fbpx

ಟಾಟಾ ಏಸ್ ಪಲ್ಟಿ; ಮದುವೆ ಮಾತುಕತೆಗಾಗಿ ಹೊರಟಿದ್ದ ವೃದ್ಧೆ ಸಾವು

ಕೊಪ್ಪಳ: ತಾಲೂಕಿನ ಬಿಸರಳ್ಳಿ ಸಮೀಪ ಟಾಟಾ ಏಸ್ ಪಲ್ಟಿಯಾಗಿ ವೃದ್ಧೆ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.

ಮೃತ ವೃದ್ಧೆಯನ್ನು ಹನಕುಂಟಿ ಗ್ರಾಮದ ಹನುಮವ್ವ ರಾಮನಗೌಡ್ರ (70) ಎಂದು ಗುರುತಿಸಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನುಳಿದ ಆರು ಜನರನ್ನು ಹಿರೇಸಿಂಧೋಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.

ಮದುವೆ ಮಾತುಕತೆಗಾಗಿ ಹನಕುಂಟಿಯಿಂದ ಚಿಲವಾಡಗಿ ಗ್ರಾಮಕ್ಕೆ ಟಾಟಾ ಏಸ್‌ನಲ್ಲಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನ ತಗ್ಗಿಗೆ ಬಿದ್ದು ಪಲ್ಟಿಯಾಗಿ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Please follow and like us:
error
error: Content is protected !!