ಡಾ.ಬಾಬಾಸಾಹೇಬ ಅಂಬೇಡ್ಕರ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿಗೆ ಜಿ.ಎಂ.ಬೆಲ್ಲದ್ ಆಯ್ಕೆ


ಕೊಪ್ಪಳ, ಡಿ.೦೭ : ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯಲಿರುವ ೩೫ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಸೆಂಬರ ೮ ಹಾಗೂ ೯ ರಂದು ದೆಹಲಿಯ ಪಂಚಶೀಲು ಆಶ್ರಮದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಅಂಬೇಡ್ಕರ ನಗರದ ದಲಿತ, ಹಿಂದುಳಿದ ಪರ ವಿಚಾರವಂತರು, ಕೊಪ್ಪಳದಲ್ಲಿ ಪ್ರಪ್ರಥಮವಾಗಿ ದಲಿತ ಸಂಘರ್ಷ ಸಮಿತಿಯನ್ನು ‘ತುರ್ತು ಪರಿಸ್ಥಿತಿ’ ಸಂದರ್ಭದಲ್ಲಿ (೧೯೭೭-೭೮) ಸ್ಥಾಪಿಸುವಲ್ಲಿ ಹಾಗೂ ಪ್ರಪ್ರಥಮವಾಗಿ ಅಂಬೇಡ್ಕರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಣೆಯಲ್ಲಿ ಪ್ರಮುಖ ಪಾತ್ರ ಮತ್ತು ರಾಯಚೂರ ವಿಭಾಗದ ಅಖಿಲ ಭಾರತ ಅಂಚೆ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಲ್ಲದೇ, ಅದರ ಶಾಖೆಯನ್ನು ಕೊಪ್ಪಳ ಪ್ರಧಾನ ಅಂಚೆ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಿ ಸದರಿ ಸಂಘದ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮತ್ತು ರಾಜ್ಯ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾರ್ವಜನಿಕರಿಗೆ ಹಾಗೂ ಅಂಚೆ ಇಲಾಖೆಯಲ್ಲಿ ೩೮ ವರ್ಷಕ್ಕೂ ಮೇಲ್ಪಟ್ಟು ತಮ್ಮ ಅಮೂಲ್ಯವಾದ ಸೇವೆ ಸಲ್ಲಿಸಿದ ಹಾಗೂ ದಲಿತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದವರ ಸೇವೆಗೆ ಎಲೆಮರೆಯ ಕಾಯಿಯಂತೆ ಕಳೆದ ೪೫ ವರ್ಷಗಳಿಂದ ಸಕ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತರಾದ ತಮ್ಮನ್ನು ಸನ್ ೨೦೧೯-೨೦ ನೇ ಸಾಲಿನ ಡಾ.ಅಂಬೇಡ್ಕರ ಫೆಲೋಶಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ   ಹೆಚ್.ಎಂ. ಕುಂದರಗಿಯವರು ತಿಳಿಸಿದ್ದಾರೆ.

Please follow and like us:
error