ಡಾ.ಎಪಿಜೆ ಅಬ್ದುಲ್ ಕಲಾಂರವರ ಜನ್ಮದಿನಾಚರಣೆ

ಗಂಗಾವತಿ : ಎಪಿಜೆ ಅಬ್ದುಲ್ ಕಲಾಂರ ಜನ್ಮದಿನದ ನಿಮಿತ್ಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಎಜುಕೇಷನ್ ಮತ್ತು ವೆಲ್ ಫೇರ್ ಸೊಸೈಟಿಯಿಂದ ಗಂಗಾವತಿಯ ನಗರದ ಎಂ.ಜಿ.ರಸ್ತೆಯಲ್ಲಿರುವ ಕಲಾಂ ವೃತ್ತಕ್ಕೆ ಮಾಲಾರ್ಪಣೆ ಮಾಢಲಾಯಿತು. ನಂತರ ದಾರುಲ್ ಉಲುಮ್ ಖಾದ್ರಿಯಾ ಅರಬ್ಬಿ ಶಾಲೆಯಲ್ಲಿ ಮಕ್ಕಳಿಗೆ ಹಾಗೂ ತಾಲುಕ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಹಣ್ಣು, ಹಂಪಲು , ಬ್ರೆಡ್ ವಿತರಣೆ ಮಾಡಲಾಯಿತು.

ಜಿಲ್ಲಾ ವಕ್ಪ ಸಹಾ ಸಮಿತಿಯ ಮಾಜಿ ಅಧ್ಯಕ್ಷರಾದ ಹಾಫಿಜ್ ಮುಸ್ತಫಾ ಕಮಾಲರ್ ವರು ಮಾತನಾಡಿ ಶಾಲೆಯ ಮಕ್ಕಳಿಗೆ ಡಾ. ಎಪಿಜೆ ಕಲಾರಂವರು ಭಾರತಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ವಿಸ್ಥತವಾಗಿ ಮಾತನಾಡಿದರು. ಅವರ ಆದರ್ಶ ಜೀವನವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಎಜುಕೇಷನ್ ಮತ್ತು ವೆಲ್ ಫೇರ್ ಸೊಸೈಟಿ ಅಧ್ಯಕ್ಷರಾದ ಆಪ್ರೋಜ್ ಅರಗಂಜಿ, ಪದಾದಿಕಾರಿಗಳಾದ ಎಂ.ಡಿ.ಖಾಜಾಪಾಷಾ, ಸೈಯದ್ ಅಮಜದ್, ಜಿಲಾನ್, ಸೈಯದ್ ಇಮ್ತಿಯಾಜ್ , ರಫಿಕ್ ಸಂಪಂಗಿ, ಇಸ್ಮಾಯಿಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.