ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಆವ್ಯವಹಾರ-ಸುಜಾತ ಗೋರ್ಲೆಕೊಪ್ಪ ಆರೋಪ

Koppal ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ೨೦೧೬-೧೭ ಮತ್ತು ೨೦೧೬-೧೮ನೇ ಸಾಲಿನ ಕನಕಗಿರಿ ಕ್ಷೇತ್ರದ ಶಾಸಕರ ಆಯ್ಕೆ ಸಮಿತಿಯಲ್ಲಿ ಆವ್ಯವಹಾರ ನಡೆಸಿದ್ದಾರೆಂದು ಸಫಾಯಿ ಕರ್ಮಚಾರಿ ಆಯೋಗದ ಜಿಲ್ಲಾ ಸಮಿತಿ ಸದಸ್ಯೆ ಸುಜಾತ ಎಂ ಗೋರ್ಲೆಕೊಪ್ಪ ಆರೋಪಿಸಿದರು.ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಅಂಬೇಡ್ಕರ್ ನಿಗಮ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿದ್ದರು, ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ. ಶಾಸಕರ ಪ್ರಭಾವವನ್ನು ಬಳಸಿಕೊಂಡು ಸೂಕ್ತ ದಲಿತ ಫಲಾನುಭವಿಗಳಿಗೆ ನೀಡುತ್ತಿಲ್ಲ. ಮಾಜಿ ಶಾಸಕ ತಂಗಡಗಿ ಅವರ ಅವಧಿಯಲ್ಲಿ ಹಲವರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಯೋಜನೆಯನ್ನು ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ಶಾಸಕರ ಹಿಂಬಾಲಕರಾದ ಜಾನಿಸಿರಾಣಿ, ಗೋವರ್ದನ್ ಮತ್ತು ಪದ್ಮಾವತಿ ಹೊಸಳ್ಳಿ, ಭುವನೇಶ್ವರಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ತಮಗೆ ಬೇಕಾದವರಿಗೆ ಯೋಜನೆ ಸಿಗುವಂತೆ ಮಾಡಿದ್ದಾರೆ. ಅಲ್ಲದೇ ಇದರ ವಿರುದ್ಧ ಧ್ವನಿ ಎತ್ತಿದವರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಪ್ರಸಕ್ತ ಹಾಲಿ ಶಾಸಕ ಬಸವರಾಜ ದಡೇಸೂಗುರು ಅವರಿಗೆ ವಚಿಚಿತ ಫಲಾನುಭವಿಗಳು ದೂರು ನೀಡಿದ ಹಿನ್ನೆಲೆ ಜಿಲ್ಲಾಧಿಕಾರಿಗಳಿಗೆ ಪರಿಶೀಲನೆ ಮಾಡಲು ಪತ್ರ ಬರೆದಿದ್ದಾರೆ. ಶಾಸಕರ ಮೇಲೆ ಕೂಡ ಇವರು ಸುಳ್ಳು ಆರೋಪ ಮಾಡುತ್ತಿರುವುದು ಖಚಿಡನೀಚಿi. ಕೂಡಲೇ ಇವರ ಮೇಲೆ  ದೌರ್ಜನ್ಯ ಪ್ರಕರಣವನ್ನು ದಾಖಲಿಸಿ ಕ್ರಮಕೈಗೊಳ್ಳಬೇಕು. ಅಲ್ಲದೇ ತಾಲೂಕು ಅಭಿವೃದ್ಧಿ ನಿಗಮದ ಅಧಿಕಾರಿಗೆ ಸೂಕ್ತ ಕ್ರಮಕೈಗೊಂಡು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದರು.

Please follow and like us:
error