ಡಾ|| ಶಿವಕುಮಾರ ಮಾಲಿಪಾಟೀಲ್‌ರವರ”ಕ್ಷಮಿಸಿಬಿಡು ಬಸವಣ್ಣ” ಕವನ ಸಂಕಲನ ಬಿಡುಗಡೆ

ಗ೦ಗಾವತಿ: ಕುಡಗುಂಟಿ ಬಸವರಾಜ ಪ್ರಕಾಶನ ಗಂಗಾವತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಗಂಗಾವತಿ, ಲಯನ್ಸ್ ಕ್ಲಬ್ ಗಂಗಾವತಿ, ಕಾವ್ಯಲೋಕ ಗಂಗಾವತಿ ಇವರುಗಳ ಸಹಯೋಗದೊಂದಿಗೆ    ಸಂಜೆ ೦೫:೦೦ ಗಂಟೆಗೆ ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಡಾ|| ಶಿವಕುಮಾರ ಮಾಲಿಪಾಟೀಲ್‌ರವರ “ಕ್ಷಮಿಸಿಬಿಡು ಬಸವಣ್ಣ” ಎಂಬ ಎರಡನೇ ಕವನ ಸಂಕಲನ ಬಿಡುಗಡೆ ಸಮಾರಂಭ ಜರುಗಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಜನಪ್ರಿಯ ಶಾಸಕರಾದ   ಪರಣ್ಣ ಮುನವಳ್ಳಿಯವರು ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ಖ್ಯಾತ ಹಾಸ್ಯ ಭಾಷಣಕಾರರಾದ ಶ್ರೀ ಗಂಗಾವತಿ ಪ್ರಾಣೇಶ ನೆರವೇರಿಸಲಿದ್ದಾರೆ. ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ   ಅರವಿಂದ ಜತ್ತಿಯವರು ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಗೌರವ ಉಪಸ್ಥಿತರಾಗಿ ಖ್ಯಾತ ವೈದ್ಯರಾದ ಡಾ|| ಎ. ಸೋಮರಾಜು ಹಾಗೂ ಖ್ಯಾತ ಇತಿಹಾಸ ತಜ್ಞರಾದ ಡಾ. ಶರಣಬಸಪ್ಪ ಕೋಲ್ಕಾರ್ ಭಾಗವಹಿಸಲಿದ್ದು, ಪುಸ್ತಕದ ಪರಿಚಯವನ್ನು ಸಾಹಿತಿಗಳಾದ  ರಾಘವೇಂದ್ರ ದಂಡಿನ್ ಮಾಡಲಿದ್ದಾರೆ ಹಾಗೂ ಈ ಕವನ ಸಂಕಲನದ ಆಯ್ದ ಕವನಗಳ ಗಾಯನವನ್ನು   ರಮೇಶ ಗಬ್ಬೂರು ಹಾಗೂ ತಂಡದವರು ಹಾಡಲಿದ್ದಾರೆ.
ಈ ಒಂದು ಸಮಾರಂಭದಲ್ಲಿ ಗಂಗಾವತಿಯ ಡಿ.ವೈ.ಎಸ್.ಪಿ ಆದ ಡಾ. ಚಂದ್ರಶೇಖರ ಬಿ.ಪಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಾವಣಗೆರೆ ಜಿಲ್ಲೆಯ   ಸಾಲುಮರದ ವೀರಾಚಾರ್ ಅವರುಗಳಿಗೆ ಪ್ರೀತಿಯ ಸನ್ಮಾನ ಮಾಡಲಾಗುವುದು.
ಈ ಕಾರ್ಯಕ್ರಮಕ್ಕೆ ಎಲ್ಲಾ ಬಸವಾಭಿಮಾನಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ|| ಶಿವಕುಮಾರ ಮಾಲಿಪಾಟೀಲ್ ದಂತವೈದ್ಯರು ವಿನಂತಿಸಿದ್ದಾರೆ.

Please follow and like us:
error