ಡಾ.ರಜಾಕ್ ಉಸ್ತಾದ್ ಪರ ಬಿರುಸಿನ ಪ್ರಚಾರ

ವಿಧಾನ ಪರಿಷತ್ ಚುನಾವಣೆ: ರಜಾಕ್ ಉಸ್ತಾದ್ ಪರ ಪ್ರಚಾರ

ಕೊಪ್ಪಳ, : ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಕಲಂ ದೊರೆಯಲು ಜಾಗೃತಿ ಮತ್ತು ಹೋರಾಟಕ್ಕೆ ತೊಡಗಿಸಿಕೊಂಡಿದ್ದ ಈಶಾನ್ಯ ಪದವೀಧರ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿರುವ ಡಾ.ರಜಾಕ್ ಉಸ್ತಾದ್‍ರಿಗೆ ಪ್ರಥಮ ಪ್ರಾಸಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಸಂತೋಷ ದೇಶಪಾಂಡೆ ಮನವಿ ಮಾಡಿದರು.
ರು ರವಿವಾರ ಅಭ್ಯರ್ಥಿ ಉಸ್ತಾದ್ ಪರ ಕೊಪ್ಪಳದಲ್ಲಿ ಮತದಾರರ ಮನೆ ಮನೆಗೆ ತೆರಳಿ ಕೈಗೊಂಡ ಬಿರುಸಿನ ಪ್ರಚಾರದಲ್ಲಿ ಮಾತನಾಡಿದರು.
371 ಜೆ ಕಲಂ ಜಾರಿಯಾದರೂ ಸಮಗ್ರವಾಗಿ ಅದರ ಲಾಭ ದೊರೆಯದೇ, ನಮ್ಮ ಭಾಗದ ಸರಕಾರಿ ಉದ್ಯೋಗದ ಮೀಸಲಿನಲ್ಲಿ ಸತತ ಅನ್ಯಾಯವಾದರೂ ಈ ಭಾಗದ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದರು. ಕಾರಣ ಹೈದ್ರಾಬಾದ್ ಕರ್ನಾಟಕದ ಕುರಿತು ಕಾಳಜಿ ಹೊಂದಿರುವ ಈ ಭಾಗದ ಧ್ವನಿಯಾಗಿ ರಜಾಕ್ ಉಸ್ತಾದ್ ವಿಧಾನಪರಿಷತ್‍ನಲ್ಲಿ ಇರಬೇಕು ಎಂದು ಸಂತೋಷ ದೇಶಪಾಂಡೆ ಹೇಳಿದರು.
ಈ ಸಂದರ್ಭದಲ್ಲಿ ಶಿವಕುಮಾರ ಕುಕನೂರ, ಮಂಜುನಾಥ ಅಂಗಡಿ. ಬಸವÀರಾಜ ಶಿರಗುಂಪಿಶೆಟ್ಟರ, ಜಗದೀಶ ಗುತ್ತಿ. ಮಾರುತಿ ನಾಯ್ಯರ್. ಅಶೋಕ ಕುಂಬಾರ. ಚನ್ನಪ್ಪ ಕಡ್ಡಿಪುಡಿ ಇತರರು ಇದ್ದರು.