕೆ ಪಡೆದಿದ್ದಾರೆ. ನಿಯಮ ಉಲ್ಲಂಘಿಸಿದ ಮಹಾಮಂಡಳಿಯ ಐವರ ಮೇಲೆ ಪ್ರಕರಣ ದಾಖಲು ಮಟಡಲಾಗಿದೆ. ಪದಾಧಿಕಾರಿಗಳಾದ ರಾಜು ಬಗಾಡೆ, ಶಿವಶರಣಪ್ಪ ಚಂದನ ಶೆಟ್ಟಿ, ಗವಿ ಜಂತಕಲ್, ಅಜಯ, ಚಂದ್ರು ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ ೧೮೦,೨೯೦,೨೯೧ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಳೆದ ವರ್ಷವೂ ಸಹ ನಿಷೇದಾಜ್ಞೆ ಉಲ್ಲಂಘನೆ ಮಾಡಿದ್ದ ಹಿನ್ನೆಲೆ ಇದೇ ರೀತಿ ಪ್ರಕರಣ ದಾಖಲಾಗಿತ್ತು. ಶಾಂತಿ ಕದಡುವ ಆದೇಶ ಪಾಲನೆ ಮಾಡದವರ ವಿರುದ್ದ ಸೂಕ್ತ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ರೇಣುಕಾ ಸುಕುಮಾರ್ ಎಚ್ಚರಿಕೆ ನೀಡಿದ್ದ

Please follow and like us:
error