ಡಿಜೆ ನಿಷೇದ ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ !

Koppal News : ಡಿಜೆ ನಿಷೇದ ಮಾಡಿ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಜಿಲ್ಲೆಯಾದ್ಯಂತ ಡಿಸೆಂಬರ್ 31ವರೆಗೆ ಡಿಜೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದರು. ಗಣೇಶೋತ್ಸವ ನಡೆಯುತ್ತಿರುವುದರಿಂದ ಡಿಜೆ ಬಳಸಲು ಅನುಮತಿ ನೀಡಬೇಕೆಂದು ಹಲವಾರು ಗಣೇಶ ಮಂಡಳಿಯವರು ಮನವಿ ಸಲ್ಲಿಸಿದ್ದರು. ಆದರೆ ಹಿಂದಿನ ಆದೇಶಗಳನ್ವಯ ಮತ್ತು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಡಿಜೆ ನಿಷೇಧಿಸಿ ಆದೇಶ ನೀಡಲಾಗಿತ್ತು. ಜಿಲ್ಲಾಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ ಕೊಪ್ಪಳದ ಹಿಂದೂ ಮಹಾಮಂಡಳಿ ಯವರು ಹೈಕೋರ್ಟನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯ ಪರಿಶೀಲನೆ ಮಾಡಿದ ಹೈಕೋರ್ಟ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರ ಆದೇಶವನ್ನು ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೇ ಹೈಕೋರ್ಟ ಪರಿಸರ , ಶಬ್ದ ಮಾಲಿನ್ಯಕ್ಕೆ ಸಂಬಂದಿಸಿದ ಹಿಂದಿನ ಆದೇಶಗಳನ್ನು ಪಾಲಿಸಲು ಆದೇಶ ನೀಡಿದೆ.‌ಡಿಸಿ ಮತ್ತು ಎಸ್ಪಿ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿರುವ ಹೈಕೋರ್ಟ್ ಕಟ್ಟುನಿಟ್ಟಾಗಿ ಶಬ್ದ ಗುಣಮಟ್ಟದ 175ನೇ ಪ್ಯಾರಾದಲ್ಲಿ ವಿವರಿಸಿದಂತೆ ಹಿಂದಿನ ಆದೇಶಗಳನ್ನು ಪಾಲಿಸಲು ನಿರ್ದೇಶನ ನೀಡಿದೆ.

ಈ ಹಿಂದೆಯೂ ಸಹ ಶಬ್ದ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರಿಕೋರ್ಟ ಹಲವಾರು ಮಹತ್ತರ ತೀರ್ಪುಗಳನ್ನು ನೀಡಿದೆ ಅಲ್ಲದೇ ಇದಕ್ಕಾಗಿ ಕಟ್ಟುನಿಟ್ಟಾಗಿ ಕಾನೂನು ಸಹ ಜಾರಿ ಮಾಡಲಾಗಿದೆ. ವಸತಿ ಪ್ರದೇಶ, ಮಾರುಕಟ್ಟೆ ಪ್ರದೇಶ, ಶಾಲಾ, ಕಾಲೇಜು, ಆಸ್ಪತ್ರೆ ಮತ್ತು ಕೋರ್ಟ ಸೇರಿದಂತೆ ವಿವಿದೆಡೆ ಎಷ್ಟು ಡೆಸಿಬೆಲ್ ನ ಉಪಕರಣಗಳನ್ನು ಬಳಸಬೇಕು ಅದರ ಮಿತಿ ಎಷ್ಟು ಇರಬೇಕು ಎನ್ನುವುದರ ಬಗ್ಗೆಯೂ ಸಹ ಸ್ಪಷ್ಟವಾದ ಆದೇಶ ಮತ್ತು ನಿರ್ದೇಶನಗಳಿವೆ. ಇದಕ್ಕಾಗಿ ಕಾನೂನು ಸಹ ರೂಪಿಸಲಾಗಿದೆ. ಜನವಸತಿ ಪ್ರದೇಶಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಹೆಚ್ಚು ಧ್ವನಿ ಸೂಸುವ ಧ್ವನಿವರ್ಧಕಗಳನ್ನು,ಉಪಕರಣಗಳನ್ನು,ಸಂಗೀತ ವಾಧ್ಯಗಳನ್ನು ಬಳಸುವುದಕ್ಕೂ ಸಹ ನಿರ್ಬಂದವಿದೆ. ಇವುಗಳೆಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಕೋರ್ಟ ಆದೇಶ ನೀಡಿದೆ.

ಡಿಜೆ ಉಪಯೋಗಿಸಲು ಅನುಮತಿ ಕೋರಿದ್ದ ಹಿಂದೂ ಮಹಾಮಂಡಳಿಯವರಿಗೆ, ಡಿಜೆ ಪ್ರಿಯರಿಗೆ ಇದರಿಂದ ನಿರಾಸೆಯಾಗಿದೆ ಎಂದೇ ಹೇಳಬಹುದು.

ಈ ಆದೇಶಕ್ಕೆ ಸಂಬಂದಿಸಿದಂತೆ ಗೊಂದಲ ಇನ್ನೂ ಮುಂದುವರೆದಿದೆ.. ಹಿಂದೂ ಮಹಾಮಂಡಳಿಯವರು ಡಿಜೆಗೆ ಅನುಮತಿ ಸಿಕ್ಕಿದೆ ಎನ್ನುತ್ತಾರೆ.. ಆದರೆ ಜಿಲ್ಲಾಧಿಕಾರಿಗಳು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ ಎನ್ನುತ್ತಾರೆ…

Please follow and like us:
error