ಟ್ರಾಕ್ಟರ್ ಪಲ್ಟಿ ಮಹಿಳೆ ಸಾವು

ಕೊಪ್ಪಳ : ಸಜ್ಜಿ ಹೊಲಕ್ಕೆ ತರಳುತ್ತಿದ್ದವರ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.ಆರು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌
ಕೊಪ್ಪಳದ ಯಲಬುರ್ಗಾ ತಾಲೂಕಿನ ಬೇವೂರು ಹಳ್ಳದಲ್ಲಿ ಘಟನೆ ನಡೆದಿದ್ದು ಶರಣಮ್ಮ (30) ಮೃತ ಮಹಿಳೆ. ಟ್ರ್ಯಾಕ್ಟರ್ ಚಾಲಕನ‌ ಅಜಾಗರೂಕತೆಯಿಂದ ಅಪಘಾತ ನಡೆದಿದೆ. ಸ್ಥಳಕ್ಕೆ ಬೇವೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Please follow and like us:
error