ಡಜೆ ನಿಷೇಧ ಆದೇಶ ಹಿಂಪಡೆಯುವಂತೆ ವಿಹೆಚ್ ಪಿ ಆಗ್ರಹ

 

ಕೊಪ್ಪಳದಲ್ಲಿ ಗಣೇಶ ಚತುಥಿ೯ ಹಬ್ಬದಂದು  ಮತ್ತು  ದಿನಾಂಕ 19-07-2017 ರಿಂದ 31-12-2017 ಇಲ್ಲಿಯವರೆಗೆ .(DJ ) ಹೆಚ್ಚಿನ ರೀತಿಯ ಹೊರ ಸೂಸುವ ಧ್ವನಿ ವಧ೯ಕಗಳನ್ನು ಬಳಸಭಾರದೆಂದು ನಿಷೇಧಿಸಿರುವ ಆದೇಶವನ್ನು  ಜಿಲ್ಲಾಧಿಕಾರಿಗಳು ಹಿಂಪಡೆಯುವಂತೆ ಆಗ್ರಹಿಸಿ ಸಹಾಯಕ ಜಿಲ್ಲಾಧಿಕಾರಿಗಳಿಗೆ ಮನವಿ
  ವಿಶ್ವ ಹಿಂದೂ ಪರಿಷತ್ ಕೊಪ್ಪಳ

ವಿಷಯ: ಹೆಚ್ಚಿನ ರೀತಿಯ ಹೊರ ಸೂಸುವ ಧ್ವನಿ ವರ್ಧಕಗಳನ್ನು ಬಳಸುವ ನಿóಷೇಧದ ಆದೇಶವನ್ನು ಹಿಂಪಡೆಯುವ ಕುರಿತು. 
 ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಕಾರ್ಯಾಲಯದಿಂದ ದಿನಾಂಕ:15.07.2017 ರಂದು ಹೊರಡಿಸಿದ ಆದೇಶದಿಂದ ಕೊಪ್ಪಳ ಜಿಲ್ಲೆಯಲ್ಲಿ ಹಿಂದು ಧಾರ್ಮಿಕ ಹಬ್ಬಗಳ ಮೇಲೆ ಹತೋಟಿಯನ್ನು ಹೇರಲು ಜಿಲ್ಲಾಡಳಿತ ಮುಂದಾಗಿದೆ ಹಾಗೂ ತಮ್ಮ ಆದೇಶದದ ಅನುಗುಣವಾಗಿ ದಿ.19.07.2017 ರಿಂದ 31.12.2017 ರ ವರೆಗೆ ನಿಷೆಧಿಸಲಾದ ಹೆಚ್ಚಿನ ರೀತಿ ಹೊರಸೂಸುವ ಧ್ವನಿ ವರ್ಧಕಗಳನ್ನು ಈ ದಿನಾಂಕದ ಅವಧಿಯಲ್ಲಿ ನಿಷೇಧಿಸಿರುವುದರಿಂದ ಈ ತಿಂಗಳೊಳಗಡೆ ರಾಷ್ಟೀಯ ಮತ್ತು ಹಿಂದೂ ಸಮಾಜದ ಬಹು ದೊಡ್ಡ ಮತ್ತು ಪವಿತ್ರ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಕರ್ನಾಟಕ ರಾಜ್ಯೋತ್ಸವ, ಗಣೇಶ ಚತುರ್ಥಿ, ದಸರಾ , ದೀಪಾವಳಿ ಹಭ್ಭಗಳು ಸಂಭ್ರಮ ಹಾಗೂ ವೈಭವ ಪೂರ್ವಕವಾಗಿ ಆಚರಿಸಲಾಗುತ್ತಿದೆ. ಸಮಾರಂಭಗಳಲ್ಲಿ ದೇಶ ಭಕ್ತಿ ಗೀತೆ ಹಾಗೂ ವಚನ, ಜಾನಪದ, ಭಾವ ಗೀತೆಗಳ ಹೀಗೆ ಹತ್ತು ಹಲವು ಭಕ್ತಿ ಗೀತೆಗಳನ್ನು ಧ್ವನಿ ವರ್ಧಕಗಳ ಮೂಲಕ ಬಿತ್ತರಿಸಲಾಗುವುದು. ತಮ್ಮ ಧ್ವನಿ ವರ್ಧಕ ನಿಷೇಧದ ಆದೇಶದಿಂದ ಧಾರ್ಮಿಕ ಹಕ್ಕು ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಇಲ್ಲಿಯವರೆಗೆ ಧ್ವನಿ ವರ್ಧಕಗಳ ಬಳಕೆಯಿಂದ ಗರ್ಭಿಣೆಯರಿಗೆ, ವಯೋವೃಧ್ಧರಿಗೆ,       ನವಜಾತ ಶಿಶುಗಳಿಗೆ ಹಾಗೂ ಹೃದಯ ಸಂಭಂಧಿ ರೋಗಿಗಳಿಗೆ ತೊಂದರೆಯಾದ ಇಲ್ಲಿಯವರೆಗೆ ಯಾವುದೇ ಪ್ರಕರಣಗಳಿಲ್ಲ. ಈ ರೀತಿಯ ನಿಷೇಧದ ಆದೇಶಗಳು ಬೇರಾವ ಜಿಲ್ಲೆಗಳಲ್ಲಿ ಇಲ್ಲದೇ ಇರುವುದು ನಮ್ಮ ಜಿಲ್ಲೆಗೇಕೆ? ಕಾರಣ ಹಬ್ಬಗಳ ಹಿನ್ನಲೆಯಲ್ಲಿ ತಮ್ಮ ಆಧೇಶವನ್ನು ಹಿಂಪಡೆದು ಹಿಂದುಗಳು ಭಾವನೆಗಳಿಗೆ ಗೌರವ ನೀಡಲು ಕೋರಿದೆ.ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಾದ.ಈರಣ್ಣ ಕೊಪ್ಪದ. ಶ್ರವಣ ಕುಮಾರ. ಸಂತೊಷ ಲಮಾಣಿ.ರವಿ ಡಿವಟರ.ಮಲ್ಲಿಕಾರ್ಜುನ.ಗೋಪಿ ಸಿಂಗ ರಜಪೂತ್. ಕದಂಮ ಮರಾಠ ಪ್ರಶಾಂತ. ಗಣೇಶ ಹೂಗಾರ.ಇನ್ನೂ ಮುಂತಾದವರು ಇದ್ದರು.

Please follow and like us:
error