ಟಿಪ್ಪು ಸುಲ್ತಾನ್‌ನ ಶೌರ್ಯ, ಸಾಹಸ, ದಿಟ್ಟತನ ಮಕ್ಕಳಿಗೆ ಮಾದರಿಯಾಗಲಿ – ನಾಗೇಂದ್ರಪ್ಪ


ಕೊಪ್ಪಳ : ನಮ್ಮ ಶಿಕ್ಷಣವು ಮಕ್ಕಳಲ್ಲಿ ನಿಜ ಇತಿಹಾಸದ ಅರಿವನ್ನು ಮೂಡಿಸಬೇಕಿದೆ. ಟಿಪ್ಪು ಎಲ್ಲಿಯೂ ಸಹ ಧರ್ಮಾಂದನಾಗಿ ಕೆಲಸ ಮಾಡಲಿಲ್ಲ. ಕೃಷಿಕರಿಗೆ, ದಲಿತರಿಗೆ, ಮಹಿಳೆಯರಿಗೆ, ದೀನದಲಿತರ ಪರವಾಗಿ ಕೆಲಸ ಮಾಡಿದ ರಾಜ ಟಿಪ್ಪು ಸುಲ್ತಾನ್ ಎಂದು ಅಳವಂಡಿ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ನಾಗೇಂದ್ರಪ್ಪ ಹೇಳಿದರು. ಅವರಿಂದು ಕೊಪ್ಪಳ ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಟಿಪ್ಪು ಸುಲ್ತಾನ್ ತನ್ನ ತಾಯ್ನಾಡಿನ ರಕ್ಷಣೆಗಾಗಿ ತನ್ನ ಮಕ್ಕಳನ್ನೇ ಒತ್ತೆಯಾಗಿಟ್ಟಂತಹ ರಾಜ. ಇಲಿಯಂತೆ ನೂರು ವರ್ಷ ಬಾಳುವುದರ ಬದಲಿಗೆ ಹುಲಿಯಾಗಿ ಒಂದು ದಿನ ಬದುಕಿದರೆ ಸಾಕು ಎನ್ನುವಂತೆ ಶೌರ್ಯದಿಂದ ಬದುಕಿ. ವೀರಾವೇಶದದಿಂದ ತನ್ನ ತಾಯ್ನಾಡಿನ ರಕ್ಷಣೆಗಾಗಿ ಹೋರಾಡಿ ಹುತಾತ್ಮನಾದ . ಯಾವತ್ತೂ ತಾನು ಹಿಡಿದ ಮಾರ್ಗದಿಂದ ಹಿಂದೆ ಸರಿಯಲಿಲ್ಲ. ದೈರ್ಯದಿಂದ ಮುನ್ನುಗ್ಗಿದ. ಮಕ್ಕಳಿಗೆ ಈ ವೀರನ ತ್ಯಾಗ , ಬಲಿದಾನ ಹಾಗೂ ಶೌರ್ಯದ ಪಥಗಳು ಆದರ್ಶವಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ರಾಜು. ಬಿ.ಆರ್ ಮಾತನಾಡಿ ಇತಿಹಾಸವನ್ನು ಅರಿತವರು ಏನನ್ನಾದರೂ ಸಾಧಿಸಬಹುದು. ಮಕ್ಕಳಲ್ಲಿ ಗುರಿ, ಛಲ ಮುಖ್ಯ. ಟಿಪ್ಪು ಸುಲ್ತಾನ್ ಶೂರನಂತೆ ಹೋರಾಡಿದರು ಅವರ ಜೀವನ ಪರ್‍ಯಂತ ಯುದ್ದ ಮಾಡುತ್ತಲೇ ಇದ್ದರು. ಕೊನೆಗೆ ಯುದ್ದಭೂಮಿಯಲ್ಲಿಯೇ ಸಾವನ್ನಪ್ಪಿದ ವೀರ ರಾಜ ಟಿಪ್ಪು ಸುಲ್ತಾನ್ ಕ್ಷಿಪಣಿಗಳ ಜನಕ, ಆಗಿನ ಸಮಯದಲ್ಲಿಯೇ ಹಲವಾರು ಜನಪರವಾದಂತಹ ನಿರ್ಣಯಗಳನ್ನು ಕೈಗೊಂಡು ಜನರಿಗೆ ಪ್ರೀಯವಾದ ರಾಜನಾಗಿದ್ದರು ಎಂದು ಹೇಳಿದರು.
ವೇದಿಕೆಯ ಮೇಲೆ ಶಾಲೆಯ ಮುಖ್ಯೋಪಾಧ್ಯಾಯರಾದ ರೇಣುಕಾ ಅತ್ತನೂರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಆರ್.ಎಚ್.ಅತ್ತನೂರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಾರುತಿ ಎಚ್ ಮಾಡಿದರೆ, ಶ್ರೀಮತಿ ಜಯಶ್ರೀ ಕುಲಕರ್ಣಿ ಸ್ವಾಗತಿಸಿದರೆ ಶ್ರೀಮತಿ ಪೂರ್ಣಿಮಾ ವಂದಿಸಿದರು.

Please follow and like us:
error