ಡಾ.ಅಂಬೇಡ್ಕರ್ ಅವರ ೬೧ ನೇ ಪರಿನಿರ್ವಾಣ ದಿನಾಚರಣೆ


ಕೊಪ್ಪಳ.೦೬: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ೬೧ ನೇ ಪರಿನಿರ್ವಾಣ ದಿನದ ಅಂಗವಾಗಿ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಭಾರತೀಯ ದಲಿತ ಪ್ಯಾಂಥರ್, ಡಿಎಸ್‌ಎಸ್, ಬಾಬಾಸಾಹೇಬ್ ಅಂಬೇಡ್ಕರ್ ಕಲಾ, ಸಾಂಸ್ಕೃತಿಕ, ಕ್ರೀಡಾ ಯುವಕ ಸಂಘ ಹಾಗೂ ಛಲವಾದಿ ಸಮಾಜದ ವತಿಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಡಾ.ಅಬೇಡ್ಕರ್ ಅವರ ಭಾವಚಿತ್ರದ ಮುಂಬಾಗದಲ್ಲಿ ಮೌನಾಚರಣೆ ಮಾಡಲಾಯಿತು. ಅಂಬೇಡ್ಕರ್ ಅವರು ದೇಶಕ್ಕೆ ಹಾಗೂ ತುಳಿತಕ್ಕೊಳಗಾದ ಜನರಿಗೆ ಅವರು ಕೊಡಮಾಡಿದ ಮಹತ್ಕಾರ್ಯಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮುತ್ತುರಾಜ ಕುಷ್ಟಗಿ, ಸೋಮಶೇಖರ್ ಹೊದ್ಲೂರ್, ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ನಾಗರಾಜ ಬೆಲ್ಲದ್, ಡಿಎಸ್‌ಎಸ್ ರಮೇಶ್ ಬೆಲ್ಲದ್, ಯಲ್ಲಪ್ಪ ಬಳಗಾನೂರ, ಮಹಾಂತೇಶ್ ಚಾಕ್ರಿ, ಬಾಬಾಸಾಹೇಬ್ ಅಂಬೇಡ್ಕರ್ ಕಲಾ, ಸಾಂಸ್ಕೃತಿಕ, ಕ್ರೀಡಾ ಯುವಕ ಸಂಘದ ಅಧ್ಯಕ್ಷ ಬಸವರಾಜ ಅಳ್ಳಳ್ಳಿ, ಅಜಯ್ ದೊಡ್ಡಮನಿ, ಛಲವಾದಿ ಸಮಾಜದ ಮುಖಂಡರಾದ ಮಹಾವೀರ ಅಳ್ಳಳ್ಳಿ, ವಸಂತ ಬೆಲ್ಲದ್, ಗವಿಸಿದ್ದಪ್ಪ ಬೆಲ್ಲದ್, ರಾಯಪ್ಪ ಬಿನ್ನಾಳ, ಮರಿಯಪ್ಪ ಬನ್ನಿಕೊಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.