ಟಿಪ್ಟು ಸುಲ್ತಾನ ದೇಶಕಂಡ ಮಹಾನ್ ಸ್ವತಂತ್ರ ಸೇನಾನಿ-ಶಾಸಕ ಕೆ.ರಾಘವೇಂದ್ರಹಿಟ್ನಾಳ

ಇಂದು ಬಹದ್ದೂರ ಬಂಡಿಯಲ್ಲಿ ಹಜರತ ಟಿಪ್ಪು ಸುಲ್ತಾನರವರ ೨೬೭ನೇ ಜಯಂತಿಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಮೈಸೂರ ಅರಸರಲ್ಲಿ ಅತ್ಯಂತ ಪ್ರಭಾವಶಾಲಿ ರಾಜನಾದ ಟಿಪ್ಪು ಸುಲ್ತಾನ ಬ್ರೀಟಿಷರ ವಿರುದ್ಧ ದೇಶಕ್ಕಾಗಿ ಹೋರಾಡಿದ ಮಹಾನ್ ಸೇನಾನಿಯಾಗಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ರಾಜ್ಯದ ಎಲ್ಲಾ ಜನರಿಗೂ ಸಮಾನ ಹಕ್ಕು ನೀಡಿದ ಶ್ರೇಯಸ್ಸು ಟಿಪ್ಪು ಸುಲ್ತಾನರವರಿಗೆ ಸಲ್ಲುತ್ತದೆ ವಿಶೇಷವಾಗಿ ದಲಿತರಿಗೆ ಭೂಮಿ ನೀಡಿದ ಟಿಪ್ಪು ಸುಲ್ತಾನರವರು ನೀರಾವರಿ ಯೋಜನೆಗಳಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಹೆಚ್ಚು ಒತ್ತು ನೀಡಿದ್ದರು. 

ಸರ್ವಧರ್ಮಗಳ ಹಿತ ಚಿಂತಕರಾದ ಟಿಪ್ಪುರವರು ಯುದ್ಧದಲ್ಲಿ ಬಳಸುವ ಮಿಸೈಲ್‌ಗಳನ್ನು ಪ್ರಥಮ ಬಾರಿಗೆ ಸಿದ್ದಗೊಳಿಸಿದ ದೀಮಂತ ರಾಜ ಟಿಪ್ಪು ಸುಲ್ತಾನ  ಆಂಗ್ಲೋ-ಮೈಸೂರ ಯುದ್ಧದಲ್ಲಿ ಬ್ರಿಟಿಷರನ್ನು ಸೆದೆ ಬಡೆದ ಧೀರ ರಾಜ ಟಿಪ್ಪುರವರು ನಮ್ಮವರ ಕುತಂತ್ರದಿಂದ ಯುದ್ಧದಲ್ಲಿ ಸೋಲು ಅನುಭವಿಸಿ ತಮ್ಮ ಎರಡು ಗಂಡು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಉದಾಹರಣೆ ನಮ್ಮ ದೇಶದ ಇತಿಹಾಸದಲ್ಲಿ ಕಂಡು ಬರುವುದಿಲ್ಲ. ಇವರ ದೇಶ ಪ್ರೇಮದ ಅಪಾರ ಕೊಡುಗೆಯಾಗಿದೆ. ಕೆಲವರು ಇಂದು ಇತಿಹಾಸವನ್ನು ಮರೆಮಾಚಿ ಸಮಾಜದಲ್ಲಿ ಅಶಾಂತಿ ಉಂಟುಮಾಡುರುತ್ತಿರುವುದು ಅತ್ಯಂತ ಹೇಯ ಕೃತ್ಯವೆಂದು ಬಿಜೆಪಿ ನಾಯಕರನ್ನು ಕಟುವಾಗಿ ಠೀಕಿಸಿದರು.  ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ನಗರಸಭಾ ಸದಸ್ಯ ಮುತ್ತುರಾಜ ಕುಷ್ಟಗಿ, ಅಮ್ಜದ ಪಟೇಲ್, ಎಪಿಎಂಸಿ ಸದಸ್ಯ ಜಡಿಯಪ್ಪ ಬಂಗಾಳಿ, ಮುಖಂಡರುಗಳಾದ ಕಾಟನ ಪಾಷಾ, ಚಾಂದ ಪಾಷಾ ಕಿಲ್ಲೆದಾರ, ನಜೀರ ಮುದಗಲ್, ಬಾಬು ಸಾಬ ಹಾದರಮಗ್ಗಿ, ಸಯ್ಯದಸಾಬ ಕಿಲ್ಲೆದಾರ, ಯಮನೂರಸಾಬ ಹಿರೇಮಸೂತಿ, ಶಿವಣ್ಣ ಗ್ಯಾನಪ್ಪನವರ, ಪ್ರಾಣೇಶ ಕುರಿ, ಪ್ರಭು ಹಡಪದ, ರಾಮನಗೌಡ್ರ ಹ್ಯಾಟಿ, ಬಸಪ್ಪ ಹೂವಿನಾಳ, ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error